ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಹತ್ತಾರು ಹೊಸ ದಾಖಲೆ ನಿರ್ಮಾಣ ಮಾಡಿರುವ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಪ್ರೇಕ್ಷಕರಿಗೆ ಇದೀಗ ಮತ್ತೊಂದು ಗುಡ್ನ್ಯೂಸ್ ನೀಡಿದೆ. ಈ ಚಿತ್ರವನ್ನ ಅಮೆಜಾನ್ ಪ್ರೈಮ್ನಲ್ಲೂ ವೀಕ್ಷಣೆ ಮಾಡಲು ಅವಕಾಶ ಮಾಡಿ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಮೆಜಾನ್ ಪ್ರೈಮ್ ಮಹತ್ವದ ಘೋಷಣೆ ಮಾಡಿದೆ.
ಅಮೆಜಾನ್ ಪ್ರೈಮ್ನಲ್ಲಿ ರೆಂಟಲ್ ಬೇಸಸ್ ಆಧಾರದ ಮೇಲೆ ಕೆಜಿಎಫ್ 2 ಸಿನಿಮಾ ವೀಕ್ಷಣೆ ಮಾಡಬಹುದಾಗಿದ್ದು, ಅದಕ್ಕಾಗಿ 199 ರೂಪಾಯಿ ಹಣ ಸಂದಾಯ ಮಾಡಬೇಕಾಗುತ್ತದೆ. ಸದ್ಯ ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಲಭ್ಯ ಇದೆ.
-
thrill ×2 | craziness ×2 | K.G.F ×2 💥#EarlyAccessOnPrime, rent now pic.twitter.com/FDtYdtro0l
— amazon prime video IN (@PrimeVideoIN) May 16, 2022 " class="align-text-top noRightClick twitterSection" data="
">thrill ×2 | craziness ×2 | K.G.F ×2 💥#EarlyAccessOnPrime, rent now pic.twitter.com/FDtYdtro0l
— amazon prime video IN (@PrimeVideoIN) May 16, 2022thrill ×2 | craziness ×2 | K.G.F ×2 💥#EarlyAccessOnPrime, rent now pic.twitter.com/FDtYdtro0l
— amazon prime video IN (@PrimeVideoIN) May 16, 2022
ಚಿತ್ರ ವೀಕ್ಷಣೆ ಮಾಡುವುದು ಹೇಗೆ?: ಅಮೆಜಾನ್ ಪ್ರೈಮ್ ಅಪ್ಲಿಕೇಶನ್ನಲ್ಲಿ primevideo.com ನಲ್ಲಿ ಸ್ಟೋರ್ ಟ್ಯಾಬ್(STORE)ನಲ್ಲಿ ಈ ಚಿತ್ರ ಲಭ್ಯವಿದೆ. ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ ಬಳಕೆ ಮಾಡುವವರು ಈ ಚಿತ್ರ ವೀಕ್ಷಣೆ ಮಾಡಬಹುದಾಗಿದೆ. ಹಣ ಸಂದಾಯ ಮಾಡಿದ 48 ಗಂಟೆಯೊಳಗೆ ಕೆಜಿಎಫ್ 2 ಸಿನಿಮಾ ನೋಡ ಬಹುದಾಗಿದೆ.
ಅಮೆಜಾನ್ ಪ್ರೈಮ್ ಸದಸ್ಯರಲ್ಲದವರಿಗೂ ಸಿನಿಮಾ ನೋಡುವ ಅವಕಾಶ: ಅಮೆಜಾನ್ ಪ್ರೈಮ್ನಲ್ಲಿ ಚಂದಾದಾರರಿಗೆ ಮಾತ್ರ ಸಿನಿಮಾ ವೀಕ್ಷಣೆ ಮಾಡುವ ಅವಕಾಶವಿದೆ. ಆದರೆ, ಕೆಜಿಎಫ್ 2 ಸಿನಿಮಾ ರೆಂಟಲ್ ಬೇಸಸ್ ಆಧಾರದಲ್ಲಿ ಲಭ್ಯವಿರುವ ಕಾರಣ ಇದಕ್ಕೆ ಅಮೆಜಾನ್ ಪ್ರೈಮ್ ಸದಸ್ಯರಾಗುವ ಅಗತ್ಯವಿಲ್ಲ.
ಏ. 14ರಂದು ಪ್ರಪಂಚದಾದ್ಯಂತ ತೆರೆ ಕಂಡಿರುವ ಕೆಜಿಎಫ್ 2 ಚಿತ್ರ ಈಗಾಗಲೇ ಸಾವಿರ ಕೋಟಿ ರೂ.ಗೂ ಅಧಿಕ ಹಣ ಗಳಿಕೆ ಮಾಡಿದೆ. ಈ ಚಿತ್ರದಲ್ಲಿ ನಟ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್, ಅಚುತ್ ಕುಮಾರ್ ಸೇರಿದಂತೆ ಅನೇಕರು ನಟನೆ ಮಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ನಿತ್ಯ ಒಂದಿಲ್ಲೊಂದು ಹೊಸ ದಾಖಲೆ ನಿರ್ಮಾಣ ಮಾಡ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಫ್ಟರ್ 2 ಈಗಾಗಲೇ ಹಿಂದಿ ಅವತರಣಿಕೆಯಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿರುವ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ.