ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದ ಕೆಜಿಎಫ್ 2 ಕಳೆದ ಏಪ್ರಿಲ್ 14ರಂದು ಬಿಡುಗಡೆ ಆಯಿತು. ಇನ್ನೇನು ಕೆಲ ದಿನಗಳಲ್ಲಿ ವರ್ಷ ಪೂರೈಸಲಿದೆ ಸ್ಯಾಂಡಲ್ವುಡ್ನ ಸೂಪರ್ ಹಿಟ್ ಚಿತ್ರ. ಆದ್ರೆ 'ರಾಕಿಂಗ್ ಸ್ಟಾರ್ 19' ಸಿನಿಮಾ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಯಶ್ ಅವರ ಮುಂದಿನ ಚಿತ್ರ ಯಾವುದು?, ಯಾವ ನಿರ್ದೇಶಕರ ಜೊತೆ ಕೈ ಜೋಡಿಸಲಿದ್ದಾರೆ? ಯಾವ ನಿರ್ಮಾಣ ಸಂಸ್ಥೆ ಈ ಸ್ಟಾರ್ ನಟನ ಚಿತ್ರ ನಿರ್ಮಿಸಲಿದೆ? ನಾಯಕ ನಟಿ ಯಾರು? ಬಜೆಟ್ ಯಾವ ಮಟ್ಟಿಗೆ ಇರಬಹುದು? ಹೀಗೆ ಹಲವು ಪ್ರಶ್ನೆಗಳು ಪ್ರೇಕ್ಷಕ ಪ್ರಭುಗಳಲ್ಲಿದೆ. ಕೆಲ ಅಂತೆ ಕಂತೆಗಳು ಬಂದು ಹೋಗಿದ್ದರೂ ಅಧಿಕೃತ ಘೋಷಣೆ ಆಗಿಲ್ಲ. ಈ ಹೊತ್ತಲ್ಲಿ ಮತ್ತೊಂದು ಅಪ್ಡೇಟ್ ಸಿಕ್ಕಿದ್ದು, ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿದೆ.
-
Yes… #AskDilRaju https://t.co/8Hm6ZG9Thr
— Sri Venkateswara Creations (@SVC_official) April 5, 2023 " class="align-text-top noRightClick twitterSection" data="
">Yes… #AskDilRaju https://t.co/8Hm6ZG9Thr
— Sri Venkateswara Creations (@SVC_official) April 5, 2023Yes… #AskDilRaju https://t.co/8Hm6ZG9Thr
— Sri Venkateswara Creations (@SVC_official) April 5, 2023
ಮುಂದಿನ ದಿನಗಳಲ್ಲಿ ನಟ ಯಶ್ ಅವರು ತೆಲುಗಿನ ದಿಲ್ ರಾಜು ಬ್ಯಾನರ್ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ. ಅದು ಮುಂದಿನ ಸಿನಿಮಾವೇ? ಅಥವಾ ಕೆಲ ಚಿತ್ರಗಳ ಬಳಿಕ ದಿಲ್ ರಾಜು ಅವರ ಜೊತೆ ಕೈ ಜೋಡಿಸಲಿದ್ದಾರೆ ಎಂಬುದು ಮಾತ್ರ ಖಚಿತವಾಗಿಲ್ಲ. ಇತ್ತೀಚೆಗೆ ಅಭಿಮಾನಿಗಳೊಂದಿಗೆ #askdilraju ಸೆಶನ್ ನಡೆಸಿದರು. ಅಭಿಮಾನಿಯೋರ್ವರು ರಾಕಿಂಗ್ ಸ್ಟಾರ್ ಯಶ್ ಜೊತೆ ಸಿನಿಮಾ ನಿರೀಕ್ಷಿಸಬಹುದೇ? ಎಂದು ನೆಟ್ಟಿಗರೋರ್ವರು ಪ್ರಶ್ನಿಸಿದ್ದಾರೆ. ಅದಕ್ಕೆ ದಿಲ್ ರಾಜು 'ಹೌದು' ಎಂದು ಉತ್ತರಿಸಿದ್ದು, ಹೆಚ್ಚೇನು ಮಾಹಿತಿ ಹಂಚಿಕೊಂಡಿಲ್ಲ. ಈ ಬಗ್ಗೆ ಯಶ್ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.
ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಮತ್ತು ಸಂಸ್ಥೆಯ ಮುಖ್ಯಸ್ಥ ದಿಲ್ ರಾಜು ತೆಲುಗು ಚಿತ್ರರಂಗದಲ್ಲಿ ವಿಶಿಷ್ಟ ಗುರುತನ್ನು ಹೊಂದಿದ್ದಾರೆ. ಈ ಬ್ಯಾನರ್ ಅಡಿ ಹೊಸ ಸಿನಿಮಾಗಳು ಬರುತ್ತಿದೆ. ವಿತರಕರಾಗಿ ವೃತ್ತಿ ಜೀವನ ಆರಂಭಿಸಿದ ದಿಲ್ ರಾಜು 'ದಿಲ್' ಚಿತ್ರದ ಮೂಲಕ ನಿರ್ಮಾಪಕರಾದರು. 20 ವರ್ಷಗಳ ಹಿಂದೆ (2003, ಏಪ್ರಿಲ್ 4) ದಿಲ್ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆದ್ದಿತ್ತು. ಅಂದಿನಿಂದ ನಿರ್ಮಾಪಕ ದಿಲ್ ರಾಜು ಅವರು ತಮ್ಮ ಕಂಪನಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿ ಹಲವು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಹಲವು ಚಿತ್ರಗಳು ಹಿಟ್ ಸಾಲಿಗೆ ಸೇರಿವೆ. ಗೋಲ್ಡನ್ ಲೆಗ್ ನಿರ್ಮಾಪಕ ಎಂದು ಖ್ಯಾತಿ ಗಳಿಸಿದ್ದಾರೆ. 20 ವರ್ಷಗಳಲ್ಲಿ 50 ಚಲನಚಿತ್ರಗಳನ್ನು ನಿರ್ಮಿಸಿದ ಕೀರ್ತಿ ಇವರದ್ದು.
ಇದನ್ನೂ ಓದಿ: ರಾಮ್ ಚರಣ್ ಪತ್ನಿ ಉಪಾಸನಾ ಸೀಮಂತ: ದುಬೈನ ಸಮುದ್ರತೀರದಲ್ಲಿ ಅದ್ಧೂರಿ ಸಮಾರಂಭ
ಆಸ್ಕ್ ಮಿ ಎನಿಥಿಂಗ್ ಸೆಶನ್ನಲ್ಲಿ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೇ ವೇಳೆ, ಯಶ್ ಅವರ ಸಿನಿಮಾ ನಿರ್ಮಿಸುವುದಾಗಿ ತಿಳಿಸಿದ್ದಾರೆ. ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೊಂದು ಪ್ರಶ್ನೆಯಲ್ಲಿ ಬಾಲಕೃಷ್ಣ ಅವರ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ಮುಂದೆ ಪ್ರಭಾಸ್, ಜೂ. ಎನ್ಟಿಆರ್, ನಾನಿ, ರವಿತೇಜ ಮತ್ತು ಯಶ್ ಅವರ ಜೊತೆ ಸಿನಿಮಾ ಮಾಡಲಿದ್ದೇನೆ ಎಂದು ಸುಳಿವು ಬಿಟ್ಟುಕೊಟ್ಟರು. ಬೊಮ್ಮರಿಲ್ಲು ಚಿತ್ರ ನನಗೆ ತುಂಬಾ ಇಷ್ಟ ಎಂದು ತಿಳಿಸಿದರು. ಇನ್ನು ಶಾಕುಂತಲಂ ಚಿತ್ರದಲ್ಲಿ ಸಮಂತಾ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪದ್ಮ ಪ್ರಶಸ್ತಿ ಪ್ರದಾನ: ಪದ್ಮಭೂಷಣ ಸ್ವೀಕರಿಸಿದ ಸುಧಾಮೂರ್ತಿ, ಎಸ್.ಎಲ್ ಭೈರಪ್ಪ
ಯಶ್ ಆಪ್ತರ ಪ್ರಕಾರ, ಯಶ್ ಅವರು 19ನೇ ಸಿನಿಮಾ ಮೊದಲು ಮಾಡ್ತಾರೆ. ಆಮೇಲೆ ದಿಲ್ ರಾಜು ನಿರ್ಮಾಣದಲ್ಲಿ 20ನೇ ಸಿನಿಮಾ ಮಾಡ್ತಾರೆ. ಹೀಗಾಗಿ ಯಶ್ 19ನೇ ಸಿನಿಮಾದ ಕುರಿತು ಚರ್ಚೆ ಜೋರಾಗಿದೆ. ಇನ್ನೂ ಈ ಹಿಂದೆ ಯಶ್ ಮುಂದಿನ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಲಿದೆ ಅನ್ನೋ ಸುದ್ದಿ ಸದ್ದು ಮಾಡಿತ್ತು. ಆದರೆ, ಈಗ ಯಶ್ ತಾವೇ ನಿರ್ಮಾಪಕರು ಆಗ್ತಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡ್ತಿದೆ. ಒಟ್ಟಾರೆ ಸಿನಿಮಾ ಅನೌನ್ಸ್ ಮಾಡಿ ಅಂತಾ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ರಾಕಿ ಭಾಯ್ ಉತ್ತರ ಕೋಡಬೇಕಿದೆ.