ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಮತ್ತು ಕ್ರಿಕೆಟ್ ಸಂಬಂಧ ತುಂಬಾ ಹಳೆಯದು. ಇದೀಗ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮತ್ತು ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರ ಡೇಟಿಂಗ್ ಸುದ್ದಿ ಎರಡೂ ಕ್ಷೇತ್ರದಲ್ಲಿ ಗುಲ್ಲೆಬ್ಬಿಸಿದೆ. ಆದರೆ, ಸುಶ್ಮಿತಾ ಅವರ ಕುಟುಂಬಸ್ಥರು ಮಾತ್ರ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ನುಣುಚಿಕೊಂಡಿದ್ದಾರೆ.
2 ದಿನಗಳ ಹಿಂದಷ್ಟೇ ಲಲಿತ್ ಮೋದಿ ಅವರು ಟ್ವೀಟ್ ಮಾಡಿ ತಾವು ಸುಂದರಿ ಸುಶ್ಮಿತಾ ಅವರೊಂದಿಗೆ ಡೇಟಿಂಗ್ನಲ್ಲಿದ್ದೇನೆ ಎಂದು ಫೋಟೋ ಸಮೇತ ಘೋಷಿಸಿದ್ದರು. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಸುಶ್ಮಿತಾರ ತಂದೆ, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯಾದ ಶುಬೀರ್ ಸೇನ್ ಅವರು, ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
- " class="align-text-top noRightClick twitterSection" data="
">
"ಈ ಬೆಳವಣಿಗೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸುಶ್ಮಿತಾ ಜತೆ ನಾನು ಕರೆ ಮಾಡಿ ಮಾತನಾಡಿದ್ದೇನೆ. ಈ ಬಗ್ಗೆ ಅವರು ನನಗೆ ಏನನ್ನೂ ಹೇಳಲಿಲ್ಲ. ಲಲಿತ್ ಮೋದಿ ಅವರ ಟ್ವೀಟ್ ಬಳಿಕ ಮಾಧ್ಯಮಗಳಿಂದ ನಾನು ವಿಷಯ ಅರಿತಿದ್ದೇನೆ" ಎಂದು ಹೇಳಿದರು.
"ಈಗ ಹರಡಿರುವ ಸುದ್ದಿ ನಿಜವಾದಲ್ಲಿ ಮಗಳ ಜೀವನದಲ್ಲಿ ಮಹತ್ವದ ತಿರುವು ಆಗಲಿದೆ. ಭವಿಷ್ಯದಲ್ಲಿ ಈ ಬಗ್ಗೆ ಎಲ್ಲರಿಗೂ ಮಾಹಿತಿ ಸಿಗಲಿದೆ. ಒಂದೂವರೆ ವರ್ಷದ ಹಿಂದೆ ಕುಟುಂಬ ಸಮಾರಂಭದಲ್ಲಿ ಲಲಿತ್ ಮೋದಿ ಭಾಗವಹಿಸಿದ್ದರು. ಅದಾದ ಬಳಿಕ ಯಾವ ವಿಚಾರಗಳು ತಮಗೆ ಗೊತ್ತಿಲ್ಲ" ಎಂದರು.
ಓದಿ: ಆಪ್ತ ಸ್ನೇಹಿತ ಆದಿತ್ಯ ರಾಯ್ ಕಪೂರ್ ಕೆನ್ನೆಗೆ ಚುಂಬಿಸಿದ ರಣ್ಬೀರ್ ಕಪೂರ್