ಕನ್ನಡ ಚಿತ್ರರಂಗದಲ್ಲಿ ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಡುವೆ ವಿಶಿಷ್ಟ ಪ್ರೇಮಕಥೆ ಆರಂಭವಾಗಿದೆ ಅಂತಾ ಮಾತುಗಳು ಕೇಳಿ ಬಂದಿದ್ದವು. ಕೆಲ ದಿನಗಳ ಹಿಂದೆ ದುಬೈ ಪ್ರವಾಸವನ್ನು ಮುಗಿಸಿಕೊಂಡು ಇಬ್ರು ಜೊತೆಯಲ್ಲಿ ಬಂದಿದ್ದರು. ಕೈ ಕೈ ಹಿಡಿದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿ ತಾವಿಬ್ಬರು ಲವರ್ಸ್ ಅಂತಾ ಸುಳಿವು ನೀಡಿದರು.
ದುಬೈನಿಂದ ಬರ್ತಾ ಇದ್ದಂಗೆ ವಸಿಷ್ಠ ಮತ್ತು ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಹೊರ ಬಿದ್ದಿದೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಅಂತಾ ಕರೆಯಿಸಿಕೊಂಡಿರುವ ಡಾಲರ್ಸ್ ಕಾಲೋನಿಯಲ್ಲಿರುವ ನಟಿ ಮನೆಯಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಸ್ವತಃ ನಟಿ ಹರಿಪ್ರಿಯ ಅವರೇ ತಮ್ಮ ಹಾಗೂ ವಸಿಷ್ಠ ಸಿಂಹ ಜೊತೆಗಿನ ಸಂಬಂಧವನ್ನು ವಿಶೇಷವಾಗಿ ಖಚಿತಪಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ನಟಿ ಹರಿಪ್ರಿಯ, ಸಿಂಹದ ಮಡಿಲಲ್ಲಿ ಮಲಗಿರುವ ಮಗುವಿನ ಫೋಟೋದ ಜೊತೆ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಬರೆದುಕೊಂಡಿದ್ದಾರೆ.
-
ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!❤️ pic.twitter.com/Q9SIzlqMEn
— HariPrriya (@HariPrriya6) December 2, 2022 " class="align-text-top noRightClick twitterSection" data="
">ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!❤️ pic.twitter.com/Q9SIzlqMEn
— HariPrriya (@HariPrriya6) December 2, 2022ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!❤️ pic.twitter.com/Q9SIzlqMEn
— HariPrriya (@HariPrriya6) December 2, 2022
ಸ್ವತಃ ಹರಿಪ್ರಿಯ ಅವರೇ ಈ ಪೋಸ್ಟ್ ಹಾಕಿರುವುದರಿಂದ ಇಷ್ಟು ದಿನ ಹಬ್ಬಿದ ಸುದ್ದಿಗೆ ಖಚಿತತೆ ಸಿಕ್ಕಿದೆ. ಹರಿಪ್ರಿಯ ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್‌ನಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
ಹರಿಪ್ರಿಯಾ ಹಾಗು ವಸಿಷ್ಠ ಸಿಂಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೆಲವೇ ಕೆಲ ಆಪ್ತರು ಮತ್ತು ಕುಟುಂಬದವರು ಭಾಗಿಯಾಗಿದ್ದರು. ಈ ನವ ಜೋಡಿಗೆ ಶುಭ ಹಾರೈಸಿದರು ಅನ್ನುವುದು ಸದ್ಯದ ಲೇಟೆಸ್ಟ್ ಸಮಾಚಾರ. ಮುಂದಿನ ವರ್ಷದ ಆರಂಭದಲ್ಲಿ ವಸಿಷ್ಠ-ಪ್ರಿಯಾ ಮದುವೆ ನೇರವೇರಲಿದೆ ಅಂತಾ ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಓದಿ: ಹರಿಪ್ರಿಯಾ - ವಸಿಷ್ಠ ಸಿಂಹ ನಿಶ್ಚಿತಾರ್ಥ.. ಆಪ್ತರ ಸಮ್ಮುಖದಲ್ಲಿ ನಡೆಯಿತು ಸಮಾರಂಭ