ETV Bharat / entertainment

ಕೇದಾರನಾಥ ದೇವಾಲಯಕ್ಕೆ ಭೇಟಿ ಕೊಟ್ಟ ಅಕ್ಷಯ್​ ಕುಮಾರ್​​: ಮಹಾದೇವನ ದರ್ಶನ ಪಡೆದ ನಟ - ETV Bharath Kannada news

ಒಟ್ಟಿಗೆ ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿರುವ ಅಕ್ಷಯ್​ ಕುಮಾರ್​ ಚಿತ್ರೀಕರಣಕ್ಕೆ ಬಿಡುವು ಮಾಡಿಕೊಂಡು, ಕೇದಾರನಾಥಕ್ಕೆ ಭೇಟಿ ಕೊಟ್ಟಿದ್ದಾರೆ.

ಕೇದಾರನಾಥ ದೇವಾಲಯಕ್ಕೆ ಭೇಟಿ ಕೊಟ್ಟ ಅಕ್ಷಯ್​ ಕುಮಾರ್​​: ಮಹಾದೇವನ ದರ್ಶನ ಪಡೆದ ನಟ
Watch: Akshay Kumar offers prayer at Kedarnath temple, chants bam bam bhole
author img

By

Published : May 23, 2023, 8:44 PM IST

ಇತ್ತೀಚೆಗಷ್ಟೇ ಸೆಲ್ಫಿಯಲ್ಲಿ ಇಮ್ರಾನ್ ಹಶ್ಮಿ ಜೊತೆ ಕಾಣಿಸಿಕೊಂಡಿದ್ದ ಅಕ್ಷಯ್ ಕುಮಾರ್, ಸದ್ಯಕ್ಕೆ ತಮ್ಮ ಮುಂಬರುವ ಚಿತ್ರ ಬಡೇ ಮಿಯಾನ್ ಚೋಟೆ ಮಿಯಾನ್ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಚಿತ್ರದಲ್ಲಿ ಟೈಗರ್ ಶ್ರಾಫ್ ಜೊತೆಗೆ, ಸೋನಾಕ್ಷಿ ಸಿನ್ಹಾ ಮತ್ತು ಪೃಥ್ವಿರಾಜ್ ಸುಕುಮಾರನ್ ಮಹತ್ವದ ಪಾತ್ರ ವಹಿಸಿದ್ದಾರೆ. ಅಕ್ಷಯ್ ಕುಮಾರ್​ ಇಂದು ಮುಂಜಾನೆ ತಮ್ಮ ಬ್ಯೂಸಿ ಶೂಟಿಂಗ್ ಶೆಡ್ಯೂಲ್​ನ ನಡುವೆ ಕೊಂಚ ವಿರಾಮ ತೆಗೆದುಕೊಂಡು ಕೇದಾರನಾಥಕ್ಕೆ ಭೇಟಿಕೊಟ್ಟಿದ್ದಾರೆ. ಅಕ್ಷಯ್​ ಕೇದಾರನಾಥ ದೇವಾಲಯದಲ್ಲಿ ದರ್ಶನ ಪಡೆದು ಹೊರಬರುತ್ತಿರುವ ವಿಡಿಯೋ ಟ್ವಿಟರ್​ನಲ್ಲಿ ಹರಿದಾಡುತ್ತಿದೆ.

ಅಕ್ಷಯ್ ಅವರು ಪವಿತ್ರ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಾಲಯಗಳಿಗೆ ಅಕ್ಷಯ್​ ಕುಮಾರ್​ ಆಗಾಗ ಭೇಟಿ ಕೊಡುತ್ತಿರುತ್ತಾರೆ. ದೇವಾಲಯಕ್ಕೆ ಭೇಟಿ ನೀಡಿದ ಅಕ್ಷಯ್​ ಕುಮಾರ್​ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸುತ್ತುವರೆದಿದ್ದಾರೆ. ಈ ಸಮಯದಲ್ಲಿ ಅವರು ಅಭಿಮಾನಿಗಳಿಗೆ ಫೋಟೋಗೆ ಫೋಸ್​ ಕೊಟ್ಟಿದ್ದಾರೆ. ಈಗ ಈ ದೃಶ್ಯ ಸಾಮಾಜಿಕ ಜಾತಾಣದಲ್ಲಿ ಹೆಚ್ಚು ವೈರಲ್​ ಆಗಿದೆ. ಅಕ್ಷಯ್​ ಕುಮಾರ್​ ಜೊತೆ ರಕ್ಷಣಾ ಸಿಬ್ಬಂದಿ ಇದ್ದರೂ ಸ್ಟಾರ್​ ನಟನನ್ನು ಕಂಡಾಗ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ. ಈ ವೇಳೆ, ಅಕ್ಷಯ್​ ಅವರು​ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

ವೈರಲ್ ವೀಡಿಯೋದಲ್ಲಿ, ಕಪ್ಪು ಟೀ ಶರ್ಟ್​ನಲ್ಲಿ ಕಂಡುಬಂದಿರುವ ನಟ, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ, ಹಣೆಯ ಮೇಲೆ ತಿಲಕವನ್ನು ಇಟ್ಟು ಕೊಂಡಿರುವುದನ್ನು ಕಾಣಬಹುದುದಾಗಿದೆ. ದೇವಾಲಯದಿಂದ ಹೊರ ಬಂದು ಕೈ ಮುಗಿದು ಹರ ಹರ ಮಹಾದೇವ್​ ಎಂದು ಅಭಿಮಾನಿಗಳೆಡೆಗೆ ಘೋಷಣೆ ಕೂಗಿದ್ದಾರೆ. ಅಲ್ಲಿ ಸೇರಿದ್ದ ಜನರೂ ರಾಮ್​ ಸೇತು ನಟನ ಜೊತೆಗೆ ಶಿವ ನಾಮ ಸ್ಮರಣೆ ಮಾಡಿದ್ದಾರೆ.

ಅಕ್ಷಯ್​ ಕುಮಾರ್​ ಅವರು ತಾವು ಇಂದು ದೇವಾಲಕ್ಕೆ ಭೇಟಿ ನೀಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋವನ್ನು ಶೇರ್​ ಮಾಡಿಕೊಂಡಿದ್ದು,"ಜೈ ಬಾಬಾ ಭೋಲೆನಾಥ್" ಅದಕ್ಕೆ ಕ್ಯಾಪ್ಶನ್​ ನೀಡಿದ್ದಾರೆ. ಅವರ ಚಿತ್ರದ ಬಗ್ಗೆ ನೋಡುವುದಾದರೆ, ಟೈಗರ್ ಶ್ರಾಫ್ ಜೊತೆಗೆ ಅಕ್ಷಯ್​ ಇತ್ತೀಚೆಗೆ ಸ್ಕಾಟ್ಲೆಂಡ್‌ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಅಕ್ಷಯ್​ ಕುಮಾರ್ ಸಣ್ಣ ಪುಟ್ಟ ಗಾಯವಾಗಿರುವ ಬಗ್ಗೆ ವರದಿಯಾಗಿತ್ತು, ಸದ್ಯ ಚೇತರಿಸಿಕೊಂಡಿರುವ ನಟ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಆಕ್ಷನ್ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಅವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಅಕ್ಷಯ್ ಮತ್ತು ಟೈಗರ್ ಚಿತ್ರೀಕರಣದಿಂದ ಹಿಂತಿರುಗಿದಾಗ ನಂತರ ಅವರು ತಮ್ಮ ಚಲನಚಿತ್ರದ ಪರಿಷ್ಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದರು. ಬಡೇ ಮಿಯಾನ್ ಚೋಟೆ ಮಿಯಾನ್‌ನ ಹೊಸ ಬಿಡುಗಡೆಯ ದಿನಾಂಕ ಈದ್ 2024 ಎಂದು ತಿಳಿಸಿದ್ದಾರೆ. ನೂತನ ಬಿಡುಗಡೆ ದಿನಾಂಕದ ಚಲನಚಿತ್ರದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. "ಈದ್ 2024 ರಂದು ಚಲನಚಿತ್ರದಲ್ಲಿ ಸಿಗೋಣ" ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಅಕ್ಷಯ್ ಬಡೇ ಮಿಯಾನ್ ಚೋಟೆ ಮಿಯಾನ್ ಜೊತೆಗೆ ಓ ಮೈ ಗಾಡ್ 2, ಕ್ಯಾಪ್ಸುಲ್ ಗಿಲ್ ಮತ್ತು ಹೇರಾ ಫೆರಿ 3 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಚಿತ್ರಮಂದಿರದಲ್ಲಿ ಮೆಚ್ಚುಗೆ ಪಡೆದ ಪಚುವುಮ್ ಅದ್ಭುತ ವಿಲಕ್ಕುಮ್​ ಇದೇ 26 ರಿಂದ ಒಟಿಟಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.