ಹೈದರಾಬಾದ್: ಸಿನಿಮಾ ಸ್ಟಾರ್ಗಳು ಎಂದಾಕ್ಷಣ ನಮ್ಮ ಮನದಲ್ಲಿ ಮೂಡಿ ಬರೋದು ಅವರ ಅದ್ಧೂರಿ ಲೈಫ್ಸ್ಟೈಲ್. ಪ್ರಮುಖವಾಗಿ ಸಾವಿರಾರು, ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ, ಶೋ ಹಾಕಿಕೊಳ್ಳುತ್ತಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ದುಬಾರಿ ಬೆಲೆಯ ಡ್ರೆಸ್, ಶೂ ಧರಿಸಿ ಬರುತ್ತಾರೆ. ಆದರೆ, ಲೈಗರ್ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ವಿಜಯ್ ದೇವರಕೊಂಡ ತುಂಬಾ ಸರಳವಾಗಿ ಕಾಣಿಸಿಕೊಂಡು, ಎಲ್ಲರ ಗಮನ ಸೆಳೆದಿದ್ದಾರೆ.
- " class="align-text-top noRightClick twitterSection" data="
">
ಕಪ್ಪು ಟೀ ಶರ್ಟ್, ಬ್ರೌನ್ ಪ್ಯಾಂಟ್ ಹಾಕಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದ ಈ ನಟ ಕೇವಲ 199 ರೂಪಾಯಿ ಮೌಲ್ಯದ ಹವಾಯಿ ಚಪ್ಪಲಿ ಹಾಕಿಕೊಂಡಿದ್ದರು. ಈ ವಿಷಯ ಸದ್ಯ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಜುಲೈ 21ರಂದು ಮುಂಬೈನಲ್ಲಿ ನಡೆದ ಲೈಗರ್ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ವಿಜಯ ದೇವರಕೊಂಡ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ರಣವೀರ್ ಸಿಂಗ್ ಇದೇ ವಿಚಾರವನ್ನಿಟ್ಟುಕೊಂಡು ಜೋಕ್ ಸಹ ಮಾಡಿದ್ದರು. ಲೈಗರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದು, ಬಾಕ್ಸರ್ ಹಾಗೂ ಬಡವನಾಗಿ ಮಿಂಚಿದ್ದಾರೆ. ಇವರ ಜೊತೆಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ ಲೈಗ್ ಚಿತ್ರ ಕರಣ್ ಜೋಹರ್ ಬ್ಯಾನರ್ ಅಡಿ ನಿರ್ಮಾಣಗೊಂಡಿದ್ದು, ಬಾಕ್ಸರ್ ಪಾತ್ರದಲ್ಲಿ ವಿಜಯ್ ಮಿಂಚಿದ್ದಾರೆ. ಈ ಚಿತ್ರ ಆಗಸ್ಟ್ 25ರಂದು ರಿಲೀಸ್ ಆಗಲಿದೆ. ‘ಲೈಗರ್’ ಸಿನಿಮಾ ಟ್ರೇಲರ್ ರಿಲೀಸ್ ಆದ 24 ಗಂಟೆಗಳಲ್ಲಿ 5 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದೆ.