ETV Bharat / entertainment

ಮಲೇಷ್ಯಾ ಪ್ರವಾಸ: ನಯನತಾರಾ ಜೊತೆಗಿನ ಫೋಟೋ ಹಂಚಿಕೊಂಡ ಪತಿ ವಿಘ್ನೇಶ್​ ಶಿವನ್​ - ಈಟಿವಿ ಭಾರತ ಕನ್ನಡ

ಮಲೇಷ್ಯಾ ಪ್ರವಾಸದಲ್ಲಿ ನಯತಾರಾ ಜೊತೆಗೆ ಕ್ಲಿಕ್ಕಿಸಿದ ಫೋಟೋವೊಂದನ್ನು ವಿಘ್ನೇಶ್​ ಶಿವನ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Vignesh Shivan and Nayanthara set major couple goals in pictures from recent holiday
ಮಲೇಷ್ಯಾ ಪ್ರವಾಸದಿಂದ ನಯನತಾರಾ ಜೊತೆಗಿನ ಫೋಟೋ ಹಂಚಿಕೊಂಡ ಪತಿ ವಿಘ್ನೇಶ್​ ಶಿವನ್​
author img

By ETV Bharat Karnataka Team

Published : Oct 10, 2023, 12:10 PM IST

ಲೇಡಿ ಸೂಪರ್​ಸ್ಟಾರ್​ ನಯನತಾರಾ ಅವರು ಪತಿ ಮತ್ತು ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಹಾಗೂ ಅವಳಿ ಮಕ್ಕಳಾದ ಉಯಿರ್​ ಮತ್ತು ಉಲಗಮ್ ಜೊತೆ ಪ್ರವಾಸದಲ್ಲಿದ್ದಾರೆ. ಇತ್ತೀಚೆಗೆ ಸ್ಟಾರ್​ ದಂಪತಿ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಮಲೇಷ್ಯಾದಲ್ಲಿ ಆಚರಿಸಿದ್ದರು. ಇನ್ನು ಭಾರತಕ್ಕೆ ಹಿಂತಿರುಗದ ಈ ಬ್ಯೂಟಿಫುಲ್​ ಫ್ಯಾಮಿಲಿ ವಿದೇಶದಲ್ಲೇ ತಮ್ಮ ರಜಾ ದಿನಗಳನ್ನು ಎಂಜಾಯ್​ ಮಾಡುತ್ತಿದೆ. ಇಂದು ವಿಘ್ನೇಶ್​ ಶಿವನ್​ ಪತ್ನಿಯ ಜೊತೆಗಿನ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಶೇರ್​ ಮಾಡಿರುವ ವಿಘ್ನೇಶ್​ ಶಿವನ್​ ತಮಿಳು ಭಾಷೆಯಲ್ಲಿ ಸುಂದರ ಶೀರ್ಷಿಕೆಯನ್ನು ನೀಡಿದ್ದಾರೆ. "ಅವಳಲ್ಲಿರುವ ಒಂದು ಬಗೆಯ ಸ್ನೇಹಿತ ನಾನು (avalodirukkum Oru vidha snehithan aanaaen)" ಎಂದು ಬರೆದಿದ್ದಾರೆ. 'ಕಾತುವಾಕುಲ ರೆಂಡು ಕಾದಲ್' ಎಂಬ ರೊಮ್ಯಾಂಟಿಕ್ ಹಾಸ್ಯ ಸಿನಿಮಾದ 'ನಾನ್ ಪಿಜೈ' ಶೀರ್ಷಿಕೆಯ ಹಾಡಿನ ಸಾಹಿತ್ಯದಿಂದ ಅವರು ಈ ಸಾಲುಗಳನ್ನು ತಮ್ಮ ಹೆಂಡತಿಗಾಗಿ ಅರ್ಪಿಸಿದ್ದಾರೆ.

ಫೋಟೋದಲ್ಲಿ ವಿಘ್ನೇಶ್​ ಶಿವನ್​ ಮತ್ತು ನಯನತಾರಾ ಕ್ಯಾಶುವಲ್​ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಮಲೇಷ್ಯಾದ ಬೀದಿಯಲ್ಲಿ ನಿಂತು ಸಂತೋಷದಿಂದ ಕ್ಯಾಮರಾಗೆ ಪೋಸ್​ ನೀಡಿದ್ದಾರೆ. ನಯನತಾರಾ ಗ್ರೀನ್​ ಸ್ವೇಟ್​ ಶರ್ಟ್​ ಮತ್ತು ಗ್ರೀನ್​ ಪ್ಯಾಂಟ್​ ಧರಿಸಿದ್ದರು. ಬಿಳಿ ಶೂನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ವಿಘ್ನೇಶ್​ ಶಿವನ್​ ವೈಟ್​ ಶರ್ಟ್​, ಬ್ಲ್ಯಾಕ್​ ಪ್ಯಾಂಟ್ ಮತ್ತು ಬ್ಲ್ಯಾಕ್​ ಶೂ ಧರಿಸಿದ್ದರು.

ಅಭಿಮಾನಿಗಳ ಪ್ರತಿಕ್ರಿಯೆ.. ವಿಘ್ನೇಶ್​ ಶಿವನ್​ ಪೋಸ್ಟ್​ ಹಂಚಿಕೊಂಡ ಕೂಡಲೇ ಸ್ಟಾರ್​ ದಂಪತಿಯ ಅಭಿಮಾನಿಗಳು ಕಮೆಂಟ್​ ವಿಭಾಗವನ್ನು ತುಂಬಿದರು. 'ಒಳ್ಳೆಯ ಫೋಟೋ', 'ಸ್ಟನ್ನಿಂಗ್​​ ಮತ್ತು ಸ್ಟೈಲಿಶ್​ ಜೋಡಿ. ಜೊತೆಯಾಗಿ ಸಂತೋಷವಾಗಿ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ', 'ನಯನ್​ ವಿಕಿ.. ನನ್ನ ನೆಚ್ಚಿನ ಸೆಲೆಬ್ರಿಟಿ ಜೋಡಿ', 'ರಾಜ ಮತ್ತು ರಾಣಿ' ಎಂದೆಲ್ಲ ಪ್ರತಿಕ್ರಿಯಿಸಿದ್ದಾರೆ.

ಮಾದರಿ ದಂಪತಿ.. 2015ರಲ್ಲಿ ವಿಜಯ್​ ಸೇತುಪತಿ ನಟನೆಯ 'ನಾನುಂ ರೌಡಿ ದಾನ್​' ಎಂಬ ಚಿತ್ರವನ್ನು ವಿಘ್ನೇಶ್​ ನಿರ್ದೇಶಿಸಿದ್ದು, ನಯನತಾರಾ ನಟಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಸುಮಾರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ 2022 ರ ಜೂನ್​ 9 ರಂದು ಮದುವೆಯಾಗಿದ್ದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅಕ್ಟೋಬರ್​ 9 ರಂದು ಇಬ್ಬರು ಗಂಡು ಮಕ್ಕಳನ್ನು ಸ್ವಾಗತಿಸಿದರು.

ಸಿನಿಮಾ ವಿಚಾರವಾಗಿ ನೋಡುವುದಾದರೆ, ನಟಿ ನಯನತಾರಾ ಪ್ರಸ್ತುತ ಶಾರುಖ್​ ಖಾನ್​ ಜೊತೆ ನಟಿಸಿದ 'ಜವಾನ್'​ ಸಿನಿಮಾದ ಯಶ್ಸಸ್ಸಿನಲ್ಲಿ ಮುಳುಗಿದ್ದಾರೆ. ಅವರ ಮುಂದಿನ ಚಿತ್ರ ಮನ್ನಂಗಟ್ಟಿ: ಸಿನ್ಸ್​ 1960 ಸಿನಿಮಾವನ್ನು ಡ್ಯೂಡ್​ ವಿಕ್ಕಿ ಬರೆದು ನಿರ್ದೇಶಿಸಿದ್ದಾರೆ. ಶೀಘ್ರದಲ್ಲೇ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ. ಆದರೆ, ಬಿಡುಗಡೆ ದಿನಾಂಕ ಇನ್ನೂ ಫಿಕ್ಸ್​ ಆಗಿಲ್ಲ. ಇದು ನಯನತಾರಾ ಅವರ 75ನೇ ಸಿನಿಮಾ. ವಿಘ್ನೇಶ್ ಪ್ರಸ್ತುತ ತಮ್ಮ ಮುಂಬರುವ ಪ್ರಾಜೆಕ್ಟ್‌ನ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ನಟ, ನಿರ್ದೇಶಕ ಪ್ರದೀಪ್ ಆಂಟೋನಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ: ನಯನತಾರಾ-ವಿಘ್ನೇಶ್​ ಶಿವನ್​​​ ಅವಳಿ ಮಕ್ಕಳ ಮೊದಲ ವರ್ಷದ ಜನ್ಮದಿನ: ಫೋಟೋ ಹಂಚಿಕೊಂಡ ಸ್ಟಾರ್ ಕಪಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.