ETV Bharat / entertainment

ಡಾಲಿ ಜೊತೆ ಮತ್ತೆ ಕೈ ಜೋಡಿಸಿದ ನಾಗಭೂಷಣ್.. ಸಂಕ್ರಾಂತಿ ಹಬ್ಬಕ್ಕೆ ವಿದ್ಯಾಪತಿ ಫಸ್ಟ್ ಲುಕ್ ರಿಲೀಸ್

ಸಂಕ್ರಾಂತಿ ಹಬ್ಬಕ್ಕೆ ವಿದ್ಯಾಪತಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಗಿದೆ.

author img

By ETV Bharat Karnataka Team

Published : Jan 15, 2024, 4:16 PM IST

Updated : Jan 15, 2024, 6:01 PM IST

ವಿದ್ಯಾಪತಿ ಫಸ್ಟ್ ಲುಕ್ ರಿಲೀಸ್
ವಿದ್ಯಾಪತಿ ಫಸ್ಟ್ ಲುಕ್ ರಿಲೀಸ್
ವಿದ್ಯಾಪತಿ ಫಸ್ಟ್ ಲುಕ್ ರಿಲೀಸ್

ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ವರ್ಷದ ಮೊದಲ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಸಿನಿರಂಗದಲ್ಲಿ ಸುಗ್ಗಿ ಸಂಭ್ರಮ ಜೋರಾಗಿದೆ. ಸಂಕ್ರಾಂತಿ ವಿಶೇಷವಾಗಿ ಹೊಸ ಹೊಸ ಸಿನಿಮಾಗಳು ಘೋಷಣೆಯಾಗಿವೆ. ಅದರಂತೆ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್​ನ ನಾಲ್ಕನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

ಟಗರು ಪಲ್ಯ ಸಿನಿಮಾ ಮೂಲಕ ಕಳೆದ ವರ್ಷ ಡಾಲಿ ಪಿಕ್ಚರ್ಸ್ ಪ್ರೇಕ್ಷಕರಿಗೆ ಮನರಂಜನೆಯ ಬಾಡೂಟ ಬಡಿಸಿತ್ತು. ಹೊಸ ಹೊಸ ನಿರ್ದೇಶಕರಿಗೆ ವೇದಿಕೆಯಾಗಿರುವ ಡಾಲಿ ಪಿಕ್ಚರ್ಸ್ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವಲ್ಲಿ ಹೆಜ್ಜೆ ಇಡುತ್ತಿದೆ. ಇದೀಗ ಡಾಲಿ ಪಿಕ್ಚರ್ಸ್​​​​​ನ ಮತ್ತೊಂದು ಕೊಡುಗೆ ವಿದ್ಯಾಪತಿ ಸಿನಿಮಾದ ಫಸ್ಟ್ ಲುಕ್ ಅನ್ನು ಸುಗ್ಗಿ ಸಂಭ್ರಮದ ವಿಶೇಷವಾಗಿ ಬಿಡುಗಡೆಯಾಗಿದೆ.

ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾದ ಸಾರಥಿ. ಈ ಚಿತ್ರವನ್ನು ಇವರಿಬ್ಬರು ರಚಿಸಿ, ನಿರ್ದೇಶಿಸಿ, ಸಂಕಲನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಫಸ್ಟ್ ಲುಕ್​ನಲ್ಲಿ ನಾಗಭೂಷಣ್ ಕರಾಟೆ ಕಿಂಗ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದಾರೆ.

ಆ್ಯಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ವಿದ್ಯಾಪತಿ ಸಿನಿಮಾದ ಶೂಟಿಂಗ್ ಮುಂದಿನ ವಾರದಿಂದ ಶುರುವಾಗಲಿದೆ. ನಾಗಭೂಷಣ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಕ್ರಿಯೇಟಿವ್ ಡೈರೆಕ್ಟರ್ ಆಗಿ ತೇಜೇಶ್ ಗಣೇಶ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ರಾಕ್ಷಸನ ಫಸ್ಟ್​ ಲುಕ್ ಬಿಡುಗಡೆ: ಕನ್ನಡ ಚಿತ್ರರಂಗದಲ್ಲಿ 'ಮಮ್ಮಿ', 'ದೇವಕಿ' ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಕ್ಯಾಪ್ಚರ್' ಮತ್ತು 'ಮಾಫಿಯಾ' ಮೂಲಕ ಸದ್ದು ಮಾಡುತ್ತಿರುವ ಇವರು, ಈ ಎರಡು ಸಿನಿಮಾಗಳ ಬಿಡುಗಡೆಗೂ ಮೊದಲೇ ಇದೀಗ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹೊಸ ಸಿನಿಮಾಗೆ 'ರಾಕ್ಷಸ' ಎಂದು ಹೆಸರಿಡಲಾಗಿದ್ದು, ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಕನ್ನಡ ಸಿನಿಮಾಪ್ರೇಮಿಗಳ ಕುತೂಹಲ ಹೆಚ್ಚಿಸಿದ್ದಾರೆ.

'ರಾಕ್ಷಸ'ನಾಗಿ ಸ್ಯಾಂಡಲ್​ವುಡ್​ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದಾರೆ. ರಿಲೀಸ್ ಆಗಿರುವ ಪೋಸ್ಟರ್​​ನಲ್ಲಿ ಪ್ರಜ್ವಲ್ ದೇವರಾಜ್ ಗನ್ ಹಿಡಿದಿದ್ದಾರೆ. ಪುಟ್ಟ ಮಗುವೊಂದು ಪ್ರಜ್ವಲ್ ಕೈ ಬೆರಳು ಹಿಡಿದಿದೆ. ನಟನ ಕೈಯಲ್ಲಿರುವ ಟ್ಯಾಟೂ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಲೋಹಿತ್ ನಿರ್ದೇಶನದ 'ರಾಕ್ಷಸ'ನ ಫಸ್ಟ್ ಲುಕ್ ಬಿಡುಗಡೆ

Last Updated : Jan 15, 2024, 6:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.