ಅಭಿಮಾನಿಗಳ ವಿಕ್ಯಾಟ್ ಬಾಲಿವುಡ್ನ ಕ್ಯೂಟ್ ಕಪಲ್ ಎಂದು ಗುರುತಿಸಿಕೊಂಡಿದ್ದಾರೆ. ವಿಕ್ಕಿ ಕೌಶಲ್ ತನ್ನ ಪತ್ನಿ ಕತ್ರಿನಾ ಕೈಫ್‌ಗೆ ಪ್ರೀತಿ ವ್ಯಕ್ತಪಡಿಸುವ, ವಿಶೇಷ ಸರ್ಪ್ರೈಸ್ ಕೊಡುವ ಅವಕಾಶವನ್ನು ಎಂದಿಗೂ ಬಿಡುವುದಿಲ್ಲ. ಅದರಂತೆ ಅಲಿಬಾಗ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ, ಕತ್ರಿನಾ ಮುಖದಲ್ಲಿ ನಗು ತರಿಸಲು ವಿಕ್ಕಿ ಪ್ರಯತ್ನಿಸಿದ್ದಾರೆ. ಅವರು ಶಾರ್ವರಿ ವಾಘ್ ಅವರೊಂದಿಗೆ ಸೇರಿ ತಮಾಷೆಯ ರೀತಿಯಲ್ಲಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
- " class="align-text-top noRightClick twitterSection" data="
">
ಈ ವೈರಲ್ ವಿಡಿಯೋ ಕ್ಲಿಪ್‌ನಲ್ಲಿ, ವಿಕ್ಕಿ ಅವರು ನೆಲದ ಮೇಲೆ ಮಂಡಿಯೂರಿ ನೃತ್ಯ ಮಾಡುತ್ತಿರುವುದನ್ನು ತೋರಿಸುತ್ತದೆ. ವಿಕ್ಕಿ ಅವರ ಸಹೋದರ ಸನ್ನಿ ಕೌಶಲ್ ಅವರ ವದಂತಿಯ ಗೆಳತಿ ಶಾರ್ವರಿ ವಾಘ್ ಅವರು ವಿಕ್ಕಿ ಅವರ ಹಿಂದೆ ಸಂಗೀತಕ್ಕೆ ಹೆಜ್ಜ ಹಾಕಿರುವುದು ಕಂಡು ಬಂದಿದೆ. ಅವರ ಬಳಿ ಕುಳಿತಿರುವ ಕತ್ರಿನಾ, ವಿಕ್ಕಿ ಅವರು ನೋಡಿ ನಾಚಿ ನೀರಾಗಿರುವುದನ್ನು ಕಾಣಬಹುದು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟಿಜನ್‌ಗಳ ಮೆಚ್ಚುಗೆಗೆ ಪಾತ್ರವಾಗಿದೆ. ಎಷ್ಟು ಮುದ್ದಾಗಿದೆ, ಬಹಳ ಸುಂದರ, ವಿಕ್ಕಿ ಸ್ವೀಟ್ ಹಾರ್ಟ್ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಮರಳುಗಾಡಿನಲ್ಲಿ ಬಾಲಿವುಡ್ ಜೋಡಿ: ಪತಿ ವಿಕ್ಕಿ ಕೌಶಲ್ ಜೊತೆ ಕತ್ರಿನಾ ಕೈಫ್ ರಾಜಸ್ಥಾನ ರೌಂಡ್ಸ್
ಡೇಟಿಂಗ್ನಲ್ಲಿದ್ದ ವಿಕ್ಕಿ ಮತ್ತು ಕತ್ರಿನಾ ಅವರು ಡಿಸೆಂಬರ್ 9, 2021ರಂದು ದಾಂಪತ್ಯ ಜೀವನ ಆರಂಭಿಸಿದರು. ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಡಿಸೆಂಬರ್ 7 ರಿಂದ 9ರವರೆಗೆ ಭವ್ಯ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಮೆಹೆಂದಿ, ಅರಿಶಿಣ ಶಾಸ್ತ್ರ, ಸಂಗೀತ ಸೇರಿಂದತೆ ವಿವಾಹದ ಎಲ್ಲ ಸಮಾರಂಭಗಳು ಜೋರಾಗಿಯೇ ನಡೆದಿತ್ತು. ವಿವಾಹದ ಬಳಿಕ ಈ ಜೋಡಿಯ ನಡೆ ನುಡಿ ಅಭಿಮಾನಿಗಳ ಮನ ಗೆಲ್ಲುತ್ತಿದೆ. ಇವರ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತವೆ. ನೆಟಟ್ಟಿಗರ ಮೆಚ್ಚುಗೆ ಗಳಿಸಿಕೊಳ್ಳುತ್ತವೆ.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾದ ಹೊಂಬಾಳೆ ಫಿಲಂಸ್! ಮನರಂಜನಾ ಕ್ಷೇತ್ರದ ಇತಿಹಾಸ
ಇತ್ತೀಚೆಗೆ ಕುಟುಂಬಸ್ಥರೊಂದಿಗೆ ಕ್ರಿಸ್ಮಸ್ ಆಚರಿಸಿದ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮುಂಬೈನಿಂದ ರಾಜಸ್ಥಾನ ಪ್ರವಾಸಕ್ಕೆ ತೆರಳಿದ್ದರು. ಕೆಲ ದಿನಗಳ ಕಾಲ ಪ್ರವಾಸದಲ್ಲಿದ್ದ ಈ ಜೋಡಿ ಮುದ್ದಾದ ಫೋಟೋಗಳನ್ನೂ ಹಂಚಿಕೊಂಡಿದ್ದು, ಚಿತ್ರಗಳು ಭಾರಿ ಲೈಕ್ಸ್ ಪಡೆದುಕೊಂಡಿವೆ.