ಚೆನ್ನೈ: ತಮಿಳು ಚಿತ್ರೋದ್ಯಮದ ಪ್ರಖ್ಯಾತ ನಿರ್ಮಾಪಕ, ಲಕ್ಷ್ಮೀ ಮೂವಿ ಮೇಕರ್ ಪ್ರೊಡಕ್ಷನ್ ಸಂಸ್ಥೆಯ ಕಾರ್ಯದರ್ಶಿಯಲ್ಲೊಬ್ಬರಾಗಿರುವ ಕೆ ಮುರುಳೀಧರನ್(65) ಹೃದಾಯಘಾತದಿಂದ ಸಾವನ್ನಪ್ಪಿದ್ದಾರೆ. ಗುರುವಾರ ಅವರು ಕುಂಭಕೋಣಂನ ನಚಿಯಾರ್ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಮುರಳೀಧರ್ ಪ್ರಮುಖ ನಿರ್ಮಾಪಕರಾಗಿದ್ದರು. 'ಅನ್ಬೆ ಶಿವಂ' ಮತ್ತು 'ಪಧುಪೆಟ್ಟಾಯಿ'ಯಂತಹ ಅನೇಕ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 1944ರಲ್ಲಿ ತಮ್ಮ ನಿರ್ಮಾಣ ವೃತ್ತಿ ಆರಂಭಿಸಿದ ಅವರು, ಮೊದಲಿಗೆ ಅರ್ನಂನಯಿ ಕವಾಲನ್ ಚಿತ್ರವನ್ನು ನಿರ್ಮಾಣ ಮಾಡಿದ್ದರು.
ವೇಣುಗೋಪಾಲ್ ಮತ್ತು ಸ್ವಾಮಿನಾಥನ್ ಜೊತೆ ಇವರು ಕೂಡ ಲಕ್ಷ್ಮಿ ಮೂವಿ ಮೇಕರ್ ಪ್ರೊಡಕ್ಷನ್ ಸಂಸ್ಥೆ ಪಾಲುದಾರರಾಗಿದ್ದರು. ಕಮಲ್ ಹಾಸನ್ ಜೊತೆ 'ಅನ್ಬೆ ಶಿವಂ', ಧನುಶ್ ಜೊತೆ 'ಪುಧುಪೆಟ್ಟಾಯಿ', ಕಾರ್ತಿಕ್ ಜೊತೆ 'ಗೋಕುಲತೈಲ್ ಸೆಥೈ' ಮುಂತಾದ ಸಿನಿಮಾಗಳನ್ನು ನಿರ್ಮಿಸಿದ್ದರು.
ಕಮಲ್ ಹಾಸನ್, ವಿಜಯ್ಕಾಂತ್, ವಿಜಯ್, ಅಜಿತ್, ಧನುಶ್ ಮತ್ತು ಇತರೆ ಅನೇಕ ದೊಡ್ಡ ಸ್ಟಾರ್ಗಳ ಜೊತೆ ಮುರುಳೀಧರನ್ ಕಾರ್ಯ ನಿರ್ವಹಿಸಿದ್ದಾರೆ. ಮುರಳೀಧರನ್ ಸಾವಿಗೆ ಚಿತ್ರತಂಡ, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಿರಿಯ ಒಡಿಯಾ ನಟಿ ಜರಾನಾ ದಾಸ್ ನಿಧನ