ETV Bharat / entertainment

ಹೆಸರಿಡದ ಚಿತ್ರಕ್ಕೆ ಧ್ವನಿ ಕೊಟ್ಟ ಸ್ಯಾಂಡಲ್​​ವುಡ್​​ ಲವ್​​ಬರ್ಡ್ಸ್ - Vasishta Simha Haripriya photos

ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಎವರ್ ಸಿನಿಮಾದ ರೀಮೆಕ್​ ಚಿತ್ರದ ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಕೆಲಸ ಮಾಡಿದ್ದಾರೆ.

Vasishta Simha Haripriya movie dubbing work
ಸ್ಯಾಂಡಲ್​​ವುಡ್​​ ಲವ್​​ಬರ್ಡ್ಸ್
author img

By

Published : Dec 9, 2022, 1:31 PM IST

ಕಳೆದ ಕೆಲ ದಿನಗಳಿಂದ ಸ್ಯಾಂಡಲ್​​ವುಡ್​​ ಲವ್​​ಬರ್ಡ್ಸ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಪ್ರೇಮ ಪುರಾಣ ಸಖತ್​ ಸೌಂಡ್​​ ಮಾಡ್ತಿದೆ. ಈ ಜೋಡಿ ನಡುವೆ ವಿಶಿಷ್ಟ ಪ್ರೇಮ ಕಥೆ ಆರಂಭ ಆಗಿ ಸೈಲೆಂಟ್ ಆಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡು ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಎಂಗೇಜ್​​ಮೆಂಟ್ ಬಳಿಕ ಈ ಲವ್ ಬರ್ಡ್ಸ್ ತಾವು ಒಟ್ಟಿಗೆ ನಟಿಸಿರೋ ಹೆಸರಿಡದ ರಿಮೇಕ್ ಚಿತ್ರಕ್ಕೆ ಧ್ವನಿ ಕೊಡುವ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ವಸಿಷ್ಠ ಹಾಗೂ ಹರಿಪ್ರಿಯಾ ಒಟ್ಟಿಗೆ ಡಬ್ಬಿಂಗ್ ಕೆಲಸ ಮಾಡಿದ್ದಾರೆ.

Vasishta Simha Haripriya movie dubbing work
ತಮ್ಮ ಚಿತ್ರಕ್ಕೆ ಧ್ವನಿ ಕೊಟ್ಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ

ಇನ್ನು ತಮ್ಮ ಪ್ರೇಮಾಂಕುರಕ್ಕೆ ಯಾರು ಕಾರಣ ಅನ್ನೋ ವಿಷಯವನ್ನು ಸ್ವತಃ ಹರಿಪ್ರಿಯಾ ಇತ್ತೀಚೆಗೆ ರಿವೀಲ್ ಮಾಡಿದ್ದರು. ಒಂದು ವರ್ಷದ ಹಿಂದೆ ನಟ ವಸಿಷ್ಠ ಸಿಂಹ ಮುದ್ದಾದ ನಾಯಿ ಮರಿಯನ್ನು ಹರಿಪ್ರಿಯಾ ಅವರಿಗೆ ಗಿಫ್ಟ್ ಆಗಿ ಕೊಟ್ಟಿದ್ದರು. ವಸಿಷ್ಠ ಸಿಂಹ ಕೊಟ್ಟ ಕ್ರಿಸ್ಟಲ್‌ನ ಎದೆಯ ಮೇಲೆ ಲವ್ ಸಿಂಬಲ್ ಇತ್ತು. ಈ ನಾಯಿಮರಿ ಗಿಫ್ಟ್‌ನಿಂದ ಸ್ನೇಹ ಪ್ರೀತಿಯಾಗಿ ಬೆಳೆದಿದ್ದು ಅಂತಾ ತಮ್ಮ ಲವ್ ಸೀಕ್ರೆಟ್ ಅನ್ನು ಹಂಚಿಕೊಂಡಿದ್ದರು.

Vasishta Simha Haripriya movie dubbing work
ಸ್ಯಾಂಡಲ್​​ವುಡ್​​ ಲವ್​​ಬರ್ಡ್ಸ್

ಆದರೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಪ್ರೀತಿ ಶುರುವಾಗೋದಕ್ಕೆ ಮೂಲ ಕಾರಣ ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಎವರ್ ಸಿನಿಮಾ ಅಂತಾ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆಪ್ತರ ಬಳಗದಲ್ಲಿ ಕೇಳಿ ಬಂದ‌‌ ಮಾತು. ಎವರ್ ಸಿನಿಮಾದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೂ ಮುನ್ನ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರಿಗೆ ಅಷ್ಟೊಂದು ಸ್ನೇಹ ಸಂಬಂಧ ಇರಲಿಲ್ಲ. ಯಾವಾಗ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಲು ಶುರು ಮಾಡಿದರೋ ಆಗ ಇವರಿಬ್ಬರ ನಡುವೆ ಸ್ನೇಹ ಶುರುವಾಯಿತು.

ಇದನ್ನೂ ಓದಿ: ವಸಿಷ್ಠ - ಹರಿಪ್ರಿಯಾ ಪ್ರೇಮಾಂಕುರಕ್ಕೆ ಕಾರಣನಾದ 'ಕ್ರಿಸ್ಟಲ್​'

ಆ ಸಮಯದಲ್ಲಿ ವಸಿಷ್ಠ ಸಿಂಹ ಹರಿಪ್ರಿಯಾರಿಗೆ ಕ್ರಿಸ್ಟಲ್ ಹೆಸರಿನ ನಾಯಿಮರಿಯನ್ನು ತಂದುಕೊಟ್ಟಿದ್ದರು. ಅಲ್ಲಿಂದ ಸ್ನೇಹದ ಜೊತೆಗೆ ಪ್ರೀತಿ ಶುರುವಾಗಿದೆ. ಈಗ ಮದುವೆ ಎಂಬ ಬಂಧನಕ್ಕೆ ಒಳಗಾಗಲು ರೆಡಿಯಾಗಿದ್ದಾರೆ. ಮುಂದಿನ ವರ್ಷ ಈ ತಾರಾ ಜೋಡಿ ಹಸೆಮಣೆ ಏರಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ ಎವರ್ ಸಿನಿಮಾದ ರೀಮೆಕ್​ ಚಿತ್ರದ ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಕೆಲಸ ಮಾಡುವ ಮೂಲಕ ಟಾಕ್ ಆಫ್ ದಿ ನ್ಯೂಸ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.