ETV Bharat / entertainment

ಜಾನ್ವಿ ಕಪೂರ್ ಕಿವಿ ಕಚ್ಚಿದ ವರುಣ್ ಧವನ್.. ಫೋಟೋ ವೈರಲ್​, ನೆಟ್ಟಿಗರಿಂದ ಟ್ರೋಲ್​ - ಬವಾಲ್

ನಟ ವರುಣ್ ಧವನ್ ಅವರು ಸಿನಿಮಾ ಪ್ರಮೋಶನ್​ ಫೋಟೋಶೂಟ್ ವೇಳೆ ನಟಿ ಜಾನ್ವಿ ಕಪೂರ್ ಕಿವಿ ಕಚ್ಚಿದ್ದು, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದಾರೆ.

Varun Dhawan Janhvi Kapoor photo trolled
ಜಾನ್ವಿ ಕಪೂರ್ ಕಿವಿ ಕಚ್ಚಿದ ವರುಣ್ ಧವನ್
author img

By

Published : Jul 19, 2023, 7:14 PM IST

ಜಾನ್ವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ಬವಾಲ್ ಈ ವಾರ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ. ನಿತೇಶ್​​ ತಿವಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಪ್ರಮೋಶನ್​​ ಕೆಲಸ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ಚಿತ್ರದ ಪ್ರಮುಖ ನಟರು ಸಹ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮಂಗಳವಾರದಂದು ಬಾವಾಲ್ ಸ್ಪೆಷಲ್​​ ಸ್ಕ್ರೀನಿಂಗ್‌ ನಡೆದಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಈವೆಂಟ್​ಗೆ ಸಾಕ್ಷಿಯಾಗಿದ್ದರು.

ನಟರು ಸೋಷಿಯಲ್​ ಮೀಡಿಯಾದಲ್ಲಿ ಬಗೆಬಗೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇಂದು ಹಲವು ರೊಮ್ಯಾಂಟಿಕ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದ್ರೀಗ ಸೋಷಿಯಲ್​ ಮೀಡಿಯಾದಲ್ಲಿ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿ, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. ಸಿನಿಮಾ ಪ್ರಚಾರ ಫೋಟೋಶೂಟ್‌ ವೇಳೆ ವರುಣ್ ಅವರು ಜಾನ್ವಿ ಅವರ ಕಿವಿ ಕಚ್ಚಿದ್ದು, ಈ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.

ವೈರಲ್​ ಆಗುತ್ತಿರುವ ಫೋಟೋದಲ್ಲಿ ಬಾಲಿವುಡ್​ ನಟ ವರುಣ್ ಧವನ್​​, ಬಾಲಿವುಡ್​ ಬೆಡಗಿ ಜಾನ್ವಿ ಅವರನ್ನು ಹಿಡಿದುಕೊಂಡು ಅವರ ಕಿವಿ ಕಚ್ಚುತ್ತಿರುವಂತೆ ಕಂಡುಬಂದಿದ್ದಾರೆ. ಈ ಇಬ್ಬರೂ ತಾರೆಯರು ಮ್ಯಾಚಿಂಗ್​ ಬ್ಲ್ಯಾಕ್​ ಡ್ರೆಸ್​ನಲ್ಲಿ ಕಂಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಒಂದು ಗುಂಪು ನಟರ ಈ ವರ್ತನೆಯನ್ನು ಟೀಕಿಸಿದ್ದರೆ, ಅಭಿಮಾನಿಗಳು ಬೆಂಬಲಕ್ಕೆ ಬಂದಿದ್ದಾರೆ.

ಫೋಟೋಗೆ ಪ್ರತಿಕ್ರಿಯಿಸಿದ ಬಳಕೆದಾರರು, "ವಿವಾಹಿತ ಪುರುಷ ಈ ರೀತಿ ವರ್ತಿಸಬಾರದು" ಎಂದು ಬರೆದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, "ಅವರು ಮದುವೆಯಾಗಿರುವ ಕಾರಣ ಜನರು ಇದನ್ನೆಲ್ಲಾ ಮಾಡಬಾರದು ಎಂದು ಏಕೆ ಹೇಳುತ್ತಿದ್ದಾರೆಂದು ನನಗೆ ತಿಳಿದಿಲ್ಲ, ಸಿಂಗಲ್​ ಇದ್ದರೂ ಇದನ್ನೆಲ್ಲಾ ಮಾಡಬಾರದು" ಎಂದು ತಿಳಿಸಿದ್ದಾರೆ.

ಕೆಲ ಸಾಮಾಜಿಕ ಜಾಲತಾಣ ಬಳೆಕದಾರರು ಗಿಗಿ ಹಡಿದ್ (Gigi Hadid) ಅವರಿಗೆ ಕಿಸ್​ ಮಾಡಿದ್ದ ಘಟನೆಯನ್ನು ನೆನಪಿಸಿದ್ದಾರೆ. ಈವೆಂಟ್​ ಒಂದರಲ್ಲಿ ವರುಣ್ ಧವನ್ ಅಮೆರಿಕದ ಸೂಪರ್ ಮಾಡೆಲ್ ಗಿಗಿ ಹಡಿದ್ ಅವರಿಗೆ ವೇದಿಕೆ ಮೇಲೆ ಚುಂಬಿಸಿ, ಸಾಕಷ್ಟು ಟೀಕೆಗಳನ್ನು ಸ್ವೀಕರಿಸಿದ್ದರು. ಆದರೆ ವರುಣ್ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದರು. ಇದು ಮೊದಲೇ ಪ್ಲ್ಯಾನ್​ ಆಗಿತ್ತು ಎಂದು ತಿಳಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಹೊರತಾಗಿಯೂ, ನಟ ನೆಟಿಜನ್‌ಗಳಿಂದ ಅಪಾರ ಟೀಕೆಗಳನ್ನು ಎದುರಿಸಿದ್ದರು. ಇದೀಗ ಜಾನ್ವಿ ಕಪೂರ್​ ಅವರಿಗೆ ಕಿಸ್​ ಮಾಡಿರುವ ವಿಚಾರವಾಗಿ ಟ್ರೋಲ್​ ಆಗುತ್ತಿದ್ದಾರೆ.

ಇದನ್ನೂ ಓದಿ: ಬವಾಲ್ ಬಿಡುಗಡೆಗೆ ಕ್ಷಣಗಣನೆ: ಸೋಷಿಯಲ್​ ಮೀಡಿಯಾದಲ್ಲಿ ಬಿಸಿಯೇರಿಸಿದ ಬಾಲಿವುಡ್​ ಬ್ಯೂಟಿ ಜಾನ್ವಿ ಕಪೂರ್

ಬವಾಲ್ ಸಿನಿಮಾ ಶೂಟಿಂಗ್​ ಬಹುತೇಕ ವಿದೇಶದಲ್ಲಿ ನಡೆದಿದೆ. ಸಿನಿಮಾ ಇದೇ ಜುಲೈ 21 ರಂದು ಒಟಿಟಿ ವೇದಿಕೆ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ. ನವವಿವಾಹಿತರು ತಮ್ಮ ಹನಿಮೂನ್‌ಗಾಗಿ ಯುರೋಪ್‌ಗೆ ಪ್ರವಾಸ ಬೆಳೆಸುವ ಕಥೆಯಾಗಿದೆ. 2ನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಈ ಚಿತ್ರ ಮೂಡಿಬಂದಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಿನಿಮಾ; ಇತಿಹಾಸ ಸೃಷ್ಟಿಗೆ ಸಜ್ಜಾದ 'ಪ್ರಾಜೆಕ್ಟ್ ಕೆ'

ಮಂಗಳವಾರ ನಡೆದ ಸಿನಿಮಾ ಸ್ಪೆಷಲ್​ ಸ್ಕ್ರೀನಿಂಗ್​ ಈವೆಂಟ್​ನಲ್ಲಿ, ಕರಣ್ ಜೋಹರ್, ಅರ್ಜುನ್ ಕಪೂರ್, ಖುಷಿ ಕಪೂರ್, ಬೋನಿ ಕಪೂರ್, ನೋರಾ ಫತೇಹಿ, ತಮನ್ನಾ ಭಾಟಿಯಾ, ಮನೀಶ್ ಮಲ್ಹೋತ್ರಾ, ಪೂಜಾ ಹೆಗ್ಡೆ, ನುಶ್ರತ್ ಭರುಚ್ಚಾ, ಅವನೀತ್ ಕೌರ್​ ಸೇರಿದಂತೆ ಹಲವರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.