ಹೆಚ್ಚಿನ ಸಂಖ್ಯೆಯ ಕನ್ನಡಿಗರನ್ನು ಆಕರ್ಷಿಸಿರುವ ಕನ್ನಡದ ಜಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'. ಅಭಿನಯ ಚಕ್ರವರ್ತಿ ಸುದೀಪ್ ನಿರೂಪಣೆಯ ಕಾರ್ಯಕ್ರಮ ಪ್ರೇಕ್ಷಕರಿಗೆ ಫುಲ್ ಎಂಟರ್ಟೈನ್ಮೆಂಟ್ ಮೀಲ್ಸ್ ನೀಡ್ತಿದೆ. ಆದ್ರೆ ಕಳೆದ ವಾರದ ವೀಕೆಂಡ್ ವಿತ್ ಸುದೀಪ್ ಸಂಚಿಕೆ ವರ್ತೂರು ಸಂತೋಷ್ ವಿಚಾರವಾಗಿ ಸಖತ್ ಸದ್ದು ಮಾಡಿತ್ತು.
ಸೇಫ್ ಆದ್ರೂ ಮನೆಯಿಂದ ಹೊರ ನಡೆಯುತ್ತೇನೆಂದು ಹೇಳಿ ಬಿಗ್ ಬಾಸ್ ಸಹ ಸ್ಪರ್ಧಿ, ನಿರೂಪಕ ಸುದೀಪ್, ತಂಡ ಸೇರಿದಂತೆ ಅಭಿಮಾನಿಗಳಿಗೆ ಶಾಕ್ ನೀಡಿದ್ರು. ಅಂತಿಮವಾಗಿ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ನಿರ್ಧರಿಸಿದ್ದು, ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.
ಬಿಗ್ ಬಾಸ್ ಪ್ರೋಮೋ: ಹೌದು, ''ಕಷ್ಟಗಳು, ಗೊಂದಲಗಳು ಎಲ್ಲದಕ್ಕೂ ಅಮ್ಮ ಬಂದ್ರೇನೇ ಉತ್ತರ ಸಿಗೋದು!'' ಎಂಬ ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಪ್ರೋಮೋವನ್ನು ಸಾಮಾಜಿಕ ಜಾಲತಾಣದಲ್ಲಿ ಕಲರ್ಸ್ ಕನ್ನಡ ಅನಾವರಣಗೊಳಿಸಿದೆ. ನಿನ್ನೆಯ ಸಂಚಿಕೆಯಲ್ಲಿ ವರ್ತೂರು ಸಂತೋಷ್ ಅವರ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಫೈನಲಿ, ತಮ್ಮ ಮಗನನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸುವಲ್ಲಿ ತಾಯಿ ಯಶಸ್ಸು ಕಂಡಿದ್ದಾರೆ. ಅಮ್ಮನ ಮಾತನ್ನು ಒಪ್ಪಿ ವರ್ತೂರು ಸಂತೋಷ್ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ.
-
ಕಷ್ಟಗಳು, ಗೊಂದಲಗಳು ಎಲ್ಲದಕ್ಕೂ ಅಮ್ಮ ಬಂದ್ರೇನೇ ಉತ್ತರ ಸಿಗೋದು!
— Colors Kannada (@ColorsKannada) November 14, 2023 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/S1ZqK8Gh3A
">ಕಷ್ಟಗಳು, ಗೊಂದಲಗಳು ಎಲ್ಲದಕ್ಕೂ ಅಮ್ಮ ಬಂದ್ರೇನೇ ಉತ್ತರ ಸಿಗೋದು!
— Colors Kannada (@ColorsKannada) November 14, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/S1ZqK8Gh3Aಕಷ್ಟಗಳು, ಗೊಂದಲಗಳು ಎಲ್ಲದಕ್ಕೂ ಅಮ್ಮ ಬಂದ್ರೇನೇ ಉತ್ತರ ಸಿಗೋದು!
— Colors Kannada (@ColorsKannada) November 14, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/S1ZqK8Gh3A
ಇದನ್ನೂ ಓದಿ: BBK: ಮನೆ ಮಂದಿಗೆ ಅಮ್ಮಂದಿರ ಕೈ ಅಡುಗೆ... ವರ್ತೂರು ಸಂತೋಷ್ಗೆ ಅಮ್ಮನೇ ಬಂದ್ರು!
ಶನಿವಾರ ಮತ್ತು ಭಾನುವಾರದಂದು ವೀಕೆಂಡ್ ವಿತ್ ಸುದೀಪ್ ಅಥವಾ ರದ ಕಥೆ ಕಿಚ್ಚನ ಜೊತೆ ಸಂಚಿಕೆಗಳು ಪ್ರಸಾರವಾಗುತ್ತದೆ. ಭಾನುವಾರ ಓರ್ವ ಸ್ಪರ್ಧಿ ಎಲಿಮಿನೇಟ್ ಆಗುತ್ತಾರೆ. 34 ಲಕ್ಷ ಮತ ಪಡೆದು ವರ್ತೂರು ಸಂತೋಷ್ ಸೇಫ್ ಆಗಿದ್ದರು. ಆದ್ರೆ ನಾನು ಮನೆಯಿಂದ ಹೊರ ಹೋಗಲು ಇಚ್ಛಿಸುತ್ತೇನೆಂದು ಹೇಳಿ ಎಲ್ರಿಗೂ ಶಾಕ್ ನೀಡಿದ್ದರು. ನಾನು ಮನೆಯಿಂದ ಹೊರ ಹೋಗುತ್ತೇನೆಂದು ಹೇಳಿ ವರ್ತೂರು ಸಂತೋಷ್ ಭಾವುಕರಾಗಿದ್ದರು. ಕಣ್ಣೀರಿಟ್ಟು, ತಮ್ಮ ಈ ನಿರ್ಧಾರಕ್ಕೆ ಕಾರಣಗಳನ್ನೂ ಕೊಟ್ಟಿದ್ದರು. ಮನೆ ಮಂದಿ ಸೇರಿ ನಿರೂಪಕ ಸುದೀಪ್ ಕೂಡ ಅಸಮಾಧಾನಗೊಂಡಿದ್ರು. ವರ್ತೂರು ಸಂತೋಷ್ ಅವರಿಗೆ 34 ಲಕ್ಷದ 15 ಸಾವಿರದ 475 ಮತ ಪಡೆದಿರುವುದಾಗಿ ತಿಳಿಸಿದ ಸುದೀಪ್, ಜನರ ವಿರುದ್ಧ ನಾನು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಮನೆ ಮಂದಿ ವರ್ತೂರು ಸಂತೋಷ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು.
ಇದನ್ನೂ ಓದಿ: 34 ಲಕ್ಷ ಮತ ಪಡೆದು ಸೇಫ್ ಆದ್ರೂ ಹೊರಹೋಗುತ್ತೇನೆಂದ ವರ್ತೂರು ಸಂತೋಷ್: ಕುತೂಹಲ ಮೂಡಿಸಿದ ಕಿಚ್ಚನ ವಾರದ ಕಥೆ!
ನಿನ್ನೆ ಬಿಗ್ ಬಾಸ್, ಸ್ಪರ್ಧಿಗಳಿಗೆ ದೀಪಾವಳಿ ಸರ್ಪ್ರೈಸ್ ಕೊಟ್ಟಿತ್ತು. ಮನೆಯಿಂದ ತಿನಿಸುಗಳನ್ನು ತರಿಸಿ ಕೊಡಲಾಗಿತ್ತು. ಆದ್ರೆ ವರ್ತೂರು ಸಂತೋಷ್ ಅವರಿಗೆ ಮನೆಯಿಂದ ತಿಸಿಸುಗಳು ಬರಲಿಲ್ಲ. ಬದಲಾಗಿ ಅವರ ಅಮ್ಮನೇ ಬುತ್ತಿ ಹಿಡಿದು ಬಂದರು. ಮಗನನ್ನು ಸಂತೈಸಿದ ಅಮ್ಮ, ಫೈನಲಿ, ತಮ್ಮ ಮಗನನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಟ ಮುಂದುವರಿಸಲು ನಿರ್ಧರಿಸಿದ್ದಾರೆ.