ETV Bharat / entertainment

ನಕಲಿ ವಿಡಿಯೋ.. ಉರ್ಫಿ ಜಾವೇದ್​ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ಮುಂಬೈ ಪೊಲೀಸರು - ನಕಲಿ ಬಂಧನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್

Urfi Javed booked for defaming Mumbai police: ಉರ್ಫಿ ಜಾವೇದ್​ರನ್ನು ಪೊಲೀಸರು ಬಂಧಿಸಿರುವ ನಕಲಿ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ. ಉರ್ಫಿಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ ಮುಂಬೈ ಪೊಲೀಸರು ಉರ್ಫಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Urfi Javed booked for defaming Mumbai Police  defaming Mumbai Police with fake arrest video  Mumbai Police and Urfi Javed  ಮಾನಹಾನಿ ಪ್ರಕರಣ ದಾಖಲಿಸಿದ ಮುಂಬೈ ಪೊಲೀಸರು  ಉರ್ಫಿ ಜಾವೇದ್​ ವಿರುದ್ಧ ಮಾನಹಾನಿ ಪ್ರಕರಣ  ಉರ್ಫಿ ಜಾವೇದ್​ರನ್ನು ಪೊಲೀಸರು ಬಂಧಿಸಿರುವ ನಕಲಿ ವಿಡಿಯೋ  ನಕಲಿ ವಿಡಿಯೋ ಈಗ ಚರ್ಚೆಗೆ ಗ್ರಾಸ  ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಫ್ಯಾಶನ್ ಆಯ್ಕೆಗಳಿಗೆ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್  ನಕಲಿ ಬಂಧನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಉರ್ಫಿ ಜಾವೇದ್ ಪೊಲೀಸರಿಗೆ ಸಿಕ್ಕಿಬಿದ್ದಿರುವ ವಿಡಿಯೋ
ಉರ್ಫಿ ಜಾವೇದ್​ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ಮುಂಬೈ ಪೊಲೀಸರು
author img

By ETV Bharat Karnataka Team

Published : Nov 4, 2023, 8:19 AM IST

ಮುಂಬೈ (ಮಹಾರಾಷ್ಟ್ರ): ವಿಚಿತ್ರ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್ ಅವರ ನಕಲಿ ಬಂಧನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು ಫ್ಯಾಷನ್ ಪ್ರಭಾವಿ ಉರ್ಫಿ ಜಾವೇದ್ ಅನ್ನು ಬಂಧಿಸುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋ ವೈರಲ್ ಆದ ತಕ್ಷಣ ಅಭಿಮಾನಿಗಳು ಅದರ ಬಗ್ಗೆ ಆಶ್ಚರ್ಯಗೊಂಡರು. ವಿಡಿಯೋ ನಿಜವೋ.. ನಕಲಿಯೋ.. ಎಂಬ ಕುತೂಹಲಕ್ಕೆ ಕಾರಣವಾಯಿತು. ಉರ್ಫಿ ಜಾವೇದ್ ಪೊಲೀಸರಿಗೆ ಸಿಕ್ಕಿಬಿದ್ದಿರುವ ವಿಡಿಯೋ ಸಂಪೂರ್ಣ ನಕಲಿಯಾಗಿದ್ದು, ಪ್ರಚಾರಕ್ಕಾಗಿ ಮಾಡಲಾಗಿರುವುದು ದೃಢಪಟ್ಟಿದೆ. ಆದ್ರೆ ಈ ನಕಲಿ ಬಂಧನದ ವಿಡಿಯೋದಿಂದ ಸದ್ಯ ಉರ್ಫಿಗೆ ಸಂಕಷ್ಟ ಎದುರಾಗಿದೆ.

ಮುಂಬೈ ಪೊಲೀಸರು ಎಕ್ಸ್​ನಲ್ಲಿ ಪೋಸ್ಟ್ ಮಾಡಿ ಉರ್ಫಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರೊಂದಿಗೆ ಈ ರೀತಿಯ ಅಪಹಾಸ್ಯವನ್ನು ಸಹಿಸುವುದಿಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟವಾಗಿ ಬರೆದಿದ್ದಾರೆ. ಅಷ್ಟೇ ಅಲ್ಲ ಮುಂಬೈ ಪೊಲೀಸ್ ಸಮವಸ್ತ್ರವನ್ನು ಬಳಸಿಕೊಂಡು ಇಂತಹ ವಿಡಿಯೋಗಳನ್ನು ಮಾಡಿದ್ದಕ್ಕಾಗಿ ಉರ್ಫಿ ಜಾವೇದ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಈ ವಿಡಿಯೋವನ್ನು ಉರ್ಫಿ ಜಾವೇದ್ ಅವರ ತಂಡವು ಪ್ರಚಾರಕ್ಕಾಗಿ ಮಾಡಿದೆ. ಉರ್ಫಿ ಅವರ ತಂಡ ಮಾಡಿದ ಈ ವಿಡಿಯೋದ ಮೇಲೆ ಕ್ರಮ ಕೈಗೊಂಡ ಮುಂಬೈ ಪೊಲೀಸರು, ಮುಂಬೈ ಪೊಲೀಸರನ್ನು ಮಾನಹಾನಿ ಮಾಡಿದ ಮತ್ತು ಸಮವಸ್ತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದ ಪ್ರಭಾವಿ ಉರ್ಫಿ ಜಾವೇದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮುಂಬೈ ಪೊಲೀಸರನ್ನು ಪ್ರಚಾರಕ್ಕಾಗಿ ಬ್ರಾಂಡ್ ಮಾಡುವುದು ಅಪರಾಧ ಮತ್ತು ಪೊಲೀಸ್ ಸಮವಸ್ತ್ರವನ್ನು ಬಳಸುವುದು ಅಪರಾಧ ಎಂದು ಮುಂಬೈ ಪೊಲೀಸರು ಸ್ಪಷ್ಟವಾಗಿ ತಮ್ಮ ಎಕ್ಸ್​ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಇದಕ್ಕಾಗಿ ಉರ್ಫಿ ಜಾವೇದ್ ವಿರುದ್ಧ ಐಪಿಸಿ ಸೆಕ್ಷನ್ 171, 419, 500, 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • One Can’t Violate Law Of The Land, For Cheap Publicity !

    A viral video of a woman being allegedly arrested by Mumbai Police, in a case of obscenity is not true - insignia & uniform has been misused.

    However, a criminal case has been registered against those involved in the…

    — मुंबई पोलीस - Mumbai Police (@MumbaiPolice) November 3, 2023 " class="align-text-top noRightClick twitterSection" data=" ">

ಉರ್ಫಿ ಜಾವೇದ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಆಗಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಪೊಲೀಸರು ಆಕೆಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆಕೆಯ ಉಡುಪಿನ ಕಾರಣಕ್ಕಾಗಿ ಉರ್ಫಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅದರಲ್ಲಿ ಹೇಳಲಾಗಿತ್ತು. ಈ ವಿಡಿಯೋ ನಕಲಿ ಮತ್ತು ಪ್ರಚಾರಕ್ಕಾಗಿ ಮಾಡಲಾಗಿತ್ತು. ಸದ್ಯ ವೈರಲ್​ ಆದ ಬಳಿಕ ಇದರ ಬಗ್ಗೆ ಮುಂಬೈ ಪೊಲೀಸರು ಗಮನ ಹರಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

ಓದಿ: ನನ್ನನ್ನು ದುಬೈ ಪೊಲೀಸರು ಜೈಲಿಗೆ ಹಾಕಲೆಂದು ಅವರು ಬಯಸಿದ್ದರು: ಉರ್ಫಿ ಜಾವೇದ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.