ETV Bharat / entertainment

ಅಭಿಮಾನಿಗಳ ಒತ್ತಾಯಕ್ಕೆ ಮಣಿದ ರಿಯಲ್​ ಸ್ಟಾರ್​: 'ಯುಐ' ಚಿತ್ರದ ಟೀಸರ್​ಗೆ ಮುಹೂರ್ತ ಫಿಕ್ಸ್​ - etv bharat kannada

UI teaser release date fix: 'ಯುಐ' ಚಿತ್ರದ ಟೀಸರ್​ ಸೆಪ್ಟೆಂಬರ್​ 18ರಂದು ಊರ್ವಶಿ ಥಿಯೇಟರ್​ನಲ್ಲಿ ಬಿಡುಗಡೆಯಾಗಲಿದೆ.

UI teaser release date fix
ಅಭಿಮಾನಿಗಳ ಒತ್ತಾಯಕ್ಕೆ ಮಣಿದ ರಿಯಲ್​ ಸ್ಟಾರ್
author img

By ETV Bharat Karnataka Team

Published : Sep 11, 2023, 5:52 PM IST

ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಶೀರ್ಷಿಕೆಯಿಂದಲೇ ಕುತೂಹಲ ಹುಟ್ಟಿಸಿರುವ ಸಿನಿಮಾ 'ಯುಐ'. ರಿಯಲ್​ ಸ್ಟಾರ್​ ಉಪೇಂದ್ರ ಎಂಟು ವರ್ಷಗಳ ಬಳಿಕ ಡೈರೆಕ್ಟರ್​ ಕ್ಯಾಪ್​ ತೊಟ್ಟು ಅಖಾಡಕ್ಕೆ ಇಳಿದಿದ್ದಾರೆ. ಕಥೆ ಕುರಿತು ಕಿಂಚಿತ್ತೂ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಉಪ್ಪಿ ನಟನೆಯ ಅಥವಾ ನಿರ್ದೇಶನದ ಪ್ರತೀ ಸಿನಿಮಾ ಕೂಡ ವಿಭಿನ್ನ. ಹಾಗಾಗಿ ಉಪ್ಪಿ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಯುಐ ಚಿತ್ರದಲ್ಲಿ ನಟ ಉಪೇಂದ್ರ ನಟಿಸುವುದರ ಜೊತೆಗೆ ಆ್ಯಕ್ಷನ್​ ಕಟ್​ ಕೂಡ ಹೇಳಿದ್ದಾರೆ.

  • " class="align-text-top noRightClick twitterSection" data="">

ಉಪ್ಪಿ 2 ಸಿನಿಮಾ ಬಳಿಕ ಉಪೇಂದ್ರ ಡೈರೆಕ್ಟರ್​ ಕ್ಯಾಪ್​ ತೊಟ್ಟ ಚಿತ್ರವಿದು. ಉಪ್ಪಿ 2 ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಉಪೇಂದ್ರ ಅವರ ನಟನೆಗೆ ಮಾತ್ರವಲ್ಲ, ನಿರ್ದೇಶನ ಶೈಲಿಗೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರು ನಟಿಸುವುದರ ಜೊತೆಗೆ ನಿರ್ದೇಶನ ಮಾಡಿರುವ ಯುಐ ಚಿತ್ರದ ಟೀಸರ್ ಇಂದು​ ಬೆಳಗ್ಗೆ 10 ಗಂಟೆಗೆ ಅನಾವರಣಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ, ಟೀಸರ್​ ಬದಲಿಗೆ ಟೀಸರ್​ ದಿನಾಂಕ ಬಿಡುಗಡೆಗೊಳಿಸುತ್ತಿರುವ ದಿನಾಂಕವನ್ನು ತಿಳಿಸಲು ಚಿತ್ರತಂಡ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಇದಕ್ಕೂ ಮುನ್ನ ಫಸ್ಟ್​ ಲುಕ್​ ಅಪ್​ಡೇಟ್​ ಅಂತ ಹೇಳಿ ಯುಐ ಚಿತ್ರತಂಡ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಫಸ್ಟ್​ ಲುಕ್​ ಅಥವಾ ಟೀಸರ್​ ಬಿಡುಗಡೆಗೊಳಿಸುವ ಬದಲು ನಿರ್ಮಾಪಕರಾದ ಕೆ ಪಿ ಶ್ರೀಕಾಂತ್​ ಮತ್ತು ನವೀನ್​ ಜೊತೆ ಉಪೇಂದ್ರ ಮಾತನಾಡುತ್ತಿರುವ ದೃಶ್ಯ ಇದಾಗಿತ್ತು. ರಿಯಲ್​ ಸ್ಟಾರ್ ಯುಐ​ ಸಿನಿಮಾದ ಪ್ರಮೋಷನ್​ ಮಾಡಲ್ಲ ಎಂದು ನಿರ್ಮಾಪಕರಲ್ಲಿ ಹೇಳುತ್ತಿರುವ ವಿಡಿಯೋ ಸಖತ್​ ಸದ್ದು ಮಾಡಿತ್ತು. ಇದೀಗ ಟೀಸರ್​ ಬಿಡುಗಡೆ ಮಾಡುತ್ತೇವೆ ಎಂದು ಹೇಳಿ ಅದೇ ವಿಡಿಯೋದ ಮುಂದುವರೆದ ಭಾಗವಾಗಿ ಮತ್ತೊಂದು ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ.

ವಿಡಿಯೋದಲ್ಲೇನಿದೆ?: ಯುಐ ಶೂಟಿಂಗ್​ ಸ್ಫಾಟ್​ವೊಂದಕ್ಕೆ ಅಭಿಮಾನಿಗಳು ಆಗಮಿಸಿ ಟೀಸರ್​ ಟೀಸರ್​ ಎಂದು ಬೊಬ್ಬೆ ಹೊಡೆಯುತ್ತಿರುವುದರಿಂದ ವಿಡಿಯೋ ಪ್ರಾರಂಭವಾಗುತ್ತದೆ. ಅಲ್ಲೂ ಕೂಡ ಉಪೇಂದ್ರ ಅವರು ಫ್ಯಾನ್ಸ್​ ತಲೆಗೆ ಹುಳ ಬಿಡುತ್ತಾರೆ. ಟೀಸರ್​, ಟ್ರೇಲರ್​ ನೋಡಿದ್ರೆ ನೀವೆಲ್ಲಾ ಥಿಯೇಟರ್​ನಲ್ಲಿ ತಲೆ ಕೆಳಗೆ ಮಾಡಿ ಕುಳಿತುಕೊಳ್ಳುತ್ತೀರಾ. ಹಾಗಾಗಿ ಡೈರೆಕ್ಟ್​ ಥಿಯೇಟರ್​ಗೆ ಬಂದು ಸಿನಿಮಾವನ್ನು ತಲೆ ಎತ್ತಿ ನೋಡಿ ಎಂಬ ಪಂಚಿಂಗ್​ ಡೈಲಾಗ್​ ಬಿಡುತ್ತಾರೆ. ಕೊನೆಗೂ ಅದ್ಯಾವ ಐಡಿಯಾ ವರ್ಕೌಟ್​ ಆಗದೇ ಅಭಿಮಾನಿಗಳ ಬೇಡಿಕೆಗೆ ಮಣಿದು ಟೀಸರ್​ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಾರೆ.

ಟೀಸರ್​ ಯಾವಾಗ? ಎಲ್ಲಿ?: ಹೌದು, ಉಪೇಂದ್ರ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್​​ 18ರಂದು ಟೀಸರ್​ ಬಿಡುಗಡೆಯಾಗಲಿದೆ. ಯುಐ ಟೀಸರ್​ ಊರ್ವಶಿ ಚಿತ್ರಮಂದಿರದಲ್ಲಿ ಮುಂದಿನ ಸೋಮವಾರ ಮಧ್ಯಾಹ್ನ 3 ಗಂಟೆಗೆ ಬಿಡುಗಡೆಯಾಗಲಿದೆ. ಕೊನೆಗೂ ಅಭಿಮಾನಿಗಳ ಆಸೆಯಂತೆ ಯುಐ ಟೀಸರ್​ ರಿಲೀಸ್​ ಆಗಲಿದ್ದು, ಕೆಲವೇ ದಿನಗಳು ಕಾಯಬೇಕಿದೆ.

ಸದ್ಯ ಯುಐ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಎಡಿಟಿಂಗ್​ ಕೆಲಸ ನಡೆಯುತ್ತಿದೆ. ಉಪೇಂದ್ರ ಈ ಚಿತ್ರದಲ್ಲಿ 3ಡಿ ಬಾಡಿ ಸ್ಕ್ಯಾನ್​ ಅನ್ನು ಬಳಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿ ಶೂಟ್​ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಈ ತಂತ್ರಜ್ಞಾನವನ್ನು ಜೇಮ್ಸ್​ ಕ್ಯಾಮರಾನ್​ 'ಅವತಾರ್​ 2' ಸಿನಿಮಾಗೆ ಬಳಸಲಾಗಿತ್ತು. ಇಷ್ಟೇ ಅಲ್ಲದೇ ಸುಮಾರು 14 ಸಾವಿರ ವಿಎಫ್​ಎಕ್ಸ್​ ಶಾಟ್ಸ್​ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ ಅನ್ನೋದು ಗಮನಾರ್ಹ.

ಇನ್ನು ಉಪ್ಪಿ ನಿರ್ದೇಶಿಸಿದ ಈವರೆಗಿನ ಸಿನಿಮಾಗಳಲ್ಲಿ ಇದು ದುಬಾರಿ ಎನ್ನಲಾಗಿದೆ. ಸಿನಿಮಾ ಬಜೆಟ್​ ಸುಮಾರು 100 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಲ್ಲದೇ ತಾಂತ್ರಿಕವಾಗಿಯೂ ಈ ಚಿತ್ರ ಅಡ್ವಾನ್ಸ್​ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಮತ್ತೊಂದೆಡೆ ಯುಐ ಚಿತ್ರ ರಿಲೀಸ್​ ಯಾವಾಗ? ಅನ್ನೋ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ. ನಿರ್ಮಾಪಕರ ಮೂಲಗಳ ಪ್ರಕಾರ, ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಹೈ ಬಜೆಟ್​ ಚಿತ್ರಗಳಲ್ಲಿ ಯುಐ ಕೂಡ ಒಂದು. ಹಲವಾರು ಸ್ಪೆಷಾಲಿಟಿಗಳಿಗೆ ಸೌತ್​ ಇಂಡಸ್ಟ್ರಿಯಲ್ಲಿ ಟಾಕ್​ ಆಗುತ್ತಿರುವ ಈ ಚಿತ್ರದ ಮೂಲಕ ಉಪ್ಪಿ ಪ್ರೇಕ್ಷಕರಿಗೆ ಏನು ಹೇಳಲು ಹೊರಟಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಉಪ್ಪಿ ನಿರ್ದೇಶನದ UI ಸಿನಿಮಾ ಎಡಿಟಿಂಗ್​ ಶುರು: 8 ವರ್ಷಗಳ ಬಳಿಕ ಮಾನಿಟರ್​ ಮುಂದೆ ಕುಳಿತ ರಿಯಲ್​ ಸ್ಟಾರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.