ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗವಲ್ಲದೇ ಸೌಥ್ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಟ್ಯಾಲೆಂಟೆಡ್ ನಿರ್ದೇಶಕ ಕಮ್ ನಟ ಅನ್ನೋದನ್ನು ಅವರು ಈಗಾಗಲೇ ಸಾಬೀತು ಪಡಿಸಿದ್ದಾರೆ. ಏಳು ವರ್ಷಗಳ ಬಳಿಕ ಉಪೇಂದ್ರ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದು, ಕುದುರೆ ಮುಖ ಆಕಾರದ ಫೋಸ್ಟರ್ನಲ್ಲಿ ಯು.ಐ ಅಂತಾ ಟೈಟಲ್ ಇಟ್ಟಿರೋ ಚಿತ್ರದ ಮುಹೂರ್ತ ಕಾರ್ಯಕ್ರಮ ಈ ತಿಂಗಳ ಆರಂಭದಲ್ಲಿ ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆದಿತ್ತು. ಈ ಡಿಫ್ರೆಂಟ್ ಟೈಟಲ್ ಈಗಾಗಲೇ ಸಖತ್ ಸದ್ದು ಮಾಡಿದ್ದು, ಸೋಮವಾರದಿಂದ ಚಿತ್ರೀಕರಣ ಕೂಡ ಶುರುವಾಗಿದೆ.
ಮಿನರ್ವ ಮಿಲ್‌ನಲ್ಲಿ ಸೆಟ್ ಹಾಕಿ ಮೊದಲ ಹಂತದ ಚಿತ್ರೀಕರಣವನ್ನು ಉಪ್ಪಿ ಆರಂಭಿಸಿದ್ದಾರೆ. ಚಿತ್ರಕ್ಕೆ ನಟಿ ಶ್ರೀನಿಧಿ ಶೆಟ್ಟಿ ಹಾಗು ತಮನ್ನಾರನ್ನು ಸಂಪರ್ಕ ಮಾಡಿಲ್ಲ. ಆದರೆ ಸೌಥ್ ಸಿನಿಮಾ ಇಂಡಸ್ಟ್ರಿಗೆ ಪರಿಚಯ ಇರುವ ನಟಿಯೇ ಈ ಸಿನಿಮಾಗೆ ನಾಯಕಿಯಾಗುವ ಸಾಧ್ಯತೆ ಇದೆ. ಆಯ್ಕೆ ಯಾವಾಗ ಎಂದು ಹೇಳೋದಿಕ್ಕೆ ಬರಲ್ಲ. ಸದ್ಯ ನಮ್ಮ ತಂಡ ಸಿನಿಮಾಗೆ ಸೂಕ್ತ ನಾಯಕಿಯ ಹುಡುಕಾಟದಲ್ಲಿದೆ ಎಂದು ನಿರ್ಮಾಪಕ ಕೆ.ಪಿ ಶ್ರೀಕಾಂತ್ ತಿಳಿಸಿದ್ದಾರೆ.
ಸೂಪರ್ ಸ್ಟಾರ್ ಉಪೇಂದ್ರ ನಿನ್ನೆಯಿಂದ ಫೀಲ್ಡಿಗಿಳಿದಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆಯೇ ಇದೆ. ಲಹರಿ ಫಿಲಂಸ್, ವೀನಸ್ ಎಂಟರ್ಪ್ರೈಸಸ್ ಜಂಟಿಯಾಗಿ ನಿರ್ಮಿಸುತ್ತಿರುವ ಯು-ಐ ಚಿತ್ರಕ್ಕೆ ಯುವ ತಂತ್ರಜ್ಞರು ಕೆಲಸ ಮಾಡುತ್ತಿರುವುದು ವಿಶೇಷವೇ ಸರಿ.
ಇದನ್ನೂ ಓದಿ: ಹಾಲಿವುಡ್ ಸಿನಿಮಾ 'ಬೀಸ್ಟ್' ಪೋಸ್ಟರ್ನ ಕಾಪಿ ಮಾಡಿದ್ಯಾ 'ಪಠಾಣ್' ?