ETV Bharat / entertainment

ಸೆನ್ಸಾರ್ ಪಾಸಾದ 'ತ್ರಿವಿಕ್ರಮ'.. ಮಗನಿಗೆ ಕ್ರೇಜಿಸ್ಟಾರ್ ಹೇಳಿದ್ರು ಈ ಕಿವಿಮಾತು - Trivikrama kannada cinema crazy star ravichandran talk

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಸಿನಿಮಾ ಇದೇ ಜೂನ್ 24 ರಂದು ಬಿಡುಗಡೆಯಾಗಲಿದೆ.

ಸೆನ್ಸಾರ್  ಪಾಸಾದ ತ್ರಿವಿಕ್ರಮ : ಮಗ ವಿಕ್ರಮ್ ಗೆ  ಕ್ರೇಜಿಸ್ಟಾರ್   ಕಿವಿ ಮಾತು !

author img

By

Published : Jun 20, 2022, 7:19 PM IST

ಕನ್ನಡ ಚಿತ್ರರಂಗದ ಶೋ ಮ್ಯಾನ್ ಎಂದು ಕರೆಯಿಸಿಕೊಳ್ಳುವ ನಟ ಕ್ರೇಜಿಸ್ಟಾರ್ ವಿ.ರವಿಚಂದ್ರನ್. ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮ ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಟ್ರೈಲರ್ ಮತ್ತು ಹಾಡುಗಳಿಂದ ಸದ್ದು ಮಾಡಿರೋ ತ್ರಿವಿಕ್ರಮ ಸಿನಿಮಾ, ಸೆನ್ಸಾರ್ ನಲ್ಲಿ ಯು/ಎ ಅರ್ಹತಾ ಪತ್ರ ಪಡೆಯುವ ಮೂಲಕ ಅಧಿಕೃತವಾಗಿ ಬಿಡುಗಡೆಗೆ ಸಿದ್ಧವಾಗಿದೆ.

ತ್ರಿವಿಕ್ರಮ ಸಿನೆಮಾದ ಸೆನ್ಸಾರ್ ಪ್ರಕ್ರಿಯೆ ಪೂರ್ಣ
ತ್ರಿವಿಕ್ರಮ ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಪೂರ್ಣ

ಇತ್ತೀಚಿಗೆ ನಡೆದ ತ್ರಿವಿಕ್ರಮ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಡಾಲಿ ಧನಂಜಯ್, ಸುಮನ್, ಶೃತಿ, ನಿಶ್ವಿಕಾ ನಾಯ್ಡು ಹಾಗೂ ಮನುರಂಜನ್ ಸೇರಿದಂತೆ ಸಾಕಷ್ಟು ಸ್ಯಾಂಡಲ್ ವುಡ್ ನಟ ನಟಿಯರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಸಂಗೀತ ಸಂಜೆ ಪ್ರಮುಖ ಆಕರ್ಷಣೆಯಾಗಿತ್ತು.

ಈ ಅದ್ಧೂರಿ ವೇದಿಕೆಯಲ್ಲಿ ಮಾತನಾಡಿದ ರವಿಚಂದ್ರನ್, ಮಗ ವಿಕ್ರಮ್ ಗೆ ಒಂದು ಕಿವಿಮಾತು ಹೇಳಿದರು. ನೀವು ರವಿಚಂದ್ರನ್ ಮಕ್ಕಳು ಎಂದು ಗುರುತಿಸಿಕೊಳ್ಳಬಾರದು. ನಿಮ್ಮ ಸ್ವಂತ ಪ್ರತಿಭೆಯ ಜೊತೆಗೆ ನಿಮ್ಮ ಸಿನಿಮಾ ಮೂಲಕ ನೀವು ಗುರುತಿಸಿಕೊಳ್ಳಬೇಕು. ಯಾಕೆಂದರೆ ನಾನು ಪ್ರೇಮಲೋಕ ಸಿನಿಮಾ ಮಾಡಿದಾಗ, ನಮ್ಮ ಅಪ್ಪ ಸಿನಿಮಾ ನೋಡಿ ನನ್ನ ಅಪ್ಪಿಕೊಂಡಿದ್ದರು. ಆ ರೀತಿ ನೀವು ಗುರುತಿಸಿಕೊಳ್ಳಬೇಕು ಎಂದರು‌. ನನ್ನ ಹೆಂಡತಿ ಸುಮತಿ, ಏಕಾಂಗಿ ಸಿನಿಮಾದ ಸಮಯದಲ್ಲಿ, ನಿನಗೆ ಹೀರೋಯಿನ್ ಇಲ್ಲದೆ ನಿನಗೆ ಸಿನಿಮಾ ಮಾಡೋದಿಕ್ಕೆ ಬರೋಲ್ಲ ಅಂತಾ ಹೇಳಿದ್ದಳು. ಆದರೆ ಆ ಸಿನಿಮಾ ನನ್ನನ್ನು ಏಕಾಂಗಿ ಮಾಡಿ ಬಿಡ್ತು. ಆ ಬಳಿಕ ಮತ್ತೆ ನನ್ನ ಹೆಂಡತಿ ಬಂದು, ನಿನಗೆ ಇಷ್ಟ ಬಂದ ಹಾಗೆ ಸಿನಿಮಾ ಮಾಡು ಎಂದು ಹೇಳಿದಳು. ಆ ಸಮಯದಲ್ಲಿ ನಾನು ಮಾಡಿದ ಸಿನಿಮಾ ಮಲ್ಲ. ಇದೆನ್ನೆಲ್ಲ ನಾನು ಮಾಡಿರೋದು ಅಭಿಮಾನಿಗಳಿಗೋಸ್ಕರ ಎಂದು ರವಿಚಂದ್ರನ್ ಹೇಳಿದರು.

ಸಹನಾ ಮೂರ್ತಿ ನಿರ್ದೇಶನದ ತ್ರಿವಿಕ್ರಮ ಚಿತ್ರವನ್ನು ಸೋಮಣ್ಣ ಟಾಕೀಸ್ ಬ್ಯಾನರ್ ಆಡಿಯಲ್ಲಿ ರಾಮ್ಕೋ ಸೋಮಣ್ಣ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಸಿನಿಮಾದಲ್ಲಿ ಹಿರಿಯ ನಟಿ ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ನಟಿಸಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ. ಪ್ರಕಾಶ್ ಸಂಕಲನವಿದೆ. ವಿಕ್ರಮ್ ಅಭಿನಯದ ಚೊಚ್ಚಲ ಸಿನಿಮಾ ತ್ರಿವಿಕ್ರಮ ಜೂನ್ 24 ರಂದು ಬಿಡುಗಡೆಯಾಗಲಿದೆ.

ಓದಿ : ಅನುಪಮ್​ ಖೇರ್​ರ 525 ನೇ ಸಿನಿಮಾ 'ದಿ ಸಿಗ್ನೇಚರ್'​.. ಟ್ವಿಟ್ಟರ್​ನಲ್ಲಿ ಫಸ್ಟ್​ಲುಕ್​ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.