ETV Bharat / entertainment

ಅಭಿಮಾನಿಗಳ ಜೊತೆ ತ್ರಿಬಲ್ ರೈಡಿಂಗ್ ಹೊರಟ ಗೋಲ್ಡನ್ ಸ್ಟಾರ್ - ಈಟಿವಿ ಭಾರತ ಕನ್ನಡ ನ್ಯೂಸ್​​​

ಗೋಲ್ಡನ್ ಸ್ಟಾರ್ ಗಣೇಶ್​ ಅಭಿನಯದ ನಿರ್ದೇಶಕ ಮಹೇಶ್ ಗೌಡ ನಿರ್ದೇಶನದ ಬಹು ನಿರೀಕ್ಷಿತ ಸಿನೆಮಾ ತ್ರಿಬಲ್ ರೈಡಿಂಗ್ ಇದೇ ನವೆಂಬರ್ 25ರಂದು ತೆರೆ ಕಾಣಲಿದೆ.

triple-riding-kannada-movie-releasing-on-25-november
ಅಭಿಮಾನಿಗಳ ಜೊತೆ ಬೈಕ್ ರೈಡಿಂಗ್ ಹೊರಟ ಗೋಲ್ಡನ್ ಸ್ಟಾರ್
author img

By

Published : Nov 21, 2022, 7:50 PM IST

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ನಿರ್ದೇಶಕ ಮಹೇಶ್ ಗೌಡ ನಿರ್ದೇಶನದ ಬಹು ನಿರೀಕ್ಷಿತ ಸಿನೆಮಾ ತ್ರಿಬಲ್ ರೈಡಿಂಗ್. ಗಾಳಿಪಟ 2 ಸಿನಿಮಾದ ಸಕ್ಸಸ್ ನಂತರ ಗಣಿ ಸ್ಟಾರ್ ವ್ಯಾಲ್ಯೂ ಹೆಚ್ಚಾಗಿದ್ದು, ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಟ್ರೈಲರ್ ಹಾಗು ಹಾಡುಗಳಿಂದಲೇ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಬೇಜಾನ್ ಸೌಂಡ್ ಮಾಡುತ್ತಿರುವ ತ್ರಿಬಲ್ ರೈಡಿಂಗ್ ಚಿತ್ರತಂಡ ಅಭಿಮಾನಿಗಳನ್ನು ಭೇಟಿ ಮಾಡಿ ವಿಶಿಷ್ಟ ಪ್ರಚಾರದಲ್ಲಿ ತೊಡಗಿದೆ.

ಇನ್ನು, ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಎಂಬ ಹಾಡಿಗೆ ಗೋಲ್ಡನ್ ಸ್ಟಾರ್ ಮಸ್ತ್ ಸ್ಟೆಪ್ ಹಾಕಿದ್ದಾರೆ. ಚಿತ್ರದಲ್ಲಿ ಗಣಿ ಇಂಟ್ರುಡಕ್ಷನ್ ಸಾಂಗ್ ಇದಾಗಿದ್ದು, ಬಹಳ ಅದ್ದೂರಿ ವೆಚ್ಚದಲ್ಲಿ ಮೂಡಿ ಬಂದಿರುವ ಹಾಡು ಇದಾಗಿದೆ.

ಈ ಹಾಡಿಗೆ ಡ್ಯಾನ್ಸ್ ಮಾಡುವ ಚಾಲೆಂಜ್ ವೊಂದನ್ನು ಅಭಿಮಾನಿಗಳಿಗೆ ಚಿತ್ರತಂಡ ಕೊಟ್ಟಿತ್ತು. ಈ ಹಾಡಿಗೆ ಚೆನ್ನಾಗಿ ಡ್ಯಾನ್ಸ್ ಮಾಡುವ ಅಭಿಮಾನಿಗಳಿಗೆ ನಟ ಗಣೇಶ್, ನಟಿಯರಾದ ರಚನಾ ಇಂದರ್, ಮೇಘಾ ಶೆಟ್ಟಿ ಜೊತೆ ಬೈಕ್ ರೈಡಿಂಗ್ ಹೋಗುವ ಬಂಪರ್​ ಆಫರ್ ಕೊಡಲಾಗಿತ್ತು. ಅದರಂತೆ ಸಾಕಷ್ಟು ಅಭಿಮಾನಿಗಳು ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹಾಡಿಗೆ ಡ್ಯಾನ್ಸ್ ಮಾಡಿದರು. ಅದರಲ್ಲಿ ಚೆನ್ನಾಗಿ ಡ್ಯಾನ್ಸ್ ಮಾಡಿದವರನ್ನು ಆಯ್ದು ಗಣೇಶ್ ಹಾಗು ನಟಿಯರಾದ ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ಬೈಕ್ ರೈಡಿಂಗ್ ಕರೆದುಕೊಂಡು ಹೋಗಿ ಅಭಿಮಾನಿಗಳ ಆಸೆಯನ್ನು ಪೂರೈಸಿದರು.

ಅಭಿಮಾನಿಗಳ ಜೊತೆ ಬೈಕ್ ರೈಡಿಂಗ್ ಹೊರಟ ಗೋಲ್ಡನ್ ಸ್ಟಾರ್

ಹೆಸರಿಗೆ ತಕ್ಕಂತೆ ತ್ರಿಬಲ್ ರೈಡಿಂಗ್ ಲವ್ ಸ್ಟೋರಿ ಜೊತೆಗೆ ಔಟ್ ಆ್ಯಂಡ್​ ಔಟ್ ಕಾಮಿಡಿ ಕಥೆಯನ್ನು ಹೊಂದಿರುವ ಸಿನಿಮಾ ಇದಾಗಿದೆ. ಹೀಗಾಗಿ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇನ್ನು, ಚಿತ್ರದಲ್ಲಿ ನಟಿಯರಾದ‌ ರಚನಾ ಇಂದರ್, ಮೇಘಾ ಶೆಟ್ಟಿ ಹಾಗು ಅದಿತಿ ಪ್ರಭುದೇವ ಜೊತೆ ಗಣೇಶ್ ರೊಮ್ಯಾನ್ಸ್ ಮಾಡಲಿದ್ದಾರೆ. ಇವರಲ್ಲದೆ ಸಾಧು ಕೋಕಿಲ, ರವಿಶಂಕರ್ ಗೌಡ, ಕುರಿ ಪ್ರತಾಪ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ‌.

ಈ ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನವಿದ್ದು, ಆನಂದ್ ಅವರ ಕ್ಯಾಮರಾ ವರ್ಕ್ ಇದೆ. ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಸಾಹಿತ್ಯ ಚಿತ್ರಕ್ಕಿದೆ. ರಗಡ್ ಅಂತಹ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿರೋ ನಿರ್ದೇಶಕ ಮಹೇಶ್ ಗೌಡ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ಮಹೇಶ್ ಗೌಡ ಈ ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದಾರೆ. ಕೃಪಾಳು ಎಂಟರ್​ಟೈನ್​ಮೆಂಟ್ ಲಾಂಛನದಲ್ಲಿ, ವೈ.ಎಮ್​​. ರಾಮ್ ಗೋಪಾಲ್ ಅದ್ಧೂರಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಒಟ್ಟಿನಲ್ಲಿ ಗಣೇಶ್ ಮೂರು ಜನ ಸುಂದರಿಯರ ಜೊತೆ ಬರ್ತಾ ಇರೋ ತ್ರಿಬಲ್ ರೈಡಿಂಗ್ ಸಿನಿಮಾ ಇದೇ ನವೆಂಬರ್ 25ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಹೊಸ ಪ್ರತಿಭೆಗಳು ಹೊತ್ತು ತಂದ ಸಿರಿ ಲಂಬೋದರ ವಿವಾಹ ಟೀಸರ್​ಗೆ ರಮೇಶ್ ಅರವಿಂದ್ ಫಿದಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.