ETV Bharat / entertainment

'ಟ್ರೈಲರ್​​ ಆಫ್​ ದಿ ಸೆಂಚುರಿ' 'ಜವಾನ್'​ ಚಿತ್ರದ ಟ್ರೈಲರ್​ ನೀರಿಕ್ಷೆಗೆ ಮತ್ತಷ್ಟು ಕಿಚ್ಚು ಹೊತ್ತಿಸಿದ ಕರಣ್​ ಜೋಹರ್​​ - ಈಟಿವಿ ಭಾರತ್​ ಕನ್ನಡ

ಈಗಾಗಲೇ ಅಭಿಮಾನಿಗಳಲ್ಲಿ 'ಜವಾನ್'​ ಚಿತ್ರದ ಟ್ರೈಲರ್​ ಬಗ್ಗೆ ಸಾಕಷ್ಟು ಕಾತುರತೆ ಹೆಚ್ಚಿದೆ.

Trailer of the Century Karan Johar has created more excitement for the trailer of Jawawan

author img

By ETV Bharat Karnataka Team

Published : Aug 28, 2023, 11:20 AM IST

ಮುಂಬೈ: ನಟ ಶಾರುಖ್​ ಖಾನ್​ ಅಭಿಮಾನಿಗಳು ಅವರ ಬಹು ನಿರೀಕ್ಷಿತ ಆಕ್ಷ್ಯನ್​ ಭರಿತ ಚಿತ್ರವಾಗಿರುವ 'ಜವಾನ್'​ ಸಿನಿಮಾದ ಟ್ರೈಲರ್​​ಗೆ ಎದುರು ನೋಡುತ್ತಿದ್ದಾರೆ. 'ಪಠಾಣ್'​ ಸಿನಿಮಾ ಬಳಿಕ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದ್ದು, 'ಜವಾನ್'​ನಲ್ಲಿ ವಿಭಿನ್ನ ಲುಕ್​ ನಲ್ಲಿ ಕೂಡ ನಟ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾ ಹೇಗಿರಲಿದೆ, ಟ್ರೈಲರ್​ ಹೇಗಿರಲಿದೆ ಎಂಬ ಪ್ರಶ್ನೆಗಳು ಅವರಲ್ಲಿ ಇದೆ. ನಟ ಶಾರುಖ್​ ಇತ್ತೀಚೆಗೆ ಟ್ವಿಟರ್​ನಲ್ಲಿ ಆಸ್ಕ್​ ಎಸ್​ಆರ್​ಕೆ ಪ್ರಶ್ನಾವಳಿ ನಡೆಸಿದಾಗ ಅವರಿಗೆ ಎದುರಾದ ಪ್ರಮುಖ ಪ್ರಶ್ನೆ ಎಂದರೆ, ಜವಾನ್​ ಟ್ರೈಲರ್​ ಯಾವಾಗ ಬಿಡುಗಡೆ ಆಗಲಿದೆ ಎಂಬುದಾಗಿದೆ.

ಕರಣ್​ ಜೋಹರ್​ ಪೋಸ್ಟ್​​
ಕರಣ್​ ಜೋಹರ್​ ಪೋಸ್ಟ್​​

ಇದಕ್ಕೆ ಉತ್ತರಿಸಿದ ಶಾರುಖ್​ 'ಟ್ರೈಲರ್​ ಬರಲಿಲ್ಲ ಎಂದರೆ ಸಿನಿಮಾವನ್ನು ನೋಡುವುದಿಲ್ವಾ ಎಂದು ಪ್ರಶ್ನಿಸಿದರು. ಟ್ರೈಲರ್​ ಟ್ರೈಲರ್​ ಟ್ರೈಲರ್​... ಬರುತ್ತದೆ ತಾಳ್ಮೆ ಇರಲಿ' ಎಂದು ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದರು.

ಇದೀಗ ಮತ್ತು ಶಾರುಖ್​ ಅಭಿಮಾನಿಗಳ ಕುತೂಹಲ ಹೆಚ್ಚಿದೆ. ಇದಕ್ಕೆ ಕಾರಣ ನಿರ್ದೇಶಕ ಕರಣ್​ ಜೋಹರ್​, ತಮ್ಮ ಇನ್​​ಸ್ಟಾಗ್ರಾಂನಲ್ಲಿ 'ತಾವು ಈಗಷ್ಟೇ ಶತಮಾನದ ಟ್ರೈಲರ್​ ನೋಡಿರುವುದಾಗಿ' ಜವಾನ್​ ಸಿನಿಮಾದ ಟ್ರೈಲರ್​ ಕುರಿತು ಶ್ಲಾಘಿಸಿದ್ದಾರೆ.

ಕರಣ್​ ಜೋಹರ್​ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ 'ಜವಾನ್'​ ತಾಪ ಹೆಚ್ಚಿದೆ. ಅನೇಕ ಅಭಿಮಾನಿಗಳು, 'ಜವಾನ್'​ ಟ್ರೈಲರ್​ಗಾಗಿ ಇನ್ನೂ ಕಾಯುತ್ತಿದ್ದೇವೆ. ಕರಣ್​ ಹೊಗಳಿದ್ದು, ಜವಾನ್​ ಟ್ರೈಲರ್​ ಬಗ್ಗೆಯಾ ಎಂದು ಕೇಳಿದ್ದಾರೆ. ಕರಣ್​ ಶತಮಾನದ ಟ್ರೈಲರ್​ ನೋಡಿದೆ ಎಂದು ಬರೆದಿದ್ದು, ಎಲ್ಲಿಯೂ ಜವಾನ್​ ಹೆಸರನ್ನು ಉಲ್ಲೇಖಿಸಿಲ್ಲ. ಆದಾಗ್ಯೂ ಅನೇಕ ಮಂದಿ ಇದನ್ನು ಎಸ್​ಆರ್​ಕೆ ಚಿತ್ರ ಎಂದು ಭಾವಿಸಿದ್ದು, ಅಭಿಮಾನಿಗಳು ಈ ಪೋಸ್ಟ್​ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಿಪೋಸ್ಟ್​ ಮಾಡಿದ್ದಾರೆ.

ತಮಿಳು ನಿರ್ದೇಶಕ ಅಟ್ಲಿಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಜವಾನ್'​ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ನಟ ಶಾರುಖ್​ ಜೊತೆಗೆ ನಟಿ ನಯನ ತಾರ ಮತ್ತು ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಿಯಾಮಣಿ ಮತ್ತು ಸಾನ್ಯಾ ಮಲ್ಹೋತ್ರಾ ಕೂಡ ಬಣ್ಣ ಹಚ್ಚಿದ್ದಾರೆ. ನಟಿ ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ಇದೇ ಸೆಪ್ಟೆಂಬರ್​ 7ರಂದು ವರ್ಲ್ಡ್​ ವೈಲ್ಡ್​​ ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ: Jawan: ಎಸ್​ಆರ್​ಕೆ ನಟನೆಯ ಜವಾನ್​ ಕ್ರೇಜ್​ - 15 ನಿಮಿಷದೊಳಗೆ ಮೊದಲ ದಿನದ ಟಿಕೆಟ್​ ಸೇಲ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.