ETV Bharat / entertainment

ಅದಿತಿ ಪ್ರಭುದೇವ ಮನಸು ಕದಿಯಲು ಸರ್ಕಸ್ ಮಾಡುತ್ತಿರೋ ಈರೇಗೌಡ - ETV Bharath Kannada news

Totapuri Chapter 2: ತೋತಾಪುರಿ 2 ಸಿನಿಮಾದ ಜಗ್ಗೇಶ್​ ಮತ್ತು ಅದಿತಿ ಪ್ರಭುದೇವ ಕಾಂಬಿನೇಶನ್​ನ ಈರೇಗೌಡ ಹಾಡಿನ ತುಣುಕು ಬಿಡುಗಡೆ ಆಗಿದ್ದು, ಗಜಲ್ ಶೈಲಿಯಲ್ಲಿ ಮೂಡಿಬಂದಿದೆ.

Aditi Prabhudeva and Jaggesh
Aditi Prabhudeva and Jaggesh
author img

By ETV Bharat Karnataka Team

Published : Sep 13, 2023, 7:53 PM IST

Updated : Sep 14, 2023, 12:50 PM IST

ಜಗ್ಗೇಶ್​ ಮತ್ತು ಅದಿತಿ ಪ್ರಭುದೇವ ಕಾಂಬಿನೇಶನ್​ನ ಈರೇಗೌಡ ಹಾಡಿನ ತುಣುಕು

ಜಗತ್ತು ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು ಜನರು. ಭಾವೈಕ್ಯತೆಯ ಸಂದೇಶ ಸಾರುವ ಸ್ಟ್ರಾಂಗ್ ಕಂಟೆಂಟ್ ಒಳಗೊಂಡಿದ್ದ ತೋತಾಪುರಿ ಚಿತ್ರವು ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು, ಆಗಲೇ ತೋತಾಪುರಿ‌ ಚಿತ್ರದ ಎರಡನೇ ಭಾಗವನ್ನು ಮಾಡುತ್ತಿರುವುದಾಗಿ ನಿರ್ದೇಶಕ ವಿಜಯಪ್ರಸಾದ್ ಸೂಚನೆ ನೀಡಿದ್ದರು. ಅದರಂತೆ ಈಗ ತೋತಾಪುರಿ ಭಾಗ 2 ನಿರ್ಮಾಣವಾಗಿದ್ದು, ಶೀಘ್ರದಲ್ಲೇ ತೆರೆ ಕಾಣಲು ಸಿದ್ದವಾಗುತ್ತಿದೆ.

ಸದ್ಯಕ್ಕೆ ತೋತಾಪುರಿ 2 ಚಿತ್ರದ ಮೇಕಿಂಗ್ ಹಾಗು ಹಾಡುಗಳಿಂದಲೇ ಟಾಕ್ ಆಗುತ್ತಿರುವ ತೋತಾಪುರಿ 2 ಚಿತ್ರದ ಒಂದಿಷ್ಟು ತಮಾಷೆ, ರೊಮ್ಯಾನ್ಸ್ ಇರುವ ಹಾಡೊಂದನ್ನ ಚಿತ್ರತಂಡ ರಿವೀಲ್ ಮಾಡಿದೆ. ತೋತಾಪುರಿ ಚಿತ್ರದ ಮೊದಲ ಭಾಗದಲ್ಲಿ ಬಾಗ್ಲು ತೆಗಿ ಮೇರಿ ಜಾನ್ ಹಾಡ ಸೂಪರ್ ಹಿಟ್ ಆಗಿತ್ತು. ಈ ಹಾಡು ರೊಮ್ಯಾಂಟಿಕ್‌ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದ್ದ ಕಾರಣ ಮಿಲಿಯನ್ ಜನ ನೋಡಿ ಮೆಚ್ಚಿಕೊಂಡಿದ್ರು.

ಇದೀಗ ತೋತಾಪರಿ 2 ಚಿತ್ರದಲ್ಲು ಕಣ್ಣಾಗೆ ಹೀರುತಾನ್ವೇ ಈರೇಗೌಡ ಎಂಬ ಹಾಡು ಬಿಡುಗಡೆ ಆಗಿದ್ದು, ಗಜಲ್ ಶೈಲಿಯಲ್ಲಿ ಈ ಹಾಡು ಮೂಡಿ ಬಂದಿದೆ. ಜಗ್ಗೇಶ್ ಈರೇಗೌಡನಾಗಿ ಅದಿತಿ ಪ್ರಭುದೇವರನ್ನು ಒಲಿಸಿಕೊಳ್ಳುವ ಹಾಡು ಇದಾಗಿದೆ. ಈ ಹಾಡಿನಲ್ಲಿ ಜಗ್ಗೇಶ್ ಹಾಗೂ ಅದಿತಿ ಕೆಮಿಸ್ಟ್ರಿ ಸಖತ್ತಾಗೆ ವರ್ಕ್ ಔಟ್ ಆಗಿದೆ.

ತೋತಾಪುರಿ ಮೊದಲ ಭಾಗದಲ್ಲಿ ಜಾತಿ, ಧರ್ಮ ಹಾಗೂ ಮಡಿವಂತಿಕೆಯತಂಹ ಗಂಭೀರ ವಿಷಯಗಳನ್ನ ಕಾಮಿಡಿ ಮೂಲಕ ಹೇಳಲಾಗಿತ್ತು. ಇದೀಗ ತೋತಾಪುರಿ 2 ಚಿತ್ರದಲ್ಲಿ ಗಂಭೀರ ವಿಚಾರದ ಜೊತೆಗೆ ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾಗುವ ವಿಷಯಗಳನ್ನು ಸೇರಿಸಿ ಮತ್ತೆ ರೀ ಶೂಟ್ ಮಾಡಲಾಗಿದೆ. ಅದಕ್ಕೆ ಸಣ್ಣ ಉದಾಹರಣೆ ಎಂದರೆ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ನಡುವಿನ ಈ ಹಾಡು.

ಗೀತೆರಚನೆಕಾರ ಹೃದಯಶಿವ ಈ ಹಾಡನ್ನ ಬರೆದಿದ್ದು, ಅಷ್ಟೇ ಸೊಗಸಾಗಿ ಗಾಯಕ ಹೇಮಂತ್ ಹಾಡಿದ್ದಾರೆ. ಈ ಹಿಂದೆ ಹೃದಯಶಿವ ಸಾಹಿತ್ಯ ರಚಿಸಿರುವ ಮೊದಲ ಮಳೆ ಮನದೊಳಗೆ ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್​ ಮಾಡಿತ್ತು. ಡಾಲಿ ಧನಂಜಯ್‌ ಹಾಗೂ ಸುಮನ್‌ ರಂಗನಾಥ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ ಮಳೆ ಹಾಡು ಮೂಡಿ ಬಂದಿತ್ತು. ಈ ಮೆಲೋಡಿ ಹಾಡಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾದತ್‌ ಸೇರಿದಂತೆ ಬೃಹತ್‌ ತಾರಾಗಣವೇ ಇದೆ. ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಶಿವಲಿಂಗ ಅಂತಹ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರೋ ನಿರ್ಮಾಪಕ ಕೆ.ಎ. ಸುರೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ವಿಜಯಪ್ರಸಾದ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಷ್ಟೆಲ್ಲಾ ವಿಶೇಷತೆ ಇರುವ ತೋತಾಪುರಿ 2 ಚಿತ್ರವನ್ನ ದೀಪಾವಳಿ ಹಬ್ಬಕ್ಕೆ ರಿಲೀಸ್ ಮಾಡಲು ನಿರ್ಮಾಪಕ ಸುರೇಶ್ ಸಿದ್ಧತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 'ರಣಹದ್ದು' ಫಸ್ಟ್ ಲುಕ್ ರಿಲೀಸ್​ ಮಾಡಿದ ಜಂಭದ ಹುಡುಗಿ ಪ್ರಿಯಾ ಹಾಸನ್

Last Updated : Sep 14, 2023, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.