ETV Bharat / entertainment

'ಸಿನಿಮಾ ಮೂಲಕ ಟಿಪ್ಪು ಭಿನ್ನ ಮುಖ ಪರಿಚಯಿಸಲು ಚಿತ್ರತಂಡ ಸನ್ನದ್ಧ': ಪವನ್ ಶರ್ಮಾ - Tipu movie

ಒಂದು ಕಡೆ ಕರ್ನಾಟಕ ಎಲೆಕ್ಷನ್​ ಕಾವು ಜೋರಾಗಿದೆ. ಈ ನಡುವೆ ಟಿಪ್ಪು ಸುಲ್ತಾನ್ ಇತಿಹಾಸ ಮತ್ತೊಂದು ಮಗ್ಗಲನ್ನು ಒಳಗೊಂಡಿರುವ ಇತಿಹಾಸ ಪ್ರಸ್ತುತಪಡಿಸಲಿದ್ದೇವೆ ಎಂದು 'ಟಿಪ್ಪು' ಚಿತ್ರತಂಡ ಹೇಳಿಕೊಂಡಿದೆ.

Tippu film details
ಟಿಪ್ಪು ಸಿನಿಮಾ ಡೀಟೆಲ್ಸ್​
author img

By

Published : May 4, 2023, 1:48 PM IST

Updated : May 4, 2023, 2:07 PM IST

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ಕೆಲ ದಿನಗಳು ಬಾಕಿ ಇದ್ದು, 'ಟಿಪ್ಪು' ಚಿತ್ರದ ನಿರ್ಮಾಪಕರು, ಮೈಸೂರಿನ ರಾಜನ "ಭಿನ್ನ ಮುಖ"ವನ್ನು ಪ್ರಸ್ತುತಪಡಿಸಲಿದ್ದೇವೆ ಎಂದು ಘೋಷಿಸಿದ್ದಾರೆ.

ಟಿಪ್ಪು ಸುಲ್ತಾನ್ ಅನ್ನು ಸ್ವಾತಂತ್ರ್ಯ ಹೋರಾಟಗಾರ, ಸಮರ್ಥ ಆಡಳಿತಗಾರ ಎಂದು ಕರೆಯಲಾಗುತ್ತಿತ್ತು. ಕೆಲ ವರ್ಷಗಳಿಂದ, ಕರ್ನಾಟಕದಲ್ಲಿ ಬಿಜೆಪಿಯು ಟಿಪ್ಪುವಿನ ಬಲವಂತದ ಮತಾಂತರ ವಿಚಾರವನ್ನು ರಾಜಕೀಯ ವಿಷಯವನ್ನಾಗಿ ಮಾಡಿಕೊಂಡಿದೆ ಎಂಬ ಆರೋಪವಿದೆ. ಅದೇ ವಿಚಾರವನ್ನು ಚಿತ್ರ ಹೈಲೈಟ್ ಮಾಡಲು ಪ್ರಯತ್ನಿಸಲಿದೆ. ಬಿಜೆಪಿಯ ಈಶಾನ್ಯ ರಾಜಕೀಯ ತಂತ್ರಜ್ಞ, ಮಣಿಪುರ ಮುಖ್ಯಮಂತ್ರಿಯ ಸಲಹೆಗಾರ ಮತ್ತು ಪ್ರಸಿದ್ಧ ಲೇಖಕ ಮತ್ತು ಟಿವಿ ನಿರೂಪಕ ರಜತ್ ಸೇಥಿ ( Rajat Sethi) ಅವರು ಚಿತ್ರಕ್ಕಾಗಿ ಸಂಶೋಧನೆ ನಡೆಸಿದ್ದಾರೆ.

ಚಿತ್ರ ನಿರ್ದೇಶಕ ಪವನ್ ಶರ್ಮಾ (Pawan Sharma) ಮಾತನಾಡಿ, "ಟಿಪ್ಪು ಸುಲ್ತಾನ್ ಬಗ್ಗೆ ಶಾಲೆಯಲ್ಲಿ ನಮಗೆ ಕಲಿಸಿರುವ ವಿಷಯವೇ ಬೇರೆಯಾಗಿದೆ. ಅವರ ನೈಜತೆಯನ್ನು ತಿಳಿದುಕೊಳ್ಳುವ ವೇಳೆ ಸಂಪೂರ್ಣವಾಗಿ ಬೆಚ್ಚಿಬಿದ್ದಿದ್ದೇನೆ ಮತ್ತು ಈ ವಿಷಯಗಳ ಬಗ್ಗೆ ಭ್ರಮನಿರಸನಗೊಂಡಿದ್ದೇನೆ. ನನ್ನ ಈ ಚಿತ್ರದ ಮೂಲಕ ಟಿಪ್ಪು ಸುಲ್ತಾನ್​​ ವಾಸ್ತವ ತೋರಿಸಲು ಧೈರ್ಯ ಮಾಡಿದ್ದೇನೆ. ಈ ಹಿಂದೆ ಅವರನ್ನು ಯೋಧ ಮತ್ತು ಮಹಾನ್​ ನಾಯಕರನ್ನಾಗಿ ಚಿತ್ರಿಸಲಾಗಿದೆ. ಟಿಪ್ಪು ಸುಲ್ತಾನ್​ನ ಮತಾಂತರ ಪ್ರಕ್ರಿಯೆ ಅವರ ತಂದೆ ಹೈದರ್ ಅಲಿ ಖಾನ್‌ಗಿಂತ ಕೆಟ್ಟದಾಗಿತ್ತು‘‘ ಎಂದು ಒತ್ತಿ ಹೇಳಿದ್ದಾರೆ.

ರಜತ್ ಸೇಥಿ, "ಇತಿಹಾಸವು ಅನೇಕ ವೀರರ ಕಥೆಯನ್ನು ನಿರ್ಲಕ್ಷಿಸಿದೆ. ಟಿಪ್ಪು ಅಂತಹ ಒಬ್ಬ ವ್ಯಕ್ತಿಯಯಾಗಿ ಪರಿಗಣಿಸಲಾಗಿದೆ. ಆದರೆ ಅವರ ಮತ್ತೊಂದು ಮುಖವನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಅಚ್ಚುಕಟ್ಟಾಗಿ ಮರೆ ಮಾಚಲಾಗಿದೆ'' ಎಂದು ಹೇಳಿದ್ದಾರೆ.

ಇದನ್ನೂ ಓದಿ: ''ಮತ್ತೊಂದು ಕೇರಳ ಸ್ಟೋರಿ'': ಮಸೀದಿಯಲ್ಲಿ ಹಿಂದೂ ವಿವಾಹ, ವಿಡಿಯೋ ಹಂಚಿಕೊಂಡ ಸಂಗೀತ ಮಾಂತ್ರಿಕ​ ರೆಹಮಾನ್

"ಇತಿಹಾಸ ಮಾತ್ರವಲ್ಲ, ಜನಪ್ರಿಯ ಸಂಸ್ಕೃತಿಗಳಾದ ಚಲನಚಿತ್ರಗಳು, ಚಿತ್ರಮಂದಿರಗಳು ಸೇರಿದಂತೆ ಇತ್ಯಾದಿಗಳು ಟಿಪ್ಪುವಿನ ನೈಜ ಚಿತ್ರಣವನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿವೆ. ಈ ಚಲನಚಿತ್ರವು ಅವರ ನಿರೂಪಣೆಯ ಮೇಲೆ ತಿದ್ದುಪಡಿ ಪ್ರಾರಂಭಿಸುವ ಒಂದು ವಿನಮ್ರ ಪ್ರಯತ್ನವಾಗಿದೆ" ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಒಟ್ಟಿಗೆ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಿದ ಪರಿ - ರಾಘವ್: ನಟಿಯನ್ನ ಅತ್ತಿಗೆ ಎಂದು ಕರೆದ ವೀಕ್ಷಕರು

'ಪಿಎಂ ನರೇಂದ್ರ ಮೋದಿ', 'ಸ್ವತಂತ್ರ ವೀರ ಸಾವರ್ಕರ್', 'ಅಟಲ್' ಅಥವಾ 'ಬಾಲ ಶಿವಾಜಿ' ಚಿತ್ರಗಳ ಹಿಂದೆ ಇರುವ ನಿರ್ಮಾಪಕ ಸಂದೀಪ್ ಸಿಂಗ್ ಮಾತನಾಡಿ, "ಇದು ನಾನು ವೈಯಕ್ತಿಕವಾಗಿ ನಂಬಿರುವ ಸಿನಿಮಾ. ನನ್ನ ಚಿತ್ರಗಳು ಸತ್ಯದ ಪರವಾಗಿ ನಿಲ್ಲುತ್ತವೆ. ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ತೋರಿಸಿರುವಂತೆ ಟಿಪ್ಪು ಅವರನ್ನು ಧೈರ್ಯಶಾಲಿ ಎಂದು ನಂಬುವಂತೆ ನಾನು ಕೂಡ ಬ್ರೈನ್‌ವಾಶ್​ಗೆ ಒಳಗಾಗಿದ್ದೆ. ಆದರೆ, ಅವರ ಮತ್ತೊಂದು ಮುಖ ಯಾರಿಗೂ ತಿಳಿದಿಲ್ಲ. ಭವಿಷ್ಯದ ಪೀಳಿಗೆಗೆ ಅವರ ಭಿನ್ನ ಮುಖವನ್ನು ಬಹಿರಂಗಪಡಿಸಲು ನಾನು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.

ಎರೋಸ್ ಇಂಟರ್‌ನ್ಯಾಷನಲ್, ರಶ್ಮಿ ಶರ್ಮಾ ಫಿಲ್ಮ್ಸ್ ಮತ್ತು ಸಂದೀಪ್ ಸಿಂಗ್ ನಿರ್ಮಾಣದ, 'ಟಿಪ್ಪು' ಸಿನಿಮಾ ಹಿಂದಿ, ಕನ್ನಡ, ತಮಿಳು ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. (ಕೃಪೆ - IANS COPY)

Last Updated : May 4, 2023, 2:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.