ETV Bharat / entertainment

ಟೈಗರ್​ ಈಸ್​​ ಬ್ಯಾಕ್​: ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ ಸಲ್ಲು ಕ್ಯಾಟ್​ ಸಿನಿಮಾದ ಹೊಸ ವಿಡಿಯೋ

Tiger 3: ಬಹುನಿರೀಕ್ಷಿತ ಸಿನಿಮಾ ''ಟೈಗರ್ 3''ರ ಪ್ರಮೋಶಲ್​ ವಿಡಿಯೋ ಅನಾವರಣಗೊಂಡಿದೆ.

author img

By ETV Bharat Karnataka Team

Published : Nov 3, 2023, 2:43 PM IST

Updated : Nov 3, 2023, 4:23 PM IST

Tiger is back
ಟೈಗರ್​ ಈಸ್​​ ಬ್ಯಾಕ್

ಭಾರತೀಯ ಸಿನಿಮಾ ಕ್ಷೇತ್ರದ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​, ಬಹುಬೇಡಿಕೆ ನಟಿ ಕತ್ರಿನಾ ಕೈಫ್​​, ಬಹುಸಮಯದಿಂದ ಹಿಂದಿ ಚಿತ್ರರಂಗದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರೋ ನಟ ಇಮ್ರಾನ್​ ಹಶ್ಮಿ ನಟನೆಯ ''ಟೈಗರ್ 3'' ಸಿನಿಮಾ 2023ರ ಬಹುನಿರೀಕ್ಷಿತ ಚಿತ್ರ. ಸಿನಿಮಾ ಪ್ರಮೋಶನ್​ ಈಗಾಗಲೇ ಆರಂಭಗೊಂಡಿದೆ. ಪ್ರತೀ ವಾರವೂ ಚಿತ್ರಕ್ಕೆ ಸಂಬಂಧಿಸಿದ ಅಪ್​ಡೇಟ್ಸ್ ಹಂಚಿಕೊಳ್ಳುವ ಮೂಲಕ ಚಿತ್ರತಂಡ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

  • " class="align-text-top noRightClick twitterSection" data="">

ಟೈಗರ್​ ಈಸ್​​ ಬ್ಯಾಕ್: ಇದೀಗ ''ಟೈಗರ್​ ಈಸ್​​ ಬ್ಯಾಕ್'' ಶೀರ್ಷಿಕೆಯಡಿ ಹೊಸ ಪ್ರಮೋಶಲ್​ ವಿಡಿಯೋವನ್ನು ಅನಾವರಣಗೊಳಿಸಲಾಗಿದೆ. ಆ್ಯಕ್ಷನ್​ ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ದೀಪಾವಳಿ ಸಂದರ್ಭ ಬಿಡುಗಡೆಯಾಗಲಿದ್ದು, ಇಂದು ಅನಾವರಣಗೊಂಡಿರುವ ಪ್ರಮೋಶಲ್​ ವಿಡಿಯೋ ಸಖತ್​ ಸದ್ದು ಮಾಡುತ್ತಿದೆ.

ಪ್ರೇಕ್ಷಕರನ್ನು ಕುತೂಹಲ ಲೋಕಕ್ಕೆ ತಳ್ಳಿದ ಪ್ರೋಮೋ: ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಸರಣಿಯ ಮುಂದಿನ ಇನ್​ಸ್ಟಾಲ್​ಮೆಂಟ್​​ 'ಟೈಗರ್ 3'. ಸಿನಿಮಾದ ಕ್ರೇಜ್​ ಮುಗಿಲೆತ್ತರಕ್ಕೆ ತಲುಪಿದೆ. ಟೀಸರ್, ಟ್ರೇಲರ್ ಮತ್ತು ಮೊದಲ ಹಾಡು ಬಿಡುಗಡೆ ಆಗಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಅಭಿಮಾನಿಗಳ ನಿರೀಕ್ಷೆ, ಕುತೂಹಲ ಹೆಚ್ಚಿಸುವ ನಿಟ್ಟಿನಲ್ಲಿ ಚಿತ್ರದ ಹೊಸ ಪ್ರೋಮೋವನ್ನು ಅನಾವರಣಗೊಳಿಸಲಾಗಿದೆ. ಮನೀಶ್​​ ಶರ್ಮಾ ನಿರ್ದೇಶನದ ಚಿತ್ರದಲ್ಲಿನ ಹೈ ಆ್ಯಕ್ಷನ್ ಸೀಕ್ವೆನ್ಸ್​, ನಾಯಕನಟ ಮತ್ತು ಎದುರಾಳಿ ನಡುವಿನ ಮುಖಾಮುಖಿ ದೃಶ್ಯಗಳು ಪ್ರೇಕ್ಷಕರನ್ನು ಕುತೂಹಲ ಲೋಕಕ್ಕೆ ತಳ್ಳಿದೆ.

ಅದ್ಭುತ ಆ್ಯಕ್ಷನ್​ ಸೀನ್​ಗಳು: ಸಿನಿಮಾ ಪ್ರಮೋಶನ್​​​​ ಭಾಗವಾಗಿ ಚಲನಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ (YRF) ಇಂದು ಅನಾವರಣಗೊಳಿಸಿರುವ 50 ಸೆಕೆಂಡುಗಳ ವಿಡಿಯೋ ಬಹಳ ರೋಮಾಂಚಕಾರಿಯಾಗಿದೆ. ಅದ್ಭುತ ಆ್ಯಕ್ಷನ್​ ಸೀನ್​ಗಳನ್ನು ಕಾಣಬಹುದು. ಸಲ್ಮಾನ್ ಖಾನ್ ಮತ್ತು ಇಮ್ರಾನ್ ಹಶ್ಮಿ ಮುಖಾಮುಖಿ ದೃಶ್ಯ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಇಮ್ರಾನ್‌ ಹಶ್ಮಿ ಪಾತ್ರವು ಟೈಗರ್‌ ಪಾತ್ರಧಾರಿ ಸಲ್ಮಾನ್​​ನ ರಾಷ್ಟ್ರವನ್ನು ಗುರಿಯಾಗಿಸಿರುವುದು ವಿಡಿಯೋದಲ್ಲಿ ಬಯಲಾಗಿದ್ದು, ಕಥಾಹಂದರದ ಮೇಲಿನ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ವಾ ವಾ ವೂಂ: ಎಸ್​​ಆರ್​ಕೆ ಪುತ್ರಿಯ ಚೊಚ್ಚಲ ಚಿತ್ರದ 2ನೇ ಹಾಡು ಬಿಡುಗಡೆ

ವಿಡಿಯೋ ಕೊನೆಯಲ್ಲಿ "ಜಬ್ ತಕ್ ಟೈಗರ್ ಮರಾ ನಹಿ, ಟಬ್ ತಕ್ ಟೈಗರ್ ಹರಾ ನಹೀ" (ಎಲ್ಲಿವರೆಗೆ ಟೈಗರ್​​ ಸಾಯೋದಿಲ್ಲವೋ, ಅಲ್ಲಿವರೆಗೆ ಟೈಗರ್​ ಸೋಲಲ್ಲ) ಎಂಬ ಡೈಲಾಗ್​​​ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸಿದೆ. ಇದು ಒಂದು ರೋಮಾಂಚನಕಾರಿ ಸಿನಿಮೀಯ ಅನುಭವವನ್ನು ನೀಡಲಿದೆ ಎಂದು ಸಿನಿಪ್ರಿಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೈಗರ್ 3 ದೀಪಾವಳಿಯ ಸಂದರ್ಭ ಚಿತ್ರಮಂದಿರ ಪ್ರವೇಶಿಸಲಿದೆ. ಮನೀಷ್ ಶರ್ಮಾ ನಿರ್ದೇಶನದ ಚಿತ್ರದ ಅಡ್ವಾನ್ಸ್​ ಟಿಕೆಟ್ ಬುಕಿಂಗ್​​ ಪ್ರೊಸೆಸ್​​​ ಭಾನುವಾರ, ನವೆಂಬರ್ 5 ರಿಂದ ಆರಂಭ ಆಗಲಿದೆ. ಈಗಾಗಲೇ ಬಂದಿರುವ ಟೈಗರ್​ 1 ಆ್ಯಂಡ್​ 2ರಲ್ಲಿ ಸಲ್ಲು ಕ್ಯಾಟ್​ ತೆರೆಹಂಚಿಕೊಂಡಿದ್ದರು. ಮೂರನೇ ಭಾಗದಲ್ಲೂ ತಮ್ಮ ಪಾತ್ರ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಉರ್ಫಿ ಜಾವೇದ್​ ಕರೆದೊಯ್ದ ಮುಂಬೈ ಪೊಲೀಸರು?: ವಿಡಿಯೋ ವೈರಲ್​

Last Updated : Nov 3, 2023, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.