ETV Bharat / entertainment

ಗಿಗಿ ಹಡಿದ್​ ಹುಟ್ಟುಹಬ್ಬಕ್ಕೆ ಶುಭಕೋರಿದ ನಟ ವರುಣ್ ಧವನ್​: ಪೋಸ್ಟ್​ ವೈರಲ್​​

ಅಮೆರಿಕನ್​ ಮಾಡೆಲ್​ ಗಿಗಿ ಹಡಿದ್​ ಹುಟ್ಟುಹಬ್ಬಕ್ಕೆ ನಟ ವರುಣ್​ ಧವನ್​ ಶುಭಕೋರಿದ್ದಾರೆ. ಈ ಪೋಸ್ಟ್​ ಸಖತ್​ ವೈರಲ್​ ಆಗಿದೆ.

author img

By

Published : Apr 24, 2023, 5:05 PM IST

Varun Wished Gigi Hadid Birthday
ಗಿಗಿ ಹಡಿದ್​ ಹುಟ್ಟುಹಬ್ಬಕ್ಕೆ ಶುಭಕೋರಿದ ನಟ ವರುಣ್ ಧವನ್

ನೀತಾ ಮುಖೇಶ್​ ಅಂಬಾನಿ ಕಲ್ಚರಲ್​ ಸೆಂಟರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರುಣ್​ ಧವನ್​ ಜೊತೆ ಮಾಡೆಲ್​ ಗಿಗಿ ಹಡಿದ್​ ಗಮನ ಸೆಳೆದಿದ್ದರು. ಇವರ ಆ ಒಂದು ಭೇಟಿ ಅನೇಕ ಟ್ರೋಲ್​ಗಳಿಗೂ ಕಾರಣವಾಗಿತ್ತು. ಜೊತೆಗೆ ಇವರಿಬ್ಬರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂಬುದಕ್ಕೆ ಆ ವೇದಿಕೆ ಸಾಕ್ಷಿಯಾಗಿತ್ತು. ಇದೀಗ ಭಾನುವಾರ ಗಿಗಿ ಹಡಿದ್​ ಅವರ ಹುಟ್ಟುಹಬ್ಬವಿತ್ತು. ಸೋಶಿಯಲ್​ ಮೀಡಿಯಾದ ಮೂಲಕ ನಟಿಗೆ ವರುಣ್​ ಸಿಹಿ ಸಂದೇಶ ರವಾನಿಸಿದ್ದಾರೆ. ಈ ಪೋಸ್ಟ್​ ಸದ್ಯ ಸಖತ್​ ವೈರಲ್​ ಆಗಿದೆ.

ಎನ್​ಎಂಎಸಿಸಿ ಈವೆಂಟ್​ನಲ್ಲಿನ ಒಂದು ಫೋಟೋವನ್ನು ನಟ ವರುಣ್ ಧವನ್​ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ವರುಣ್​ ಅವರು ಗಿಗಿಯನ್ನು ತಮ್ಮ ತೋಳಿನಲ್ಲಿ ಎತ್ತಿಕೊಂಡಿದ್ದಾರೆ. ಈ ಚಿತ್ರವನ್ನು ಸ್ಟೋರಿ ಹಾಕಿರುವ ನಟ, "ಹ್ಯಾಪಿ ಬರ್ತ್​ಡೇ ಗಿಗಿ ಹಡಿದ್​. ಕೀಪ್​ ಶೈನಿಂಗ್​, ಕೀಪ್​ ಸ್ಮೈಲಿಂಗ್​" ಎಂಬ ಶೀರ್ಷಿಕೆ ಜೊತೆ ಆರೆಂಜ್​ ಹಾರ್ಟ್​ ಎಮೋಜಿ ಅನ್ನು ಕೈ ಬಿಟ್ಟಿದ್ದಾರೆ.

ಗಿಗಿ ಹಡಿದ್​ಗೆ ಕಿಸ್​ ಮಾಡಿದ ವರುಣ್​: ಮಾರ್ಚ್​ 31 ರಂದು ಮುಂಬೈನಲ್ಲಿ ನೀತಾ ಮುಖೇಶ್​ ಅಂಬಾನಿ ಕಲ್ಚರಲ್​ ಸೆಂಟರ್​ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಈ ವೇಳೆ ಸ್ಟಾರ್​ ನಟ ನಟಿಯರು ಹೆಜ್ಜೆ ಹಾಕಿ ಸಮಾರಂಭದ ಮೆರುಗನ್ನು ಹೆಚ್ಚಿಸಿದ್ದರು. ವರುಣ್​ ಧವನ್​ ಸಹ ಭರ್ಜರಿ ಸ್ಟೆಪ್​ ಹಾಕಿದ್ದರು. ತಮ್ಮ ನೃತ್ಯ ಪ್ರದರ್ಶನದ ವೇಳೆ ಮಾಡೆಲ್​ ಗಿಗಿ ಹಡಿದ್​ ಅವರನ್ನು ವೇದಿಕೆಗೆ ಆಹ್ವಾನಿಸಿದ್ದ ನಟ ಅವರನ್ನು ಎತ್ತಿ ಅವರ ಕೆನ್ನೆಗೆ ಮುತ್ತಿಟ್ಟಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುವುದರ ಜೊತೆಗೆ ಭಾರೀ ಟೀಕೆಯನ್ನು ಎದುರಿಸಿತ್ತು.

ನಟನ ವಿರುದ್ಧ ಕೆಲ ನೆಟ್ಟಿಗರು ಅಸಮಾಧಾನ ಹೊರಹಾಕಿ ಟ್ರೋಲ್​ ಮಾಡಿದ್ದರು. ಸಾಕಷ್ಟು ಟೀಕೆಗಳನ್ನು ಸ್ವೀಕರಿಸಿದ ನಂತರ ನಟ ವರುಣ್​ ಧವನ್​ ಇದು ಯೋಜಿತ ಎಂದು ಹೇಳಿದ್ದರು. ಮೊದಲೇ ಪ್ಲಾನ್​ ಮಾಡಿ ಹಾಗೆ ಮಾಡಿದೆವು ಎಂದು ಸ್ಪಷ್ಟಪಡಿಸಿದ್ದರು. ಮಾಡೆಲ್​ ಗಿಗಿ ಹಡಿದ್​ ಕೂಡ ನಟನ ಪರ ನಿಂತರು. ತಮ್ಮ ಬಾಲಿವುಡ್​ ಕನಸುಗಳನ್ನು ಪೂರೈಸಲು ಅವಕಾಶ ಸಿಕ್ಕಿತು ಎಂದು ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ ತಿಳಿಸಿದ್ದರು.

Varun
ವರುಣ್​ ಧವನ್​ ಹುಟ್ಟುಹಬ್ಬಕ್ಕೆ ಶುಭಕೋರಿದ ಜಾಹ್ನವಿ ಕಪೂರ್​

ವರುಣ್​ ಧವನ್​ಗೆ ಹುಟ್ಟುಹಬ್ಬದ ಸಂಭ್ರಮ: ಇಂದು ವರುಣ್​ ಧವನ್​ ಅವರ 36ನೇ ವರ್ಷದ ಹುಟ್ಟುಹಬ್ಬ. ಇವರ ಬರ್ತ್​ಡೇಗೆ ಬಾಲಿವುಡ್​ ಸುಂದರಿ ಜಾಹ್ನವಿ ಕಪೂರ್​ ವಿಶೇಷವಾಗಿಯೇ ಶುಭಾಶಯ ಕೋರಿದ್ದಾರೆ. ವರುಣ್​ ಅವರೊಂದಿಗಿನ ಸರಣಿ ಫೋಟೋಗಳನ್ನು ಹಂಚಿಕೊಂಡಿರುವ ಜಾಹ್ನವಿ ಕಪೂರ್​ ತಮಾಷೆಯ ರೀತಿಯಲ್ಲೇ ವಿಶ್​ ಮಾಡಿದ್ದಾರೆ. ಮೊದಲ ಚಿತ್ರದಲ್ಲಿ ವರುಣ್​ ಗುಲಾಬಿ ಬಣ್ಣದ ಶರ್ಟ್​ ಧರಿಸಿದ್ದು, ಐಸ್​ ಕ್ರೀಂ ತುಂಬಿದ ಫುಲ್​ ಗ್ಲಾಸಿನೊಂದಿಗೆ ಪೋಸ್​ ನೀಡುತ್ತಿರುವುದನ್ನು ಕಾಣಬಹುದು.

ಎರಡನೇ ಚಿತ್ರದಲ್ಲಿ ವರುಣ್​ ಮತ್ತು ಜಾಹ್ನವಿ ಕೈಯಲ್ಲಿ ಚಾಕಲೇಟ್​ ಪ್ಲೇವರ್​ ಐಸ್ ​ಕ್ರೀಂ ಹಿಡಿದುಕೊಂಡು ಐಸ್​ ಕ್ರೀಂ ಪಾರ್ಲರ್​ ಎದುರು ಪೋಸ್​ ನೀಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ವರುಣ್​ ಭುಜದಲ್ಲಿ ಜಾನ್ವಿ ತಲೆಯಿಟ್ಟು ಮಲಗಿ ಫೋನ್​ ನೋಡುತ್ತಿದ್ದಾರೆ. ವರುಣ್​ ಬಾಯಿ ತೆರೆದು ಜಾಹ್ನವಿಯನ್ನು ತಿನ್ನಲು ಬಯಸುತ್ತಿರುವಂತೆ ಪೋಸ್​ ಕೊಟ್ಟಿದ್ದಾರೆ. ಈ ಮಧ್ಯೆ ವರುಣ್​ ಮತ್ತು ಜಾಹ್ನವಿ ನಟನೆಯ ಬವಾಲ್​ ಚಿತ್ರ ಅಕ್ಟೋಬರ್​ 6 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಹೆರಿಗೆ ಆಸ್ಪತ್ರೆ ಮುಂದೆ ಕಾಣಿಸಿಕೊಂಡ ದಂಪತಿ.. ತಂದೆಯಾಗಲಿದ್ದಾರಾ ನಟ ವರುಣ್​ ಧವನ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.