ETV Bharat / entertainment

40 ಕೋಟಿ ಬಜೆಟ್‌ನಲ್ಲಿ ತಯಾರಾದ 'ದಿ ಕೇರಳ ಸ್ಟೋರಿ' ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ? - The Kerala Story movie

ವಿವಾದಗಳ ನಡುವೆ ದಿ ಕೇರಳ ಸ್ಟೋರಿ ಸಿನಿಮಾ ನಿನ್ನೆ ತೆರೆಕಂಡು ಉತ್ತಮ ಪ್ರದರ್ಶನ ಮುಂದುವರಿಸಿದೆ.

The Kerala Story
ದಿ ಕೇರಳ ಸ್ಟೋರಿ ಕಲೆಕ್ಷನ್​​
author img

By

Published : May 6, 2023, 12:30 PM IST

Updated : May 6, 2023, 3:02 PM IST

ಭಾರಿ ವಿವಾದಗಳು ಮತ್ತು ಪ್ರತಿಭಟನೆಗಳ ನಡುವೆಯೇ ಮೇ 5ರಂದು (ನಿನ್ನೆ, ಶುಕ್ರವಾರ) ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 'ದಿ ಕೇರಳ ಸ್ಟೋರಿ' ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿಲ್ಲ. ಸುದಿಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಕೆಲವರು ಸತ್ಯ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಟ್ರೇಲರ್​ ಮೂಲಕ ವಿವಾದ ಎಬ್ಬಿಸಿದ್ದ ಈ ಚಿತ್ರ ತೆರೆಕಂಡು ಈಗ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧ ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, 'ದಿ ಕೇರಳ ಸ್ಟೋರಿ' ಚಿತ್ರವು ಭಾರೀ ಪ್ರತಿಭಟನೆಗಳ ನಡುವೆ ಬಿಡುಗಡೆಯಾದರೂ ಮೊದಲ ದಿನವೇ 8.03 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಬರೋಬ್ಬರಿ 40 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಹೆಚ್ಚಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಮೊದಲ ದಿನವೇ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಿನ್ನ ಭಿನ್ನ ಅಭೊಪ್ರಾಯಗಳು ವ್ಯಕ್ತವಾಗಿದೆ. ಅದಾ ಶರ್ಮಾ ಅಭಿನಯದ ಈ ಚಿತ್ರವು ತನ್ನ ಮೊದಲ ದಿನದ ಗಳಿಕ ಮೂಲಕ ಸದ್ದು ಮಾಡಿದೆ. ಈ ಚಿತ್ರವು ವಾರಾಂತ್ಯದಲ್ಲಿ ಮತ್ತಷ್ಟು ಗಳಿಸಲಿದೆ ಎಂದು ಸಾಬೀತುಪಡಿಸಿದೆ.

  • #TheKeralaStory hits the ball out of the stadium 🔥🔥🔥… Takes a SMASHING START… Evening + night shows witness solid occupancy… The Day 1 numbers are an EYE-OPENER for the entire industry… TERRIFIC weekend assured… Fri ₹ 8.03 cr. #India biz. #Boxoffice pic.twitter.com/8dylt50Hcj

    — taran adarsh (@taran_adarsh) May 6, 2023 " class="align-text-top noRightClick twitterSection" data=" ">

'ದಿ ಕೇರಳ ಸ್ಟೋರಿ' ಚಿತ್ರದ ಕಥೆಯು ಕೇರಳದ ಹಿಂದೂ ಹುಡುಗಿಯರನ್ನು ಬ್ರೈನ್ ವಾಶ್ ಮಾಡಿ ಇಸ್ಲಾಂಗೆ ಮತಾಂತರಗೊಳಿಸುವುದರ ಸುತ್ತ ಸುತ್ತುತ್ತದೆ. ಈವರೆಗೆ 32,000 ಹುಡುಗಿಯರನ್ನು ಭಯೋತ್ಪಾದಕ ಸಂಘಟನೆ ISISಗೆ ಕಳುಹಿಸಲಾಗಿದೆ ಎಂದು ಚಿತ್ರದಲ್ಲಿ ತಿಳಿಸಿಲಾಗಿದೆ. ಈ ಚಿತ್ರ ಸತ್ಯ ಘಟನೆಯನ್ನು ಆಧರಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದ್ರೆ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದ ಭಾರೀ ಚರ್ಚೆ ಹುಟ್ಟುಹಾಕಿದೆ ಮತ್ತು ಸಿನಿಮಾ ಪ್ರದರ್ಶನ ತಡೆಗೆ ನಿರಂತರ ಪ್ರಯತ್ನ ನಡೆಯುತ್ತಿದೆ.

'ದಿ ಕೇರಳ ಸ್ಟೋರಿ' ಕಥೆ: ದಿ ಕೇರಳ ಸ್ಟೋರಿ ಸಿನಿಮಾ ಕಥೆ ಮತಾಂತರ ವಿಷಯವನ್ನು ಆಧರಿಸಿದೆ. ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್​ನಲ್ಲಿ ತಂಗುವ ವಿದ್ಯಾರ್ಥಿನಿಯರು ಹೇಗೆ ಮತಾಂತರಗೊಳ್ಳುತ್ತಾರೆ ಮತ್ತು ಹೇಗೆ ಮತಾಂತರ ಮಾಡುತ್ತಾರೆ ಎಂಬ ವಿಷಯವನ್ನು ಆಧರಿಸಿದೆ. ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಸೇರಿದಂತೆ ಕೆಲವರು ಈ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ಕೇರಳದ ಸುಮಾರು 36 ಸಾವಿರ ಹುಡುಗಿಯರ ನಾಪತ್ತೆಯ ಕಥೆ ಇದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಲ್ಮಾನ್-ಶಾರುಖ್​ನ ಆ ಒಂದು ಸೀನ್​ಗೆ 35 ಕೋಟಿಯ ಸೆಟ್​ ನಿರ್ಮಾಣ.. ಹಾಗಾದ್ರೆ ನಟರ ಸಂಭಾವನೆ?

ದಿ ಕೇರಳ ಸ್ಟೋರಿ ಬಿಡುಗಡೆಗೆ ತಡೆಯಾಜ್ಞೆ ನೀಡಲು ಕೋರಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಆದ್ರೆ ತಡೆಯಾಜ್ಞೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ. ಇದು ಕಾಲ್ಪನಿಕ ಕಥೆಯೇ ಹೊರತು ಇತಿಹಾಸವಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಬಿಡುಗಡೆ ತಡೆಗೆ ಕೇರಳ ಹೈಕೋರ್ಟ್​ ನಕಾರ

Last Updated : May 6, 2023, 3:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.