ETV Bharat / entertainment

"ದಿ ಕೇರಳ ಸ್ಟೋರಿ" ಮೂವರು ಯುವತಿಯರ ನೈಜ ಕಥೆ ಆಧರಿಸಿದೆ; ಟ್ರೇಲರ್‌ನ ವಿವರಣೆ ಬದಲಾಯಿಸಿದ ಚಿತ್ರತಂಡ - ದಿ ಕೇರಳ ಸ್ಟೋರಿ ಟ್ರೇಲರ್‌

ಬಿಡುಗಡೆಗೆ ಕೆಲವು ದಿನಗಳ ಮೊದಲೇ ''ದಿ ಕೇರಳ ಸ್ಟೋರಿ'' ಚಿತ್ರದ ನಿರ್ಮಾಪಕರು ಯುಟ್ಯೂಬ್‌ನಲ್ಲಿ ಟ್ರೇಲರ್‌ನ ವಿವರಣೆಯನ್ನು ಬದಲಾಯಿಸಿದ್ದಾರೆ.

The Kerala Story
ದಿ ಕೇರಳ ಸ್ಟೋರಿ
author img

By

Published : May 3, 2023, 4:16 PM IST

ಹೈದರಾಬಾದ್: ಕೇರಳದ 32,000 ಮಹಿಳೆಯರು ಐಸಿಸ್‌ಗೆ ಸೇರಿದ್ದಾರೆ ಎಂದು ಈ ಹಿಂದೆ ತನ್ನ ಮೂಲ ಟ್ರೇಲರ್‌ನಲ್ಲಿ ಹೇಳಿಕೊಂಡಿದ್ದ ''ದಿ ಕೇರಳ ಸ್ಟೋರಿ'' ಟ್ರೈಲರ್ ಅನ್ನು ಯೂಟ್ಯೂಬ್‌ನಲ್ಲಿ "ಕೇರಳದ ವಿವಿಧ ಭಾಗಗಳ ಮೂವರು ಯುವತಿಯರ ನೈಜ ಕಥೆಗಳನ್ನು" ಚಿತ್ರ ಹೇಳುತ್ತದೆ ಎಂದು ಬದಲಾಯಿಸಲಾಗಿದೆ. ಈ ಹಿಂದೆ 32,000 ಅಂಕಿಅಂಶಕ್ಕೆ ಸವಾಲು ಹಾಕಿದ್ದ ಕೇರಳ ಸಂಸದ ಶಶಿ ತರೂರ್ ಅವರು, "ಕೇರಳದ ವಾಸ್ತವತೆಯ ಸಂಪೂರ್ಣ ಉತ್ಪ್ರೇಕ್ಷೆ ಮತ್ತು ವಿರೂಪ ಮಾಡಲಾಗಿದೆ" ಎಂದು ಚಿತ್ರದ ನಿರ್ಮಾಪಕರನ್ನು ಟೀಕಿಸಿದ್ದರು.

ಇತ್ತೀಚಿನ ಟ್ರೇಲರ್ ವಿವರಣೆಯಲ್ಲೇನಿದೆ?: ಸನ್‌ಶೈನ್ ಪಿಕ್ಚರ್‌ನ ಅಧಿಕೃತ ಯೂಟ್ಯೂಬ್ ಪುಟದಲ್ಲಿ ''ದಿ ಕೇರಳ ಸ್ಟೋರಿ'' ಇತ್ತೀಚಿನ ಟ್ರೇಲರ್ ವಿವರಣೆಯು "ಕೇರಳದ ವಿವಿಧ ಭಾಗಗಳ ಮೂವರು ಯುವತಿಯರ ನೈಜ ಕಥೆಗಳನ್ನು ಆಧರಿಸಿದೆ. ಸಾವಿರಾರು ಮುಗ್ಧ ಮಹಿಳೆಯರನ್ನು ವ್ಯವಸ್ಥಿತವಾಗಿ ಪರಿವರ್ತಿಸಲಾಗಿದೆ, ತೀವ್ರಗಾಮಿಗೊಳಿಸಲಾಗಿದೆ ಮತ್ತು ಅವರ ಜೀವನ ನಾಶವಾಯಿತು" ಎಂದು ಬರೆಯಲಾಗಿದೆ.

The Kerala Story
ಬಿಡುಗಡೆಗೆ ಕೆಲವು ದಿನಗಳ ಮೊದಲೇ ''ದಿ ಕೇರಳ ಸ್ಟೋರಿ'' ಚಿತ್ರದ ನಿರ್ಮಾಪಕರು ಯುಟ್ಯೂಬ್‌ನಲ್ಲಿ ಟ್ರೇಲರ್‌ನ ವಿವರಣೆಯನ್ನು ಬದಲಾಯಿಸಿದ್ದಾರೆ.

2022ರ ನವೆಂಬರ್​ನಲ್ಲಿ ಬಿಡುಗಡೆಯಾದ ಚಿತ್ರದ ಟೀಸರ್‌ನಲ್ಲೇನಿದೆ?: 2022ರ ನವೆಂಬರ್​ನಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಟೀಸರ್‌ನ ವಿವರಣೆಯ ಪ್ರಕಾರ, ಚಿತ್ರವು "ಕೇರಳದಲ್ಲಿ 32,000 ಹೆಣ್ಣುಮಕ್ಕಳ ಹೃದಯ ವಿದ್ರಾವಕ ಮತ್ತು ಕರುಳು ಹಿಂಡುವ ಕಥೆಗಳು.." ಎಂದು ಪೋಸ್ಟ್ ಮಾಡಿದ್ದರು. ಆದರೆ, ಸಿನಿಮಾ ತಯಾರಕರು ಮಂಗಳವಾರ, ಟ್ರೇಲರ್ ವಿವರಣೆಯನ್ನು ಬದಲಾಯಿಸಿದ್ದಾರೆ.

ಪುರಾವೆಗಳನ್ನು ತೋರಿಸುವವರಿಗೆ 1 ಕೋಟಿ ರೂ. ಬಹುಮಾನ: ಕೇರಳ ರಾಜ್ಯದ 32,000 ಮಹಿಳೆಯರು ಐಸಿಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಟ್ರೇಲರ್ ವಿವರಣೆಯಲ್ಲಿ ಬಿಂಬಿಸಿದ ನಂತರ, ಚಲನಚಿತ್ರವು ಭಾರೀ ವಿವಾದಕ್ಕೆ ಒಳಗಾಯಿತು. ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ಅದರ ಪ್ರದರ್ಶನವನ್ನು ನಿಷೇಧಿಸುವಂತೆ ಒತ್ತಾಯಿಸಿದವು. ಆದರೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಮುಸ್ಲಿಂ ಯೂತ್ ಲೀಗ್, 32,000 ಹುಡುಗಿಯರು ಇಸ್ಲಾಮಿಕ್ ಸ್ಟೇಟ್ ಸದಸ್ಯರಾಗಿ ಮತಾಂತರಗೊಂಡಿರುವ ಪುರಾವೆಗಳನ್ನು ತೋರಿಸುವವರಿಗೆ 1 ಕೋಟಿ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಿದ್ದವು.

ಹಿಂದೂ ಸೇವಾ ಕೇಂದ್ರದ ಸಂಸ್ಥಾಪಕ ಪ್ರತೀಶ್ ವಿಶ್ವನಾಥ್ ಪ್ರತಿಕ್ರಿಯಿಸಿ, ಕೇರಳದಿಂದ ಯಾರೂ ಐಸಿಸ್ ಸೇರಲು ಸಿರಿಯಾಕ್ಕೆ ಹೋಗಿಲ್ಲ ಎಂದು ಸಾಬೀತುಪಡಿಸುವವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಸಂಘ ಪರಿವಾರದ ಅಪಪ್ರಚಾರದ ವಿರುದ್ಧ ಕೇರಳದ ವಿರೋಧದಿಂದಾಗಿ ತಯಾರಕರು ಟ್ರೇಲರ್ ವಿವರಣೆಯನ್ನು ಬದಲಾಯಿಸಿದ್ದಾರೆ ಎಂದು ಎಂವೈಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿಕೆ ಫಿರೋಜ್ ಹೇಳಿದ್ದಾರೆ.

ಇದನ್ನೂ ಓದಿ: ಶಾರುಖ್​ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿ: ಶಾಂತತೆ ಕಳೆದುಕೊಂಡ ಖಾನ್

''ಕೇರಳದ ಕನಿಷ್ಠ 32 ಮಹಿಳೆಯರನ್ನು ಮತಾಂತರಗೊಂಡು ಐಸಿಸ್‌ಗೆ ಸೇರುವಂತೆ ಸೂಚಿಸುವವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದು'' ನಟ, ವಕೀಲ ಸಿ.ಶುಕ್ಕೂರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್, ಈ ಚಿತ್ರದಿಂದ ಬಿಜೆಪಿ ಸರ್ಕಾರ ಮತ್ತು ಆರ್‌ಎಸ್‌ಎಸ್ ಜನರ ಮನಸ್ಸನ್ನು ವಿಷಪೂರಿತಗೊಳಿಸುವ ಪ್ರಯತ್ನವಾಗಿದೆ'' ಎಂದು ಆರೋಪಿಸಿದ್ದರು.

ಚಿತ್ರದ ನಿರ್ಮಾಪಕ ವಿಪುಲ್ ಅಮೃತಲಾಲ್ ಷಾ ಅವರು, ''ಚಿತ್ರಕ್ಕೆ ಬಿಜೆಪಿಯಿಂದ ಹಣ ನೀಡಲಾಗುತ್ತಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. "ತಮಗೂ ಯಾವುದೇ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರವನ್ನು ನೋಡದೇ ಚಿತ್ರದ ಬಗ್ಗೆ ಮಾತನಾಡುವ ಯಾವುದೇ ಮಾತುಗಳು ಕೇವಲ ಊಹೆ ಆಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಈ ವೀಕೆಂಡ್​ ಅತಿಥಿ ಸ್ಯಾಂಡಲ್​ವುಡ್​ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.