ಬಾಲಿವುಡ್ ಸ್ಟಾರ್ ವಿಕ್ಕಿ ಕೌಶಲ್ ಮತ್ತು ನಟಿ ಮಾನುಷಿ ಚಿಲ್ಲರ್ ಮುಖ್ಯಭೂಮಿಕೆಯಲ್ಲಿರುವ 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಳಪೆ ಪ್ರದರ್ಶನ ಕಾಣುತ್ತಿದೆ. ಸೆಪ್ಟೆಂಬರ್ 22 ರಂದು ತೆರೆ ಕಂಡ ಚಿತ್ರ ಮೊದಲ ದಿನ ಕೇವಲ 1.4 ಕೋಟಿ ರೂಪಾಯಿ ಗಳಿಸುವುದರೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ನೀರಸ ಓಟವನ್ನು ಮುಂದುವರೆಸಿದೆ. ವಿಶ್ವದಾದ್ಯಂತ ಧೂಳೆಬ್ಬಿಸುತ್ತಿರುವ 'ಜವಾನ್' ಸಿನಿಮಾದಿಂದಾಗಿ ವಿಕ್ಕಿ ಕೌಶಲ್ ಚಿತ್ರ ಕಲೆಕ್ಷನ್ನಲ್ಲಿ ಭಾರೀ ಹಿನ್ನಡೆ ಕಂಡಿದೆ.
ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸುಧಾರಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಸಿನಿಮಾ ಬಿಡುಗಡೆಯಾದ ಎರಡನೇ ದಿನ 1.72 ಕೋಟಿ ರೂಪಾಯಿ ಗಳಿಸಿದೆ. ಬರೋಬ್ಬರಿ 40 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾದ ಈ ಚಿತ್ರ ಮೂರು ದಿನಗಳಲ್ಲಿ ಭಾರತದಲ್ಲಿ ಒಟ್ಟು 5.11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
- " class="align-text-top noRightClick twitterSection" data="">
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ: 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ. ಮೊದಲ ದಿನವೇ ಕಳಪೆ ಪ್ರದರ್ಶನದೊಂದಿಗೆ ಚಿತ್ರವು ಥಿಯೇಟರ್ಗಳಿಗೆ ಎಂಟ್ರಿ ಕೊಟ್ಟಿದೆ. ಬಿಡುಗಡೆಗೂ ಮುನ್ನ ಸಿನಿಮಾ ಸಖತ್ ಹವಾ ಸೃಷ್ಟಿಸಿತ್ತು. ಈ ಸಿನಿಮಾದ ಕನ್ಹಯ್ಯಾ ಟ್ವಿಟರ್ ಪೇ ಆಜಾ ಹಾಡಿಗೆ ಇನ್ಸ್ಟಾಗ್ರಾಮ್ ರೀಲ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದವು. ಈ ವೇಳೆ ಸಿನಿಮಾದ ಮೇಲಿನ ನಿರೀಕ್ಷೆ ಬಹಳಷ್ಟಿತ್ತು. ಆದರೆ 'ಜವಾನ್' ನಡುವೆ 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ'ಗೆ ನಿರೀಕ್ಷಿಸಿದ್ದಷ್ಟು ರೆಸ್ಪಾನ್ಸ್ ಸಿಗುತ್ತಿಲ್ಲ.
ಇದನ್ನೂ ಓದಿ: ವಿಕ್ಕಿ ಕೌಶಲ್ ನಟನೆಯ 'ಮಸಾನ್' ಚಿತ್ರಕ್ಕೆ ಎಂಟು ವರ್ಷ: ಪೋಸ್ಟ್ ಹಂಚಿಕೊಂಡ ನಟ
ಚಿತ್ರಕಥೆ: 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಕೌಟಂಬಿಕ ಕಾಮಿಡಿ ಚಿತ್ರವಾಗಿದೆ. ಉತ್ತರ ಭಾರತದ ತುಂಬು ಕುಟುಂಬದ ಕಥೆ. ಸಾಂಪ್ರದಾಯಿಕ ಹಿಂದೂ ಕುಟುಂಬದಿಂದ ಬಂದ ಭಜನ್ ಕುಮಾರ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ಆದರೆ ಭಜನ್ ಹಿಂದೂ ಆಗಿ ಹುಟ್ಟಿದ್ದಲ್ಲ, ಮೂಲತಃ ಇಸ್ಲಾಂ ಎಂದು ಗೊತ್ತಾದ ಬಳಿಕ ಕಥೆಗೆ ಪ್ರಮುಖ ತಿರುವು ಸಿಗುತ್ತದೆ. ನಂತರ ಕುಟುಂಬದಿಂದ ದೂರವಾದ ಭಜನ್ ತನ್ನ ಕುಟುಂಬವನ್ನು ಹುಡುಕಲು ತೆರಳುತ್ತಾನೆ.
- " class="align-text-top noRightClick twitterSection" data="">
'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ'ಗೂ ಮುನ್ನ ಬಿಡುಗಡೆಯಾಗಿದ್ದ ವಿಕ್ಕಿ ಕೌಶಲ್ ನಟನೆಯ 'ಜರಾ ಹಟ್ಕೆ ಜರಾ ಬಜ್ಕೆ' ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಭಾರತದಲ್ಲಿ 88.35 ಕೋಟಿ ರೂಪಾಯಿ ಗಳಿಸಿದರೆ, ಜಾಗತಿಕವಾಗಿ ಚಿತ್ರವು 104.76 ಕೋಟಿ ರೂಪಾಯಿ ಗಳಿಸಿತ್ತು. ಇದಲ್ಲದೇ, ನಾಯಕ ವಿಕ್ಕಿ ಕೌಶಲ್ ಕೈಯಲ್ಲಿ ಹಲವು ಪ್ರಾಜೆಕ್ಟ್ಗಳಿವೆ. ಮೆಘನಾ ಗುಲ್ಜಾರ್ ಅವರ 'ಸ್ಯಾಮ್ ಬಹುದ್ದೂರ್' ಅಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಆನಂದ್ ತಿವಾರಿ ಅವರ ಹೆಸರಿಡದ ಚಿತ್ರದಲ್ಲೂ ಬಣ್ಣ ಹಚ್ಚಲಿದ್ದಾರೆ.
ಇದನ್ನೂ ಓದಿ: ರೋಹಿತ್ ಶೆಟ್ಟಿ ಜೊತೆಗಿನ 'ಸಿಂಗಮ್ ಅಗೇನ್' ಚಿತ್ರದಿಂದ ಹೊರಬಂದ ವಿಕ್ಕಿ ಕೌಶಲ್.. ಏಕೆ ಗೊತ್ತಾ?