ETV Bharat / entertainment

'ಲಿಯೋ' ಸಿನಿಮಾ ನೋಡಿಲ್ವಾ?.. ಹಾಗಿದ್ರೆ OTTನಲ್ಲಿ ವೀಕ್ಷಿಸಿ, ಎಲ್ಲಿ? ಯಾವಾಗ?

Leo OTT release date: ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಓಟಿಟಿಗೆ ಬರಲಿದೆ. ಯಾವಾಗ? ಎಲ್ಲಿ? ತಿಳಿಯಲು ಮುಂದೆ ಓದಿ..

Here's when Thalapathy Vijay and Lokesh Kanagaraj's Leo will arrive on OTT; Netflix locks India and global release date
'ಲಿಯೋ' ಸಿನಿಮಾ ನೋಡಿಲ್ವಾ?.. ಹಾಗಿದ್ರೆ OTTನಲ್ಲಿ ವೀಕ್ಷಿಸಿ, ಎಲ್ಲಿ? ಯಾವಾಗ?
author img

By ETV Bharat Karnataka Team

Published : Nov 20, 2023, 3:40 PM IST

ಕಾಲಿವುಡ್​ ಸ್ಟಾರ್​ ದಳಪತಿ ವಿಜಯ್​ ಮತ್ತು ನಿರ್ದೇಶಕ ಲೋಕೇಶ್​ ಕನಕರಾಜ್​ ಕಾಂಬೋದ ಸೂಪರ್​ ಹಿಟ್​ ಸಿನಿಮಾ 'ಲಿಯೋ'. ದಸರಾ ಉಡುಗೊರೆಯಾಗಿ ಅಕ್ಟೋಬರ್​ 19ರಂದು ಬಿಡುಗಡೆಯಾದ ಚಿತ್ರ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆದುಕೊಂಡಿದೆ. ಬಾಕ್ಸ್​ ಆಫೀಸ್​ನಲ್ಲಿ ಸುಮಾರು 550 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈ ಚಿತ್ರ ಯಾವಾಗ ಓಟಿಟಿಗೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಕೊನೆಗೂ ಓಟಿಟಿ ರಿಲೀಸ್​ ಡೇಟ್​ ಅಧಿಕೃತವಾಗಿ ಘೋಷಣೆ ಆಗಿದೆ.

ಯಾವಾಗ? ಎಲ್ಲಿ?: 'ಲಿಯೋ' ಸಿನಿಮಾ ಜನಪ್ರಿಯ ಓಟಿಟಿ ಪ್ಲಾಟ್​ಫಾರ್ಮ್​ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗಲಿದೆ. 'ಅಣ್ಣನ್​ ವರಾರು ವಲಿ ವಿಡ್​ (ಅಣ್ಣನಿಗೆ ಬರಲು ದಾರಿ ಮಾಡಿಕೊಡಿ)' ಎಂಬ ಶೀರ್ಷಿಕೆಯೊಂದಿಗೆ ಚಿತ್ರತಂಡ ಓಟಿಟಿ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದೆ. ಎರಡು ಬಿಡುಗಡೆ ದಿನಾಂಕಗಳನ್ನು ಘೋಷಿಸಿದೆ. ಭಾರತದಲ್ಲಿ ನವೆಂಬರ್​ 24ರಿಂದ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮಿಂಗ್​ ಆಗಲಿದೆ. ಜಾಗತಿಕವಾಗಿ ನವೆಂಬರ್​ 28 ರಂದು ಬಿಡುಗಡೆಯಾಗಲಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಲಭ್ಯವಾಗಲಿದೆ. ನೆಟ್​ಫ್ಲಿಕ್ಸ್​ ಸುಮಾರು 120 ಕೋಟಿ ರೂಪಾಯಿಗೆ 'ಲಿಯೋ' ಸಿನಿಮಾದ ಓಟಿಟಿ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ.

  • " class="align-text-top noRightClick twitterSection" data="">

ಚಿತ್ರತಂಡ: 'ಲಿಯೋ' ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ, ಮಿಸ್ಕಿನ್ , ಗೌತಮ್ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮ್ಯಾಥ್ಯೂ ಥೋಮಸ್, ಮನ್ಸೂರ್ ಅಲಿ ಖಾನ್ ಮತ್ತು ಪ್ರಿಯಾ ಆನಂದ್ ಸಹ ಚಿತ್ರದಲ್ಲಿದ್ದಾರೆ. 'ಮಾಸ್ಟರ್' ಸಿನಿಮಾ ನಂತರ ವಿಜಯ್ ಮತ್ತು ಲೋಕೇಶ್ ಕನಕರಾಜ್​​ ಎರಡನೇ ಬಾರಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸುಂದರಿ ತ್ರಿಷಾ ಕೃಷ್ಣನ್​ ಜೊತೆ​ 14 ವರ್ಷಗಳ ಬಳಿಕ ವಿಜಯ್​ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಲಿಯೋ ಸಿನಿಮಾಗೂ ಮುನ್ನ ಗಿಲ್ಲಿ, ಕುರುವಿ, ತಿರುಪಾಚಿ, ಆತಿ ಚಿತ್ರಗಳಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು.

ತಮಿಳು ಚಿತ್ರರಂಗದಲ್ಲಿ ಈ ವರ್ಷ ಅತಿ ಹೆಚ್ಚು ಸಂಪಾದನೆ ಮಾಡಿದ ಎರಡನೇ ಚಿತ್ರದ ಜೊತೆಗೆ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಐದನೇ ಸಿನಿಮಾ ಎಂಬ ಹೆಗ್ಗಳಿಕೆ ಕೂಡ ಹೊಂದಿದೆ. ಜೊತೆಗೆ ವಿಜಯ್​ ಸಿನಿಮಾ ವೃತ್ತಿಯಲ್ಲೇ ಇದು ಅತಿ ಹೆಚ್ಚು ಸಂಪಾದನೆ ಚಿತ್ರವಾಗಿದೆ. ಲೋಕೇಶ್​ ಅವರು ತಮ್ಮ ಈ ಹಿಂದಿನ ಸಿನಿಮಾ ಕಮಲ್​ ಹಾಸನ್​ ಅಭಿನಯದ ವಿಕ್ರಂ ಅನ್ನು ಮೀರಿಸಿದ ಸಿನಿಮಾಟಿಕ್​ ಅನುಭವವನ್ನು ತಮ್ಮ ಈ ಚಿತ್ರದಲ್ಲಿ ಪ್ರೇಕ್ಷಕರಿಗೆ ನೀಡಿದ್ದರು. ಈ ಹಿಂದಿನ ತಮ್ಮ ಸಿನಿಮಾವಾದ ಕೈಥಿಯಲ್ಲಿ ಈ ಸಿನಿಮಾಟಿಕ್​ ಅನುಭವ ನೀಡಿದ್ದರು. ಸ್ಯಾಕ್ನಿಲ್ಕ್​​ ಪ್ರಕಾರ, 'ಲಿಯೋ' ಚಿತ್ರ ತಮಿಳು ಸಿನಿಮಾ ಇತಿಹಾದಲ್ಲಿ ಅತಿ ಹೆಚ್ಚು ಗಳಿಸಿದ ನಾಲ್ಕನೇ ಚಿತ್ರವಾಗಿದೆ. 'ಪೊನ್ನಿಯಿನ್​ ಸೆಲ್ವನ್​-1', 'ಜೈಲರ್'​ ಮತ್ತು '2.0' ಬಳಿಕದ ಸ್ಥಾನ ಲಿಯೋ ಪಡೆದಿದೆ.

ಇದ್ನೂ ಓದಿ: 500 ಕೋಟಿಯತ್ತ ದಳಪತಿ ವಿಜಯ್ ನಟನೆಯ 'ಲಿಯೋ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.