ETV Bharat / entertainment

ಆಸ್ಕರ್​ ಸಮಿತಿಯಲ್ಲಿ ನಟ ಸೂರ್ಯ! ಈ ಗೌರವ ಪಡೆದ ಮೊದಲ ತಮಿಳು ನಟ - ಕಾಲಿವುಡ್ ನಟ ಸೂರ್ಯ

ಜೈ ಭೀಮ್​ ಚಿತ್ರದ ಮೂಲಕ ಎಲ್ಲರ ಮನಗೆದ್ದಿರುವ ತಮಿಳು ನಟ ಸೂರ್ಯ ಇದೀಗ ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ.

Actor Suriya
Actor Suriya
author img

By

Published : Jun 29, 2022, 7:47 PM IST

ಚೆನ್ನೈ(ತಮಿಳುನಾಡು): ಕಾಲಿವುಡ್​ ನಟ ಸೂರ್ಯ ಪ್ರತಿಷ್ಠಿತ ಆಸ್ಕರ್ ಸಮಿತಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಆಸ್ಕರ್ ಆಯೋಜಕರ ಸದಸ್ಯತ್ವ ಸಮಿತಿಗೆ ಆಹ್ವಾನಿಸಲ್ಪಟ್ಟಿರುವ ಮೊದಲ ತಮಿಳು ನಟ ಎಂದು ಗುರುತಿಸಿಕೊಂಡಿದ್ದಾರೆ.

ನಟ ಸೂರ್ಯ ಜೊತೆಗೆ ಬಾಲಿವುಡ್​ನ ಖ್ಯಾತ ನಟಿ ಕಾಜೋಲ್​ ಹಾಗೂ ನಿರ್ದೇಶಕಿ ರೀಮಾ ಕಗ್ತಿ ಸಹ ಈ ಸಮಿತಿಗೆ ಆಹ್ವಾನ ಪಡೆದುಕೊಂಡಿದ್ದಾರೆ. ಸೂರರೈ ಪೊಟ್ರು ಹಾಗೂ ಜೈ ಭೀಮ್​ ಚಿತ್ರಗಳ ಮೂಲಕ ಯಶಸ್ಸು ಸಾಧಿಸಿರುವ ಸೂರ್ಯ ಅವರಿಗೆ ಇದೀಗ ವಿಶೇಷ ಗೌರವ ಸಿಕ್ಕಿದೆ. ದಿ ಅಕಾಡೆಮಿ ಆಫ್ ಮೋಷನ್​ ಪಿಕ್ಚರ್​​ ಆ್ಯಂಡ್​ ಸೈನ್ಸ್​ ಸೋಶಿಯಲ್​ ಮೀಡಿಯಾದಲ್ಲಿ ಈ ಮಾಹಿತಿ ಹಂಚಿಕೊಂಡಿದೆ.

Bollywood star Kajol
ಆಸ್ಕರ್​ ಸಮಿತಿಯಲ್ಲಿ ನಟಿ ಕಾಜೋಲ್​ಗೂ ಅವಕಾಶ

ಇದನ್ನೂ ಓದಿ: ಗೋಲ್ಡನ್​ ಸಾರಿಯಲ್ಲಿ ಮಿರಿ ಮಿರಿ ಮಿಂಚುತ್ತಿರುವ ಚೆಲುವೆ

ಒಟ್ಟು 397 ಆಹ್ವಾನಿತರ ಪಟ್ಟಿಯನ್ನು ಅಕಾಡೆಮಿ ಹಂಚಿಕೊಂಡಿದ್ದು ಇದರಲ್ಲಿ ಶೇ. 44ರಷ್ಟು ಮಹಿಳೆಯರಿದ್ದಾರೆ. ಒಟ್ಟು 71 ಸದಸ್ಯರು ಆಸ್ಕರ್ ನಾಮಿನಿಗಳಾಗಿದ್ದಾರೆ. 2021ರ ಆಸ್ಕರ್ ವಿಜೇತರಾದ ಅರಿಯಾನಾ ಡಿಬೋಸ್, ಟ್ರಾಯ್ ಕೋಟ್ಸೂರ್ ಮತ್ತು ನಿರ್ದೇಶಕ ಸಿಯಾನ್ ಹೆಡರ್​ಗೂ ಆಹ್ವಾನ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.