ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಜನವರಿ 6ರಂದು (ಗುರುವಾರ) ವಿಶೇಷ ವಿವಾಹ ಕಾಯ್ದೆಯಡಿ ಫಹಾದ್ ಅಹ್ಮದ್ ಅವರನ್ನು ವಿವಾಹವಾಗಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಜೊತೆಗಿನ ಮದುವೆ ವಿಚಾರವನ್ನು ನಿನ್ನೆ ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದ್ದರು. ನ್ಯಾಯಾಲಯದಲ್ಲಿ ಮದುವೆ ಆಗಿರುವ ದಂಪತಿ ಇದೀಗ ಅದ್ಧೂರಿ ವಿವಾಹಕ್ಕೆ ಸಜ್ಜಾಗಿದ್ದಾರೆ.
-
Three cheers for the #SpecialMarriageAct (despite notice period etc.) At least it exists & gives love a chance… The right to love, the right to choose your life partner, the right to marry, the right to agency these should not be a privilege.@FahadZirarAhmad
— Swara Bhasker (@ReallySwara) February 17, 2023 " class="align-text-top noRightClick twitterSection" data="
✨✨✨♥️♥️♥️ pic.twitter.com/4wORvgSKDR
">Three cheers for the #SpecialMarriageAct (despite notice period etc.) At least it exists & gives love a chance… The right to love, the right to choose your life partner, the right to marry, the right to agency these should not be a privilege.@FahadZirarAhmad
— Swara Bhasker (@ReallySwara) February 17, 2023
✨✨✨♥️♥️♥️ pic.twitter.com/4wORvgSKDRThree cheers for the #SpecialMarriageAct (despite notice period etc.) At least it exists & gives love a chance… The right to love, the right to choose your life partner, the right to marry, the right to agency these should not be a privilege.@FahadZirarAhmad
— Swara Bhasker (@ReallySwara) February 17, 2023
✨✨✨♥️♥️♥️ pic.twitter.com/4wORvgSKDR
ಸ್ವರಾ ಭಾಸ್ಕರ್ ಟ್ವೀಟ್: ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸ್ವರಾ ಭಾಸ್ಕರ್ ಅವರು ಇಂದು ವಿಶೇಷ ವಿವಾಹ ಕಾಯ್ದೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ವಿಶೇಷ ವಿವಾಹ ಕಾಯ್ದೆ ಪ್ರೀತಿಗೆ ಅವಕಾಶ ನೀಡುತ್ತದೆ. ಪ್ರೀತಿ ಮತ್ತು ಜೀವನ ಸಂಗಾತಿಯನ್ನು ಮದುವೆಯಾಗುವ ಹಕ್ಕು 'ಸವಲತ್ತು' ಆಗಬಾರದು ಎಂದು ಕೂಡ ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, ತಮ್ಮ ಮದುವೆಗೆ ಪ್ರೀತಿ ಮತ್ತು ಆಶೀರ್ವಾದ ನೀಡಿದ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮಾರ್ಚ್‌ನಲ್ಲಿ ಅದ್ಧೂರಿ ವಿವಾಹ: ಮಾರ್ಚ್‌ನಲ್ಲಿ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ದಂಪತಿಯ ಅದ್ಧೂರಿ ವಿವಾಹ ಮಹೋತ್ಸವ ನಡೆಯಲಿದೆ. 'ಶೆಹನಾಯಿ-ವಾಲಿ ಶಾದಿ'ಗೆ ಸ್ವರಾ ಉತ್ಸುಕರಾಗಿದ್ದಾರೆ. ಅದ್ಧೂರಿ ಮದುವೆಗೆ ಈ ದಂಪತಿ ಮತ್ತು ಕುಟುಂಬಸ್ಥರು ಸದ್ಯಕ್ಕೆ ಯಾವುದೇ ಪ್ಲ್ಯಾನ್ ಮಾಡಿಲ್ಲ. ಆದ್ರೆ ಮಾರ್ಚ್‌ನಲ್ಲಿ ವಿವಾಹ ಮಹೋತ್ಸವ ನಡೆಸಲಿದ್ದಾರೆ.
34 ವರ್ಷದ ನಟಿ ಸ್ವರಾ ಭಾಸ್ಕರ್ ಮತ್ತು ರಾಜಕಾರಣಿ ಫಹಾದ್ ಅಹ್ಮದ್ ನಿನ್ನೆಯ ಮದುವೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ನೆಟ್ಟಿಗರು, ಅಭಿಮಾನಿಗಳು ಈ ನವದಂಪತಿಗೆ ಶುಭ ಕೋರಿದ್ದಾರೆ. ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ದಂಪತಿಯನ್ನು ಟ್ರೋಲ್ ಮಾಡಿದ್ದಾರೆ. ಸ್ವರಾ ಅವರು ಫಹಾದ್ ಅವರನ್ನು "ಭಯ್ಯಾ" ಎಂದು ಕರೆದ ಟ್ವೀಟ್ ಒಂದನ್ನು ಕೆಲವರು ನೆನಪಿಸಿದ್ದಾರೆ.
-
शुक्रिया ज़र्रानवाज़ी का दोस्त 💛
— Fahad Ahmad (@FahadZirarAhmad) February 2, 2023 " class="align-text-top noRightClick twitterSection" data="
भाई के कॉन्फिडेंस ने तो झंडे गाड़े है वो तो बरकरार रहना ज़रूरी है….और हाँ, तुमने वादा किया था तुम मेरी शादी में आओगे तो वक़्त निकालो….लड़की मैंने ढूँढ ली है 😎😎😎 https://t.co/fHHS1CXiH2
">शुक्रिया ज़र्रानवाज़ी का दोस्त 💛
— Fahad Ahmad (@FahadZirarAhmad) February 2, 2023
भाई के कॉन्फिडेंस ने तो झंडे गाड़े है वो तो बरकरार रहना ज़रूरी है….और हाँ, तुमने वादा किया था तुम मेरी शादी में आओगे तो वक़्त निकालो….लड़की मैंने ढूँढ ली है 😎😎😎 https://t.co/fHHS1CXiH2शुक्रिया ज़र्रानवाज़ी का दोस्त 💛
— Fahad Ahmad (@FahadZirarAhmad) February 2, 2023
भाई के कॉन्फिडेंस ने तो झंडे गाड़े है वो तो बरकरार रहना ज़रूरी है….और हाँ, तुमने वादा किया था तुम मेरी शादी में आओगे तो वक़्त निकालो….लड़की मैंने ढूँढ ली है 😎😎😎 https://t.co/fHHS1CXiH2
ಇದನ್ನೂ ಓದಿ: ಸಮಾಜವಾದಿ ಮುಖಂಡ ಫಹಾದ್ ಅಹ್ಮದ್ ಜೊತೆ ಸ್ವರಾ ಭಾಸ್ಕರ್ ಗಪ್ ಚುಪ್ ಶಾದಿ: ವಿಡಿಯೋ ಹಂಚಿಕೊಂಡ ನಟಿ
''ಕೆಲವೊಮ್ಮೆ ನಾವು ಏನನ್ನಾದರೂ ಹುಡುಕುತ್ತಾ ಅಲೆದಾಡುತ್ತೇವೆ. ಆದರೆ, ಅದು ಯಾವಾಗಲೂ ನಮ್ಮ ಸುತ್ತಲೂ ಇರುತ್ತದೆ'' ಎಂದು ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಸ್ವರಾ ಬರೆದುಕೊಂಡಿದ್ದರು. ಜೊತೆಗೆ ''ನಾವಿಬ್ಬರೂ ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ, ಇದಕ್ಕೂ ಮುನ್ನ ಸ್ನೇಹವಾಯಿತು. ನಂತರ ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡೆವು. ಫಹಾದ್ ಅಹ್ಮದ್ ನನ್ನ ಹೃದಯದ ಕೋಣೆಯಲ್ಲಿ ನಿಮಗೆ ಆತ್ಮೀಯ ಸ್ವಾಗತ. ನಾನು ಸ್ವಲ್ಪ ವಿಭಿನ್ನವಾಗಿದ್ದೇನೆ. ಆದರೆ, ಈಗ ನಾನು ನಿಮ್ಮವಳು'' ಎಂದು ನಟಿ ಬರೆದುಕೊಂಡಿದ್ದರು.
ಇದನ್ನೂ ಓದಿ: ಶೆಹಜಾದಾ ಸಿನಿಮಾ ಬಿಡುಗಡೆ: ಬಾಲಿವುಡ್ ಸಕ್ಸಸ್ ಮುಂದುವರಿಯುತ್ತಾ?!
ಫಹಾದ್ ಅಹ್ಮದ್ ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಯುವಜನ ಸಭಾದ ರಾಜ್ಯಾಧ್ಯಕ್ಷರೂ ಆಗಿದ್ದಾರೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅಭಿನಯದ ಜೊತೆಗೆ ವಿವಾದಾತ್ಮಕ ಹೇಳಿಕೆಗಳಿಂದ ಸದ್ದು ಮಾಡುತ್ತಿರುತ್ತಾರೆ. ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಹಿಂದೆ ಪ್ರತಿಭಟನೆಯೊಂದರಲ್ಲಿ ಭೇಟಿ ಆಗಿದ್ದರು. ಅಲ್ಲಿಂದ ಇಬ್ಬರ ನಡುವೆ ಸ್ನೇಹ ಆಯಿತು. ಬಳಿಕ ಪ್ರೀತಿ ಚಿಗುರೊಡೆದು ಇದೀಗ ನ್ಯಾಯಾಲಯದಲ್ಲಿ ಮದುವೆ ಆಗಿದ್ದಾರೆ. ಬರುವ ಮಾರ್ಚ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ.