ಚೆನ್ನೈ(ತಮಿಳುನಾಡು): ನಿರ್ದೇಶಕ ನೆಲ್ಸನ್ ಕೊಲಮಾವು ಕೋಕಿಲಾ 'ಡಾಕ್ಟರ್' ಚಿತ್ರದ ಮೂಲಕ ಯಶಸ್ವಿ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಡಾರ್ಕ್ ಕಾಮಿಡಿ ಅವರ ಚಿತ್ರಗಳಲ್ಲಿ ಅತ್ಯಂತ ಆನಂದದಾಯಕ ಭಾಗವಾಗಿತ್ತು. ಹೀಗಾಗಿ ವಿಜಯ್ ಜತೆ ‘ಬೀಸ್ಟ್’ ಸಿನಿಮಾ ನಿರ್ದೇಶಿಸುವ ಅವಕಾಶ ನೆಲ್ಸನ್ಗೆ ಸಿಕ್ಕಿತು. ಬಹು ನಿರೀಕ್ಷಿತ ಚಿತ್ರದ ಬಗ್ಗೆ ಮಿಶ್ರ ವಿಶ್ಲೇಷಣೆಗಳಿವೆ. ಸೋಷಿಯಲ್ ಮೀಡಿಯಾದಲ್ಲಿ ಬೀಸ್ಟ್ ಸಿನಿಮಾವನ್ನು ಲೇವಡಿ ಮಾಡಲಾಗಿತ್ತು. ಬೀಸ್ಟ್ ಕುರಿತು ಟೀಕೆಗಳ ಹೊರತಾಗಿಯೂ ನೆಲ್ಸನ್ ತಮಿಳು ಚಿತ್ರರಂಗದ ಟಾಪ್ ಸ್ಟಾರ್ ರಜನಿಕಾಂತ್ ಅವರನ್ನು ಮತ್ತೆ ನಿರ್ದೇಶಿಸುವ ಅವಕಾಶ ಪಡೆದರು. ನೆಲ್ಸನ್ ಅವರು ರಜನಿಕಾಂತ್ ಜೊತೆ 'ಜೈಲರ್' ನಿರ್ದೇಶನ ಮಾಡಿದ್ದಾರೆ.
ಕಲಾನಿಧಿ ಮಾರನ್ ಈ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ತಮಿಳಿನ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ. ನಾಯಕಿಯಾಗಿ ಸೌತ್ ಮಿಲ್ಕಿ ಬ್ಯೂಟಿ ಜನಪ್ರಿಯತೆಯ ತಮನ್ನಾ ಭಾಟಿಯಾ ನಟಿಸುತ್ತಿದ್ದಾರೆ. ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಜಾಕಿ ಶ್ರಾಫ್, ರಮ್ಯಾ ಕೃಷ್ಣ, ಹಾಸ್ಯನಟ ಸುನೀಲ್ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಆರ್.ನಿರ್ಮಲ್ ಸಂಕಲನ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಚಿತ್ರಕ್ಕಿದೆ.
-
It's a wrap for #Jailer! Theatre la sandhippom 😍💥#JailerFromAug10@rajinikanth @Nelsondilpkumar @anirudhofficial @Mohanlal @NimmaShivanna @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi @kvijaykartik @Nirmalcuts @KiranDrk @StunShiva8 pic.twitter.com/Vhejuww4fg
— Sun Pictures (@sunpictures) June 1, 2023 " class="align-text-top noRightClick twitterSection" data="
">It's a wrap for #Jailer! Theatre la sandhippom 😍💥#JailerFromAug10@rajinikanth @Nelsondilpkumar @anirudhofficial @Mohanlal @NimmaShivanna @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi @kvijaykartik @Nirmalcuts @KiranDrk @StunShiva8 pic.twitter.com/Vhejuww4fg
— Sun Pictures (@sunpictures) June 1, 2023It's a wrap for #Jailer! Theatre la sandhippom 😍💥#JailerFromAug10@rajinikanth @Nelsondilpkumar @anirudhofficial @Mohanlal @NimmaShivanna @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi @kvijaykartik @Nirmalcuts @KiranDrk @StunShiva8 pic.twitter.com/Vhejuww4fg
— Sun Pictures (@sunpictures) June 1, 2023
ಅದ್ಧೂರಿ ವೆಚ್ಚದಲ್ಲಿ ತಯಾರಾಗುತ್ತಿರುವ ಜೈಲರ್ ಚಿತ್ರವನ್ನು ಚೆನ್ನೈ, ನೆಯ್ವೇಲಿ, ಹೈದರಾಬಾದ್, ಕೊಚ್ಚಿ ಸೇರಿದಂತೆ ದೇಶದ ಹಲವೆಡೆ ದೊಡ್ಡ ವೆಚ್ಚದಲ್ಲಿ ಚಿತ್ರೀಕರಿಸಲಾಗಿದೆ. ಆಕ್ಷನ್ ಚಿತ್ರವಾಗಿರುವ ಜೈಲರ್ ಚಿತ್ರದಲ್ಲಿ ರಜನಿಕಾಂತ್ ಜೈಲರ್ ಆಗಿ 'ಮುತ್ತುವೇಲ್ ಪಾಂಡಿಯನ್' ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಗ್ಲಿಂಪ್ಸ್ ವಿಡಿಯೋದಲ್ಲಿ ರಜನಿಕಾಂತ್ ತಮ್ಮ ಪ್ರವೇಶದೊಂದಿಗೆ ಅಭಿಮಾನಿಗಳನ್ನು ಬೆರಗಾಗಿಸಿದ್ದಾರೆ. ಅವರದ್ದೇ ಸ್ಟೈಲ್ನಲ್ಲಿ ಕಾರಿನಿಂದ ಇಳಿಯುತ್ತಿರುವುದನ್ನು ನೋಡಬಹುದು. ನೀಲಿ ಬಣ್ಣದ ಶರ್ಟ್ಗೆ ಕಂದು ಬಣ್ಣದ ಪ್ಯಾಂಟ್ ಧರಿಸಿ, ಕೂಲಿಂಗ್ ಗ್ಲಾಸ್ ತೊಟ್ಟು ಅವರ ನೋಟ ಅಭಿಮಾನಿಗಳಿಗೆ ಥ್ರಿಲ್ ನೀಡಿದೆ. ಶಿವರಾಜ್ಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್, ಸುನೀಲ್ ಅವರ ಪಾತ್ರವನ್ನೂ ತೋರಿಸಲಾಗಿದೆ.
ಚಿತ್ರ ಆಗಸ್ಟ್ 10 ರಂದು ಚಿತ್ರಮಂದಿರಗಳಿಗೆ ಬರಲಿದೆ. ಸದ್ಯ ಚಿತ್ರೀಕರಣ ಪೂರ್ಣಗೊಂಡಿದೆ. ನಿನ್ನೆ ರಜನಿಕಾಂತ್, ತಮನ್ನಾ ಮತ್ತು ನೆಲ್ಸನ್ ಚಿತ್ರದ ತಂತ್ರಜ್ಞರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಚಿತ್ರತಂಡ ಫೋಟೋಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತೋಷದ ಸುದ್ದಿ ನೀಡಿದ್ದಾರೆ.
ರಜನಿಕಾಂತ್ ಅವರ ಕೊನೆಯ ಚಿತ್ರ ‘ಅನ್ನಧಾ’. ಶಿವಾ ನಿರ್ದೇಶನದ ಈ ಚಿತ್ರ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಇದರಿಂದ ರಜನಿಕಾಂತ್ ಹಿಟ್ ಚಿತ್ರ ಕೊಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಅಂತೆಯೇ ನೆಲ್ಸನ್ ಕೂಡ ಗೆಲುವಿಗಾಗಿ ಕಾಯುತ್ತಿದ್ದು ಇವರಿಬ್ಬರ ಮೈತ್ರಿ ಹೇಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಅಪ್ಡೇಟ್ಗಳು ಹೊರಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ರಜನಿ, ಶಿವರಾಜ್ ಕುಮಾರ್ ಅಭಿನಯದ 'ಜೈಲರ್' ಬಿಡುಗಡೆಗೆ ಮುಹೂರ್ತ ಫಿಕ್ಸ್