ETV Bharat / entertainment

ರಜನಿ, ಶಿವರಾಜ್‌ ಕುಮಾರ್ ಅಭಿನಯದ 'ಜೈಲರ್​' ಬಿಡುಗಡೆಗೆ ಮುಹೂರ್ತ ಫಿಕ್ಸ್

ಕಾಲಿವುಡ್​ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್​ ಸಿನಿಮಾ ಆಗಸ್ಟ್​ 10 ರಂದು ಬಿಡುಗಡೆಯಾಗಲಿದೆ.

author img

By

Published : May 5, 2023, 11:10 AM IST

jailer
ಜೈಲರ್

ಬೀಸ್ಟ್ ಸಿನಿಮಾ ಖ್ಯಾತಿಯ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಮತ್ತು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕಾಂಬಿನೇಷನ್‌ನಲ್ಲಿ 'ಜೈಲರ್' ಸಿನಿಮಾ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಇದು ರಜನಿಕಾಂತ್ ಅವರ 169ನೇ ಚಿತ್ರ. ಈ ಚಿತ್ರದಲ್ಲಿ ನಟ ಶಿವರಾಜ್ ​ಕುಮಾರ್​ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾ ಆಗಸ್ಟ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ. ಬಿಡುಗಡೆ ದಿನಾಂಕ ಘೋಷಣೆಯೊಂದಿಗೆ 47 ಸೆಕೆಂಡುಗಳ ವಿಡಿಯೋ ಗ್ಲಿಂಪ್ಸ್​ ಅನ್ನು ಅವರು ಶೇರ್​ ಮಾಡಿದ್ದಾರೆ.

ಕಲಾನಿಧಿ ಮಾರನ್ ಈ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ತಮಿಳಿನ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.​ ರಜನಿಕಾಂತ್​ಗೆ ನಾಯಕಿಯಾಗಿ ಸೌತ್​ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟಿಸುತ್ತಿದ್ದಾರೆ. ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವರಾಜ್​​ಕುಮಾರ್​, ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ ಲಾಲ್​, ಜಾಕಿ ಶ್ರಾಫ್​, ರಮ್ಯಾ ಕೃಷ್ಣ, ಹಾಸ್ಯನಟ ಸುನೀಲ್​ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಆರ್.ನಿರ್ಮಲ್​ ಸಂಕಲನ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣವಿದೆ.

ಗ್ಲಿಂಪ್ಸ್ ವಿಡಿಯೋದಲ್ಲಿ ರಜನಿಕಾಂತ್​ ತಮ್ಮ ಪ್ರವೇಶದೊಂದಿಗೆ ಅಭಿಮಾನಿಗಳನ್ನು ಬೆರಗಾಗಿಸಿದ್ದಾರೆ. ಅವರದ್ದೇ ಸ್ಟೈಲ್​ನಲ್ಲಿ ಕಾರಿನಿಂದ ಇಳಿಯುತ್ತಿರುವುದನ್ನು ನೋಡಬಹುದು. ನೀಲಿ ಬಣ್ಣದ ಶರ್ಟ್​ಗೆ ಕಂದು ಬಣ್ಣದ ಪ್ಯಾಂಟ್ ಧರಿಸಿ, ಕೂಲಿಂಗ್​ ಗ್ಲಾಸ್​ ತೊಟ್ಟು ಅವರ ನೋಟ ಅದ್ಭುತವಾಗಿದೆ. ಶಿವರಾಜ್​ಕುಮಾರ್​, ಮೋಹನ್​ ಲಾಲ್​, ಜಾಕಿ ಶ್ರಾಫ್​, ಸುನೀಲ್​ ಅವರ ಪಾತ್ರವನ್ನೂ ತೋರಿಸಲಾಗಿದೆ. ಚಿತ್ರತಂಡದ ಹೊಸ ಅಪ್​ಡೇಟ್​ ಕಂಡ ರಜನಿ ಫ್ಯಾನ್ಸ್​ ಜೊತೆಗೆ ಶಿವರಾಜ್ ಕುಮಾರ್ ಮತ್ತು ಲಾಲೇಟ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ: ಅನುಪಮ್​ ಖೇರ್​ 537ನೇ ಚಿತ್ರಕ್ಕೆ ಟೈಟಲ್​ ಫಿಕ್ಸ್​; ಕಾರ್ಟೂನ್​​ ಪೋಸ್ಟರ್ ಔಟ್​

ಸ್ವಾತಂತ್ರ್ಯ ದಿನಾಚರಣೆಯ ವಾರಾಂತ್ಯದ ಲಾಭವನ್ನು ಪಡೆಯಲು ಬಿಡುಗಡೆ ದಿನಾಂಕವನ್ನು ಆ ಸಮಯದಲ್ಲೇ ಯೋಜಿಸಲಾಗಿದೆಯಂತೆ. ಇದೇ ಆಗಸ್ಟ್ ತಿಂಗಳಿನಲ್ಲಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಮತ್ತು ಮೆಹರ್ ರಮೇಶ್ ಕಾಂಬಿನೇಷನ್​ನ 'ಭೋಲಾ ಶಂಕರ್' ಕೂಡ ಬಿಡುಗಡೆಯಾಗಲಿದೆ. ಮೇ ದಿನದಂದು ಕಾರ್ಮಿಕರ ದಿನಾಚರಣೆ ಆಚರಿಸಲು ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಪೋಸ್ಟರ್​ನಲ್ಲಿ ಚಿರು ಸ್ಟೈಲಿಶ್ ಟ್ಯಾಕ್ಸಿ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ‘ಜೈಲರ್’ ರಿಲೀಸ್ ಆದ ಮರುದಿನವೇ ಚಿರಂಜೀವಿ ಸಿನಿಮಾ ರಿಲೀಸ್ ಆಗುತ್ತಿದೆ.

ಈ ಚಿತ್ರದಲ್ಲೂ ತಮನ್ನಾ ಭಾಟಿಯಾ ನಾಯಕಿಯಾಗಿದ್ದಾರೆ. ಚಿರಂಜೀವಿ ಅವರ ಸಹೋದರಿಯಾಗಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್ ಮೆಗಾಸ್ಟಾರ್ ಮತ್ತು ಕಾಲಿವುಡ್ ಸೂಪರ್ ಸ್ಟಾರ್ ಸಿನಿಮಾಗಳು ಒಂದೇ ದಿನದ ಗ್ಯಾಪ್​ನಲ್ಲಿ ಥಿಯೇಟರ್​ಗೆ ಬರಲಿವೆ. ಸ್ವಾತಂತ್ರ್ಯ ದಿನದ ಕದನದಲ್ಲಿ ಯಾರು ಗೆಲ್ಲುತ್ತಾರೆ? ಎಂಬ ಕುತೂಹಲ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿದೆ. ಜೊತೆಗೆ ಜೈಲರ್​ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿರುವ ಕಾರಣ ಕನ್ನಡ ಪ್ರೇಕ್ಷಕರಲ್ಲೂ ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಹೊಸ ಪ್ರತಿಭೆಯ 'ಲಕ್' ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ: ಡಾಲಿ ಧನಂಜಯ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.