ETV Bharat / entertainment

'ಪಠಾಣ್'​ ಹಿಂದಿಕ್ಕಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದ 'ಗದರ್​ 2' - ಈಟಿವಿ ಭಾರತ ಕನ್ನಡ

ಸನ್ನಿ ಡಿಯೋಲ್​ ಅವರ 'ಗದರ್​ 2' ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ.

Gadar 2
'ಪಠಾಣ್'​ ಹಿಂದಿಕ್ಕಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದ 'ಗದರ್​ 2'
author img

By ETV Bharat Karnataka Team

Published : Sep 28, 2023, 11:00 PM IST

ಬಾಲಿವುಡ್​ನ ಈ ವರ್ಷದ ಸೂಪರ್​ಹಿಟ್​ ಸಿನಿಮಾಗಳ ಸಾಲಿನಲ್ಲಿ ಪಠಾಣ್​, ಗದರ್ 2 ಹಾಗೂ ಜವಾನ್​ ಪ್ರಮುಖವಾಗಿವೆ.​ ಕಲೆಕ್ಷನ್​ ವಿಚಾರದಲ್ಲಿ ಗದರ್​ 2 ಮತ್ತು ಜವಾನ್​ ಸಿನಿಮಾಗಳನ್ನು ಪಠಾಣ್​ ಹಿಂದಿಕ್ಕಿದೆ. ಅದರಲ್ಲೂ ಜವಾನ್ ಮತ್ತು ಗದರ್​ 2 ಮಧ್ಯೆ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರಗಳಾಗಲು ಪೈಪೋಟಿ ನಡೆಯುತ್ತಿದೆ. ಇತ್ತೀಚೆಗಿನ ವರದಿ ಪ್ರಕಾರ, ಸನ್ನಿ ಡಿಯೋಲ್​ ಅವರ ಗದರ್​ 2 ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ.

ಟ್ರೇಡ್​ ವಿಶ್ಲೇಷಕ ತರುಣ್​ ಆದರ್ಶ್​ ಅವರು ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ​ಸನ್ನಿ ಡಿಯೋಲ್​ ಮತ್ತು ಅಮೀಶಾ ಪಟೇಲ್​ ಅವರ ಗದರ್​ 2 ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ ಒಟ್ಟು ಮೊತ್ತವನ್ನು ಬಹಿರಂಗಪಡಿಸಿದ್ದಾರೆ. ಭಾರತದಲ್ಲಿ (ಹಿಂದಿ ಆವೃತ್ತಿ) 524.75 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಗದರ್​ 2 ಅತಿ ಹೆಚ್ಚು ಗಳಿಸಿದ ಹಿಂದಿ ಚಲನಚಿತ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಅವರ ಪಠಾಣ್​ ಸಿನಿಮಾ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರವಾಗಿತ್ತು. ಆದರೆ ಸೆಪ್ಟೆಂಬರ್​ 7 ರಂದು ಬಿಡುಗಡೆಯಾದ ಎಸ್​ಆರ್​ಕೆ ಅವರ ಜವಾನ್ ಮತ್ತು ಆಗಸ್ಟ್​ 11 ರಂದು ತೆರೆ ಕಂಡ ಗದರ್​ 2 ಸಿನಿಮಾಗಳು ಪಠಾಣ್​ ಅನ್ನು ಸಿಂಹಾಸನದಿಂದ ಕೆಳಗಿಳಿಸಲು ಥಿಯೇಟರ್​ಗಳಲ್ಲಿ ವೇಗದ ಓಟ ಮುಂದುವರೆಸಿತ್ತು. ಅದರಂತೆ ಗದರ್​ 2 ಅಧಿಕೃತವಾಗಿ ಪಠಾಣ್​ಗಿಂತ ಒಂದು ಹೆಜ್ಜೆ ಮುಂದೆ ಇರಿಸಿದ್ದು, ಅನೇಕ ದಾಖಲೆಗಳೊಂದಿಗೆ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ. ​

ಈ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡ ತರುಣ್​ ಆದರ್ಶ್​, "'ಗದರ್​ 2' ಭಾರತದಲ್ಲಿ 'ಪಠಾಣ್'​ನ ಹಿಂದಿ ಆವೃತ್ತಿಯ (524.53 ಕೋಟಿ ರೂ.) ಕಲೆಕ್ಷನ್​ ಅನ್ನು ಮೀರಿಸಿದೆ. ಈಗ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವಾಗಿದೆ. ಗದರ್​ 2 ಬಾಕ್ಸ್​ ಆಫೀಸ್​ ಕಲೆಕ್ಷನ್​ಗಳು.. ಒಂದನೇ ವಾರ: 284.63 ಕೋಟಿ ರೂಪಾಯಿ, ಎರಡನೇ ವಾರ: 134.47 ಕೋಟಿ ರೂಪಾಯಿ, ಮೂರನೇ ವಾರ: 63.35 ಕೋಟಿ ರೂಪಾಯಿ, ನಾಲ್ಕನೇ ವಾರ: 27.55 ಕೋಟಿ ರೂಪಾಯಿ, ಐದನೇ ವಾರ: 7.28 ಕೋಟಿ ರೂಪಾಯಿ, ಆರನೇ ವಾರ: 4.72 ಕೋಟಿ ರೂಪಾಯಿ, ಏಳನೇ ವಾರ: 2.75 ಕೋಟಿ ರೂಪಾಯಿ (ಬುಧವಾರದವರೆಗೆ). ಭಾರತದಲ್ಲಿ ಒಟ್ಟು ಕಲೆಕ್ಷನ್​: 524.75 ಕೋಟಿ ರೂಪಾಯಿ" ಎಂದು ಬರೆದುಕೊಂಡಿರುವ ಅವರು ಗದರ್​ 2 ಕಲೆಕ್ಷನ್​ ಬಗ್ಗೆ ಕಂಪ್ಲೀಟ್​ ಮಾಹಿತಿ ನೀಡಿದ್ದಾರೆ.

ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್​ ಪ್ರಕಾರ, ಶಾರುಖ್​ ಖಾನ್​ ಅವರ 'ಜವಾನ್' ಸಿನಿಮಾ ಭಾರತದಲ್ಲಿ 600 ಕೋಟಿ ರೂಪಾಯಿಗಳ ಗಡಿಯನ್ನು ಸಮೀಪಿಸುತ್ತಿದೆ. ಚಿತ್ರವು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಯಿತು. ಈ ಮೂರು ಭಾಷೆಗಳಲ್ಲಿ ಸಿನಿಮಾ ಒಟ್ಟು 579.93 ಕೋಟಿ ರೂಪಾಯಿ ಗಳಿಸಿದೆ. ​ ​

'ಗದರ್ 2' 2001ರ ಗದರ್ ಚಿತ್ರದ ಮುಂದುವರಿದ ಭಾಗ. ಸನ್ನಿ ಡಿಯೋಲ್ ಮೊದಲ ಚಿತ್ರದಲ್ಲಿ ತಾರಾ ಸಿಂಗ್ ಎಂಬ ಟ್ರಕ್ ಡ್ರೈವರ್ ಪಾತ್ರ ನಿರ್ವಹಿಸಿದ್ದರೆ, ಅಮೀಶಾ ಪಟೇಲ್ ಸಕೀನಾ ಪಾತ್ರದಲ್ಲಿ ನಟಿಸಿದ್ದರು. ಗದರ್ 2 ಚಿತ್ರವನ್ನು ಝೀ ಸ್ಟುಡಿಯೋಸ್ ನಿರ್ಮಿಸಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹಿಟ್​ ಬ್ಲಾಕ್‌ಬಸ್ಟರ್‌ಗಳಲ್ಲಿ ಈ ಸಿನಿಮಾವು ಒಂದಾಗಿದೆ. ಸನ್ನಿ ಮತ್ತು ಅಮೀಶಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಮೋಹಕವಾಗಿ ಕಂಡುಬಂದರೆ, ತಾರಾ ಸಿಂಗ್ ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಶಿಳ್ಳೆ ಹೊಡೆಯುವಂತೆ ಪ್ರೇರೇಪಿಸಿತ್ತು.

ಇದನ್ನೂ ಓದಿ: 'ಬಾಹುಬಲಿ 2' ದಾಖಲೆ​ ಮುರಿದ 'ಗದರ್ 2': ಸನ್ನಿ ಡಿಯೋಲ್​ ಸಿನಿಮಾಗೆ ಮತ್ತೊಂದು ಗರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.