ETV Bharat / entertainment

'ಕಾಫಿ ವಿತ್ ಕರಣ್' ಶೋನಲ್ಲಿ ಕಾಣಿಸಿಕೊಳ್ಳುತ್ತಾರಾ ಸುಹಾನಾ ಖಾನ್?: ಕರಣ್ ಜೋಹರ್ ಸ್ಪಷನೆ - ಸುಹಾನಾ ಖಾನ್

ನಿರೂಪಕ ಕರಣ್ ಜೋಹರ್ ಅವರ ಚಾಟ್ ಶೋ "ಕಾಫಿ ವಿತ್ ಕರಣ್" ನಲ್ಲಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಇದಕ್ಕೆ ಸ್ವತಃ ಕರಣ್ ಜೋಹರ್ ಅವರೇ ಸ್ಪಷನೆ ನೀಡಿದ್ದಾರೆ.

Suhana Khan
ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ವಿಡಿಯೋ
author img

By

Published : Jul 30, 2022, 6:52 AM IST

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರು ಸೆಲೆಬ್ರಿಟಿ ಚಾಟ್ ಶೋ 'ಕಾಫಿ ವಿತ್ ಕರಣ್' ಸೀಸನ್​ 7 ನಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದಕ್ಕೆ ಸ್ವತಃ ಕರಣ್ ಜೋಹರ್ ಅವರೇ ಸ್ಪಷನೆ ನೀಡಿದ್ದಾರೆ.

ಹೌದು, 'ಕಾಫಿ ವಿತ್ ಕರಣ್' ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಅವರು 'ದಿ ಆರ್ಚೀಸ್' ಗ್ಯಾಂಗ್‌ ಶೋಗೆ ಪದಾರ್ಪಣೆ ಮಾಡುತ್ತಿಲ್ಲ, ಸುಹಾನಾ ಕೂಡ ಶೋನಲ್ಲಿ ಕಾಣಿಸಿಕೊಳ್ಳುವುದಿಲ್ಲ,ಈ ಎಲ್ಲ ವದಂತಿಗಳು ನಿಜವಲ್ಲ ಎಂದು ಹೇಳಿದ್ದಾರೆ.

ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ವಿಡಿಯೋ

ಅಂತಾರಾಷ್ಟ್ರೀಯ ಆರ್ಚೀಸ್​ ಕಾಮಿಕ್ಸ್​ ಸರಣಿಯನ್ನು ಆಧರಿಸಿ ಬಾಲಿವುಡ್​ ನಿರ್ದೇಶಕಿ ಜೋಯಾ ಅಖ್ತರ್​ ಅವರು 'ದಿ ಆರ್ಚೀಸ್' ಎಂಬ ಸಿನಿಮಾ ಮಾಡುತ್ತಿದ್ದಾರೆ. ಟೈಗರ್ ಬೇಬಿ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ಬಾಲಿವುಡ್ ನ ಮೂರು ಕುಟುಂಬಗಳ ನಟರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ, ಶಾರೂಖ್ ಖಾನ್ ಮಗಳು ಸುಹಾನಾ ಖಾನ್ ಮತ್ತು ಹಿರಿಯ ನಟಿ ದಿವಂಗತ ಶ್ರೀದೇವಿ ಅವರ ಮಗಳು ಖುಷಿ ಕಪೂರ್ ಕಾಣಿಸಿಕೊಂಡಿದ್ದಾರೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಈ ಚಲನಚಿತ್ರವು 2023 ರಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಚೊಚ್ಚಲ ಚಿತ್ರದ ಶೂಟಿಂಗ್​ನಲ್ಲಿ ಸುಹಾನಾ ಖಾನ್, ಖುಷಿ ಕಪೂರ್, ಅಗಸ್ತ್ಯ ನಂದಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.