ETV Bharat / entertainment

'ವರ್ಗ' ನಿರ್ಧರಿಸುವುದು ನೀವು ಮಾಡುವ ಕೆಲಸದಿಂದಲೇ ಹೊರತು ಹಣದಿಂದಲ್ಲ: ಸುಧಾ ಮೂರ್ತಿ

'ದಿ ಕಪಿಲ್​ ಶರ್ಮಾ ಶೋ'ನಲ್ಲಿ ಭಾಗವಹಿಸಿದ ಸುಧಾಮೂರ್ತಿ ತಮ್ಮ ವೈಯಕ್ತಿಕ ಜೀವನದ ಅನೇಕ ವಿಚಾರಗಳನ್ನು ಹಂಚಿಕೊಂಡರು.

Sudha Murthy
ಸುಧಾ ಮೂರ್ತಿ
author img

By

Published : May 11, 2023, 5:53 PM IST

ಉದ್ಯಮಿ, ಸಮಾಜ ಸೇವಕಿಯಾಗಿರುವ ಸುಧಾ ಮೂರ್ತಿ ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​ಆರ್​ ನಾರಾಯಣ ಮೂರ್ತಿಯವರ ಪತ್ನಿಯಾಗಿರುವ ಇವರು ಉದಾತ್ತ ವ್ಯಕ್ತಿಯಾಗಿ ಉತ್ತಮ ಹೆಸರು ಗಳಿಸಿದ್ದಾರೆ. ಅವರು ಇತ್ತೀಚೆಗೆ ದಿ ಕಪಿಲ್​ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು. ಅವರ ಜೊತೆಗೆ ಕೆಜಿಎಫ್​ 2 ನಟಿ ರವೀನಾ ಟಂಡನ್​ ಮತ್ತು ಆಸ್ಕರ್​ ವಿಜೇತೆ ನಿರ್ಮಾಪಕಿ ಗುನೀತ್​ ಮೋಂಗಾ ಕೂಡ ಭಾಗಿಯಾಗಿದ್ದರು.

ಈ ವೇಳೆ ಅವರೆಲ್ಲರೂ ತಮ್ಮ ವೈಯಕ್ತಿಕ ಜೀವನದ ಅನೇಕ ವಿಚಾರಗಳನ್ನು ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ಸುಧಾ ಮೂರ್ತಿಯವರ ಜೀವನಗಾಥೆಯಂತೂ ಪ್ರೇಕ್ಷಕರನ್ನು ಬಹುವಾಗಿ ಸೆಳೆದಿದೆ. ಸುಧಾ ಅವರು ಕೆಲವು ವರ್ಷದ ಹಿಂದೆ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಯಾರೋ ಕೆಳವರ್ಗದ ಜನ ಎಂದು ಕರೆದಿದ್ದರು ಎಂಬುದನ್ನು ನೆನಪಿಸಿಕೊಂಡರು.

ಸುಧಾ ಮೂರ್ತಿಯವರು ವಿದೇಶಕ್ಕೆ ತೆರಳುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಅವರ ಡ್ರೆಸ್​ ಕಂಡು ಕೆಳವರ್ಗದ ಜನ ಎಂದು ಒಬ್ಬ ವ್ಯಕ್ತಿ ಕರೆದರಂತೆ. ಅವರು 4- 5 ವರ್ಷಗಳ ಹಿಂದೆ ಸಿಂಪಲ್​ ಸಲ್ವಾರ್​ ಕಮೀಜ್​ ಧರಿಸಿ ವಿಮಾನ ನಿಲ್ದಾಣದಲ್ಲಿ ಬ್ಯುಸಿನೆಸ್​ ಕ್ಲಾಸ್​ ಕ್ಯೂನಲ್ಲಿ ನಿಂತಿದ್ದರಂತೆ. ಅವರ ಡ್ರೆಸ್​ ಕಂಡು ಬಡವರೆಂದು ಭಾವಿಸಿ ಕ್ಯಾಟಲ್​ ಕಾಸ್ಟ್​ ವರ್ಗದ ಜನರು ಎಂದು ಕರೆದಿದ್ದರಂತೆ.

ಈ ಘಟನೆಯನ್ನು ನೆನಪಿಸಿಕೊಂಡ ಅವರು, "ಒಬ್ಬರನ್ನು ಅವರು ಹಾಕಿದ ಬಟ್ಟೆಯಿಂದ ವ್ಯಾಖ್ಯಾನಿಸುವುದಲ್ಲ. ಅದಕ್ಕೆ ಪ್ರಾಮುಖ್ಯತೆಯೂ ಇರುವುದಿಲ್ಲ. ನಾವು ಮಾಡುವ ಕೆಲಸದಿಂದ ಮತ್ತು ಅದನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತೀರ ಎಂಬುದರ ಮೇಲೆ 'ವರ್ಗ'ವನ್ನು ವ್ಯಾಖ್ಯಾನಿಸಲಾಗುತ್ತದೆ. ಇದು ಖಂಡಿತ ಹಣಕ್ಕೆ ಸಂಬಂಧಿಸಿದಲ್ಲ" ಎಂದರು. ಇದು ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸಿತು. ಸುಧಾ ಮೂರ್ತಿ ಸರಳತೆ ಮತ್ತೊಮ್ಮೆ ಸಾಬೀತಾಯಿತು.

ಇದನ್ನೂ ಓದಿ: 'ಮುಖ್ಯಾಂಶ ಬರೆಯುವ ಪತ್ರಕರ್ತೆಯೇ ಹೆಡ್​​ಲೈನ್': Scoop ಸೀರಿಸ್​ ಪ್ರಸಾರಕ್ಕೆ ದಿನ ನಿಗದಿ

ಸುಧಾಮ್ಮ ಲವ್​ ಸ್ಟೋರಿ: ದಿ ಕಪಿಲ್​ ಶರ್ಮಾ ಶೋನಲ್ಲಿ ಸುಧಾ ಮೂರ್ತಿಯವರು ತಮ್ಮ ಪತಿ ನಾರಾಯಣ ಮೂರ್ತಿಯವರನ್ನು ಮೊದಲ ಬಾರಿಗೆ ಭೇಟಿಯಾದ ಘಟನೆಯನ್ನು ನೆನಪಿಸಿಕೊಂಡರು. ಅವರಿಗೆ ಪ್ರಸನ್ನ ಎಂಬ ಗೆಳೆಯನಿದ್ದು, ಆತ ಪ್ರತಿದಿನ ನಾರಾಯಣ ಮೂರ್ತಿ ಎಂಬ ಪುಸ್ತಕ ತರುತ್ತಿದ್ದರಂತೆ. ಯಾವುದೇ ಪುಸ್ತಕ ತಂದುಕೊಟ್ಟರೂ ಅದಕ್ಕೆ ನಾರಾಯಣ ಮೂರ್ತಿ ಎಂಬ ಹೆಸರು ಅಂಟಿಕೊಂಡಿರುತಿತ್ತಂತೆ. ಅದಕ್ಕೆ ಆ ಹೆಸರು ಕಂಡಾಗಲೆಲ್ಲಾ ಯಾರೋ ಅಂತಾರಾಷ್ಟ್ರೀಯ ಬಸ್​ ಕಂಡಕ್ಟರ್​ ಹೆಸರು ಇರಬೇಕು ಎಂದು ಸುಧಾ ಮೂರ್ತಿ ಭಾವಿಸಿದ್ದರಂತೆ.

ಆದರೆ ಅದೇ ಸ್ನೇಹಿತ ಪ್ರಸನ್ನ ಒಂದು ದಿನ ನಾರಾಯಣ ಮೂರ್ತಿಯವರನ್ನು ನಿಜವಾಗಿಯೂ ಸುಧಾ ಮನೆಗೆ ಕರೆದುಕೊಂಡು ಬಂದಿದ್ದರಂತೆ. ನಾರಾಯಣ ಮೂರ್ತಿ ಅವರನ್ನು ಭೇಟಿಯಾಗುವ ಮೊದಲು ಅವರು ಸಿನಿಮಾ ಹೀರೋನಂತೆ ಹ್ಯಾಂಡ್ಸಮ್​ ಆಗಿ ಇರುತ್ತಾರೆ ಎಂದು ಭಾವಿಸಿದ್ದರಂತೆ. ಆದರೆ ಬಾಗಿಲು ತೆರೆದು ಕಂಡಾಗ ಯಾರಪ್ಪಾ ಈ ಬಾಲಕ? ಎಂದು ಹೇಳಿಕೊಂಡಿದ್ದರಂತೆ. ಇದನ್ನು ಕೇಳಿದಾಗ ಸೆಟ್​ನಲ್ಲಿದ್ದವರೆಲ್ಲಾ ಮನಸಾರೆ ನಕ್ಕಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: 'ನಾನೆಂದಿಗೂ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿಲ್ಲ': ಕಂಗನಾ ರಣಾವತ್​ ಹೀಗಂದಿದ್ದೇಕೆ?!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.