ಭಾರತೀಯ ಚಿತ್ರರಂಗ ದಿನೇ ದಿನೆ ಹೊಸತನವನ್ನು ಕಾಣುತ್ತಿದೆ. ಮನರಂಜನಾ ಉದ್ಯಮಕ್ಕೆ ಹೊಸಬರ ಕೊಡುಗೆಯೂ ಸಾಕಷ್ಟಿದೆ. 2023ರಲ್ಲಿ ಹೊಸ ಪ್ರತಿಭೆಗಳು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಯಾ ನಟ ನಟಿಯರ ಎಂಟ್ರಿಯಾಗಿದ್ದು, ಪ್ರೇಕ್ಷಕರು ಹೊಸಬರನ್ನು ಸ್ವಾಗತಿಸಿದ್ದಾರೆ.
- " class="align-text-top noRightClick twitterSection" data="">
ಸ್ಟಾರ್ ಕಿಡ್ಸ್ ಸುಹಾನಾ ಖಾನ್, ಖುಷಿ ಕಪೂರ್, ಅಗಸ್ತ್ಯ ನಂದಾ, ರಾಜ್‌ವೀರ್ ಡಿಯೋಲ್, ಪಲೋಮಾ ಧಿಲ್ಲೋನ್, ಪಲಕ್ ತಿವಾರಿ ಮತ್ತು ಅಲಿಜೆ ಅಗ್ನಿಹೋತ್ರಿ 2023ರಲ್ಲಿ ತಮ್ಮ ಸಿನಿಮೀಯ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಬಾಲಿವುಡ್ನ ದಿಗ್ಗಜರ ಮಕ್ಕಳು ಮೊಮ್ಮಕ್ಕಳ ಸಿನಿಮಾ ಈಗಾಗಲೇ ತೆರೆಕಂಡಿದ್ದು, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದಾರೆ.
- " class="align-text-top noRightClick twitterSection" data="">
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಚಿತ್ರರಂಗ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ಬಹಳ ಸಮಯದಿಂದಲೇ ಇತ್ತು. ಅದೇ ರೀತಿ, ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ಕಿರಿಪುತ್ರಿ ಖುಷಿ ಕಪೂರ್ ಮತ್ತು ಹಿರಿಯ ನಟ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಸೇರಿ ಈ ಮೂವರು ದಿ ಆರ್ಚೀಸ್ ಮೂಲಕ ವೃತ್ತಿಜೀವನ ಆರಂಭಿಸಿದ್ದಾರೆ. ಮತ್ತೊಂದೆಡೆ, ಗದರ್ 2 ಮೂಲಕ ಸಖತ್ ಸದ್ದು ಮಾಡಿರುವ ಸನ್ನಿ ಡಿಯೋಲ್ ಅವರ ಕಿರಿಯ ಮಗ ರಾಜ್‌ವೀರ್ ಡಿಯೋಲ್ 'ಡೊನೋ' ಎಂಬ ರೊಮ್ಯಾಂಟಿಕ್ ಸಿನಿಮಾದೊಂದಿಗೆ ನಟನೆ ಪ್ರಾರಂಭಿಸಿದ್ದಾರೆ. ಈ ಚಿತ್ರದಲ್ಲಿ ನಟಿ ಪೂನಂ ಧಿಲ್ಲೋನ್ ಅವರ ಪುತ್ರಿ ಪಲೋಮಾ ಧಿಲ್ಲೋನ್ ಕೂಡ ನಟಿಸಿದ್ದಾರೆ.
ಅಷ್ಟೇ ಅಲ್ಲದೇ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಂಬಂಧಿ ಅಲಿಜೆ ಅಗ್ನಿಹೋತ್ರಿ 'ಫರೆ' ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದ್ದಾರೆ. ನಟಿ ಶ್ವೇತಾ ತಿವಾರಿ ಪುತ್ರಿ ಪಲಕ್ ತಿವಾರಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'ನಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ್ದಾರೆ. ತಮ್ಮ ಚೊಚ್ಚಲ ಚಿತ್ರದೊಂದಿಗೆ ಈ ಸ್ಟಾರ್ ಕಿಡ್ಸ್ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ವೀಕ್ಷಕರೊಂದಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಾಪರಾಜಿ ಕಲ್ಚರ್, ಸೋಷಿಯಲ್ ಮೀಡಿಯಾ ಬಳಕೆ ಮೂಲಕ ಸದ್ದು ಮಾಡುತ್ತಿದ್ದಾರೆ.
- " class="align-text-top noRightClick twitterSection" data="">
ಸುಹಾನಾ ಖಾನ್: ಡಿಸೆಂಬರ್ 7 ರಂದು ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದೆ. ನಟ ಶಾರುಖ್ ಖಾನ್ ಮತ್ತು ಇಂಟೀರಿಯರ್ ಡಿಸೈನರ್ - ನಿರ್ಮಾಪಕಿ ಗೌರಿ ಖಾನ್ ಪುತ್ರಿ ಸುಹಾನಾ ಖಾನ್ ಈ ಚಿತ್ರದ ಮೂಲಕ ನಟನೆ ಪ್ರಾರಂಭಿಸಿದ್ದಾರೆ. ಈ ಚಿತ್ರ ವಿಮರ್ಶಕರಿಂದ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ವೆರೋನಿಕಾ ಪಾತ್ರದಲ್ಲಿ ಸುಹಾನಾ ಖಾನ್ ಕಾಣಿಸಿಕೊಂಡಿದ್ದಾರೆ.
ಖುಷಿ ಕಪೂರ್: ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ಕಿರಿಪುತ್ರಿ, ಜಾಹ್ನವಿ ಕಪೂರ್ ಸಹೋದರಿ ಖುಷಿ ಕಪೂರ್ ಕೂಡ ಇದೇ ದಿ ಆರ್ಚೀಸ್ ಸಿನಿಮಾ ಮೂಲಕ ನಟನೆ ಪ್ರಾರಂಭಿಸಿದ್ದಾರೆ. ಪ್ರೇಕ್ಷಕರ ಪ್ರಕಾರ, ಖುಷಿ ಕಪೂರ್ ತಮ್ಮ ಚೊಚ್ಚಲ ಚಿತ್ರದಲ್ಲಿ ಜಾಹ್ನವಿ ಕಪೂರ್ಗಿಂತ ಹೆಚ್ಚು ಉತ್ತಮವಾಗಿ ನಟಿಸಿದ್ದಾರೆ. ಪಾತ್ರಕ್ಕೆ ಜೀವ ತುಂಬಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಅಗಸ್ತ್ಯ ನಂದಾ: ದಿ ಆರ್ಚೀಸ್ ಸಿನಿಮಾ ಮೂಲಕವೇ ಅಗಸ್ತ್ಯ ನಂದಾ ಅಭಿನಯ ಆರಂಭಿಸಿದ್ದಾರೆ. ಚೊಚ್ಚಲ ಚಿತ್ರದ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇವರು ಅಮಿತಾಭ್ ಬಚ್ಚನ್ ಮೊಮ್ಮಗ, ಶ್ವೇತಾ ಬಚ್ಚನ್ ಮತ್ತು ನಿಖಿಲ್ ನಂದಾ ಅವರ ಪುತ್ರ.
ಅಲಿಜೆ ಅಗ್ನಿಹೋತ್ರಿ: 2023ರಲ್ಲಿ ನಟನೆಗೆ ಬಂದ ಮತ್ತೋರ್ವ ಸ್ಟಾರ್ ಕಿಡ್ ಅಲಿಜೆ ಅಗ್ನಿಹೋತ್ರಿ. ಸೌಮೇಂದ್ರ ಪಾಧಿ ನಿರ್ದೇಶನದ ಫಾರೆ ಚಿತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಂಡರು. ಅಲಿಜೆ ಅಗ್ನಿಹೋತ್ರಿಯವರ ಸಲ್ಮಾನ್ ಖಾನ್ ಅವರ ಸೊಸೆ. ಹಾಗಾಗಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿತ್ತು. ನವೆಂಬರ್ 24ರಂದು ಸಿನಿಮಾ ಬಿಡುಗಡೆಯಾಗಿ, ಪ್ರೇಕ್ಷಕರ ಗಮನ ಸೆಳೆದಿದೆ.
- " class="align-text-top noRightClick twitterSection" data="">
ಇದನ್ನೂ ಓದಿ: Salaar Vs Dunki: ಅಡ್ವಾನ್ಸ್ ಟಿಕೆಟ್ ವ್ಯವಹಾರದಲ್ಲಿ ಭರ್ಜರಿ ಪೈಪೋಟಿ; ಯಾವ ಸಿನಿಮಾ ಮುಂದಿದೆ?
ರಾಜ್‌ವೀರ್ ಡಿಯೋಲ್: ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಕಿರಿ ಪುತ್ರ ರಾಜ್‌ವೀರ್ ಡಿಯೋಲ್ ಡೊನೋ ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದ್ದಾರೆ. ರಾಜ್‌ವೀರ್ ಈ ಚಿತ್ರದಲ್ಲಿ ದೇವ್ ಎಂಬ ಯುವ ಉದ್ಯಮಿ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಪಾತ್ರ ಮತ್ತು ಅಭಿನಯ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪಲೋಮಾ ಧಿಲ್ಲೋನ್: ಪೂನಂ ಧಿಲ್ಲೋನ್ ಪುತ್ರಿ ಪಲೋಮಾ ಧಿಲ್ಲೋನ್ ಅವರು ರಾಜ್‌ವೀರ್ ಡಿಯೋಲ್ ಅವರೊಂದಿಗೆ ಡೋನೋ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅವ್ನಿಶ್ ಬರ್ಜತ್ಯಾ ಅವರ ಚೊಚ್ಚಲ ಚಿತ್ರದಲ್ಲಿ ಮೇಘನಾ ಎಂಬ ಪಾತ್ರವನ್ನು ಪಲೋಮಾ ನಿರ್ವಹಿಸಿದ್ದಾರೆ. ಇವರ ಪಾತ್ರ, ಜೀವನ ಶೈಲಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಹೆಚ್ಚಾಯ್ತು 'ಸಲಾರ್' ಫೀವರ್: ಮಧ್ಯರಾತ್ರಿಯು ಶೋ , ಟಿಕೆಟ್ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ತೆಲಂಗಾಣ ಸರ್ಕಾರ
ಪಲಕ್ ತಿವಾರಿ: ನಟಿ ಶ್ವೇತಾ ತಿವಾರಿ ಪುತ್ರಿ ಪಲಕ್ ತಿವಾರಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಂಡರು. ಸಲ್ಮಾನ್ ಖಾನ್ ಜೊತೆಗೆ ನಟಿಸಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಅವರು ಈ ಹಿಂದೆ ಹಾರ್ಡಿ ಸಂಧು ಅವರ ಬಿಜ್ಲೀ ಬಿಜ್ಲೀ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.