ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ‘ಕಾಂತಾರ’ ಚಿತ್ರದ ಬಗ್ಗೆ ಮಗದೊಮ್ಮೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಕಡಿಮೆ ಬಜೆಟ್ ಚಿತ್ರಗಳು ಸಹ ಭರ್ಜರಿ ಕಲೆಕ್ಷನ್ ಮಾಡುತ್ತವೆ ಎಂಬುದನ್ನು ‘ಕಾಂತಾರ’ ಸಾಬೀತು ಮಾಡಿದೆ. ನಮ್ಮಂತಹ ನಿರ್ದೇಶಕರು ಮರುಚಿಂತನೆ ಮಾಡಬೇಕು ಎಂದು ಚಿತ್ರದ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇಂದಿನ ಸಿನಿಮಾಗಳ ಕುರಿತು ಕಾರ್ಯಕ್ರಮವೊಂದರದಲ್ಲಿ ಮಾತನಾಡುತ್ತ, ಬಿಗ್ ಬಜೆಟ್ ಚಿತ್ರಗಳು ಯಾವಾಗಲೂ ಸ್ಪೆಷಲ್. ಆದರೆ, ಹೆಚ್ಚು ಹಣ ಗಳಿಸಲು ಬಿಗ್ ಬಜೆಟ್ ಸಿನಿಮಾಗಳನ್ನೇ ಮಾಡಬೇಕಿಲ್ಲ ಅನ್ನೋದನ್ನು ಕಾಂತಾರ ಚಿತ್ರ ಹೇಳಿಕೊಟ್ಟಿದೆ. ಚಿತ್ರದ ಮ್ಯಾಜಿಕ್ ನಮ್ಮನ್ನು ಮರುಚಿಂತನೆಗೆ ಒಳಪಡಿಸಿದೆ ಎಂದಿದ್ದಾರೆ.
ಹಣ ಸುರಿದು ಸಿನಿಮಾ ಮಾಡುವ ದುಬಾರಿ ನಿರ್ಮಾಪಕರ ಮೇಲೆ ಈ ಚಿತ್ರ ಸಾಕಷ್ಟು ಪರಿಣಾಮ ಬೀರಿದೆ. ಪ್ರೇಕ್ಷಕರ ವಿಷಯದಲ್ಲಿಯೂ ಇದು ರೋಮಾಂಚನಕಾರಿ. ಈ ಚಿತ್ರದಿಂದ ಕಲಿಯುವುದು ಸಾಕಷ್ಟಿದೆ. ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಮನನ ಮಾಡಿಕೊಳ್ಳಬೇಕು. ಇಂತಹ ಚಿತ್ರಗಳಿಂದ ನಮ್ಮ ದೃಷ್ಟಿಕೋನ ಬದಲಾಗಬೇಕು ಎಂದಿದ್ದಾರೆ.
ಕೇವಲ ರೂ.16 ಕೋಟಿಯಲ್ಲಿ ನಿರ್ಮಾಣಗೊಂಡ ಕಾಂತಾರ ವಿಶ್ವದಾದ್ಯಂತ ರೂ. 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿಕ್ಕ ಬಜೆಟ್ನ ಚಿತ್ರವೊಂದು ಈ ಪ್ರಮಾಣದ ಹಣ ಗಳಿಕೆ ಮಾಡಿದ್ದು ಇದೇ ಮೊದಲು.
ಇದನ್ನೂ ಓದಿ: "ನಾನು ಅವರನ್ನು ಪ್ರೀತಿಸುತ್ತೇನೆ, ಉಳಿದದ್ದು ಅವರಿಗೆ ಬಿಟ್ಟದ್ದು": ಟೀಕೆಗೆ ರಶ್ಮಿಕಾ ರಿಯಾಕ್ಷನ್