ಹಿಂದಿ ಚಿತ್ರರಂಗದಲ್ಲಿ ಮೂರು ದಶಕಕ್ಕೂ ಹೆಚ್ಚು ಸಮಯದಿಂದ ಗುರುತಿಸಿಕೊಂಡಿರುವ ನಟ ಶಾರುಖ್ ಖಾನ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಜವಾನ್. ಇನ್ನೊಂದು ವಾರದಲ್ಲಿ ಸಿನಿಮಾ ತೆರೆಗಪ್ಪಳಿಸಲಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಗುರುವಾರ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.
ಬುರ್ಜ್ ಖಲೀಫಾದಲ್ಲಿ ಜವಾನ್ ಟ್ರೇಲರ್ ಪ್ರದರ್ಶನ: ಬಾಲಿವುಡ್ ಬಾದ್ ಶಾ SRK ಗುರುವಾರ ಮೂರು ನಿಮಿಷಗಳ ವಿಡಿಯೋ ಅನಾವರಣಗೊಳಿಸಿದ್ದಾರೆ. ಹಿಂದೆಂದೂ ನೋಡಿರದಂತಹ ಅವತಾರದಲ್ಲಿ ಕಿಂಗ್ ಖಾನ್ ಕಾಣಿಸಿಕೊಂಡಿದ್ದಾರೆ. ಜವಾನ್ ಟ್ರೇಲರ್ನ ಕಾಯುವಿಕೆ ಕೊನೆಗೊಂಡಿದೆ. ಚೆನ್ನೈನಲ್ಲಿ ಅಪಾರ ಪ್ರೀತಿ ಗಳಿಸಿದ ನಟ ತಮ್ಮ ಮುಂದಿನ ಬಹು ನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ದುಬೈನ ಬುರ್ಜ್ ಖಲೀಫಾದಲ್ಲಿಯೂ ಅನಾವರಣಗೊಳಿಸಿದ್ದಾರೆ. ಚೆನ್ನೈನಲ್ಲಿ ಸಿನಿಮಾದ ಪ್ರಮೋಶನಲ್ ಈವೆಂಟ್ ಬಹಳ ಅದ್ಧೂರಿಯಾಗಿ ನಡೆದಿತ್ತು. ಇದೀಗ ಬುರ್ಜ್ ಖಲೀಫಾ ಸದ್ದು ಮಾಡಿದ್ದಾರೆ.
-
King Khan talking about Jawan
— Shah Rukh Khan Universe Fan Club (@SRKUniverse) August 31, 2023 " class="align-text-top noRightClick twitterSection" data="
Jawan has the aspects for all the people!✨🔥
Watch it with family, everyone will love one or other aspects of the movie ✨❤️@iamsrk @RedChilliesEnt @Atlee_dir @yrf @SRKUniverseUAE #Jawan #JawanTrailer #JawanCelebrationAtBurjKhalifa… pic.twitter.com/AwW6hicSrH
">King Khan talking about Jawan
— Shah Rukh Khan Universe Fan Club (@SRKUniverse) August 31, 2023
Jawan has the aspects for all the people!✨🔥
Watch it with family, everyone will love one or other aspects of the movie ✨❤️@iamsrk @RedChilliesEnt @Atlee_dir @yrf @SRKUniverseUAE #Jawan #JawanTrailer #JawanCelebrationAtBurjKhalifa… pic.twitter.com/AwW6hicSrHKing Khan talking about Jawan
— Shah Rukh Khan Universe Fan Club (@SRKUniverse) August 31, 2023
Jawan has the aspects for all the people!✨🔥
Watch it with family, everyone will love one or other aspects of the movie ✨❤️@iamsrk @RedChilliesEnt @Atlee_dir @yrf @SRKUniverseUAE #Jawan #JawanTrailer #JawanCelebrationAtBurjKhalifa… pic.twitter.com/AwW6hicSrH
ಈವೆಂಟ್ನಲ್ಲಿ ಜನಪ್ರಿಯ ನಟ ಜಿಂದಾ ಬಂದಾ ಹಾಡಿಗೆ ಮೈ ಕುಣಿಸಿದ್ದಾರೆ. ಗ್ರ್ಯಾಂಡ್ ಈವೆಂಟ್ನಲ್ಲಿ ಸೂಪರ್ ಹಿಟ್ ಚಲೇಯಾ ಹಾಡಿನ ಅತರೇಬಿಕ್ ವರ್ಷನ್ ಅನ್ನೂ ಕೂಡ ಅನಾವರಣಗೊಳಿಸಿದರು. ಬಳಿಕ ಅಭಿಮಾನಿಗಳೊಂದಿಗೆ ಪ್ರೀತಿಯ ಮಾತುಕತೆ ನಡೆಸಿದರು. ಎಂದಿನಂತೆ ಅಭಿಮಾನಿಳೆದರು ತಮ್ಮ ಐಕಾನಿಕ್ ಪೋಸ್ ಕೂಡ ನೀಡಿದರು, ತಮ್ಮ ಮುಂದಿನ ಈ ಚಿತ್ರದಲ್ಲಿ ನೀವು ಬಯಸುವಂತಹ ಎಲ್ಲ ಅಂಶಗಳಿರಲಿದೆ ಎಂದು ಕೂಡ ತಿಳಿಸಿದರು.
57ರ ಹರೆಯದ ನಟನ ಎನರ್ಜಿ ಯುವಕರಿಗೆ ಸ್ಫೂರ್ತಿ ಕೊಡುವಂತಿತ್ತು. ಸಿನಿಮಾದಲ್ಲಿ ಸುಮಾರು ಏಳಕ್ಕೂ ಹೆಚ್ಚು ವಿಭಿನ್ನ ನೋಟದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂಬುದಾಗಿಯೂ ಎಸ್ಆರ್ಕೆ ತಿಳಿಸಿದ್ದಾರೆ. ಬೋಳು ತಲೆಯಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲು ಮತ್ತು ಕೊನೆ ಎಂಬುದಾಗಿಯೂ ತಿಳಿಸಿದ್ದಾರೆ. ತಮ್ಮ ಬೋಳು ತಲೆಯ ಅವತಾರಕ್ಕಾಗಿ ಸಿನಿಮಾ ವೀಕ್ಷಿಸಲು ಅಭಿಮಾನಿಗಳೊಂದಿಗೆ ಕೇಳಿಕೊಂಡರು.
ಇದನ್ನೂ ಓದಿ: 'ಜವಾನ್' ಟ್ರೇಲರ್ ರಿಲೀಸ್: ಮತ್ತೊಂದು ಹಿಟ್ ಸಿನಿಮಾ ನಿರೀಕ್ಷೆಯಲ್ಲಿ ಶಾರುಖ್ ಅಭಿಮಾನಿಗಳು
''ನಾನು ಈಗಾಗಲೇ ಬೋಳಾಗಿದ್ದೇನೆ. ಹಾಗಾಗಿ ನನ್ನ ಜೀವನದಲ್ಲಿ ಇನ್ನೆಂದಿಗೂ ಬೋಳಾಗುವುದಿಲ್ಲ. ಇದೇ ಮೊದಲು ಮತ್ತು ಕೊನೆ. ನಾನು ನಿಮಗಾಗಿ ಬೋಳಾಗಿದ್ದೇನೆ. ಇದಕ್ಕಾಗಿ ಆದರೂ ಹೋಗಿ ಸಿನಿಮಾ ನೋಡಿ. ಯಾರಿಗೆ ಗೊತ್ತು, ನನ್ನ ಬೋಳು ಅವತಾರ ನೋಡುವ ಅವಕಾಶ ಮತ್ತೆ ಸಿಗುತ್ತೋ ಇಲ್ಲವೋ'' - ನಟ ಶಾರುಖ್ ಖಾನ್.
ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್ ದಿನಚರಿ.. ರಾಷ್ಟ್ರಪ್ರಶಸ್ತಿ ವಿಜೇತ ನಟನ ಮನೆ, ಪುಷ್ಪ ಸೆಟ್ ಹೇಗಿದೆ ನೋಡಿ..
ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ವಿಶ್ವಾದ್ಯಂತ ಸೆಪ್ಟೆಂಬರ್ 7 ರಂದು ಬಿಡುಗಡೆ ಆಗಲಿದೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಲಭ್ಯವಾಗಲಿದೆ. ಸಿನಿಮಾ ವೀಕ್ಷಣೆಗೆ ನೀವಿನ್ನು ಹೆಚ್ಚು ಕಾಯಬೇಕಿಲ್ಲ.