ETV Bharat / entertainment

SPY Movie: ಬಹುನಿರೀಕ್ಷಿತ 'ಸ್ಪೈ' ಚಿತ್ರ ತೆರೆಗೆ; ಪ್ರೇಕ್ಷಕರಿಂದ ಪಾಸಿಟಿವ್​ ಟಾಕ್

ಇಂದು ಸ್ಪೈ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ.

spy
ಸ್ಪೈ
author img

By

Published : Jun 29, 2023, 5:25 PM IST

ಟಾಲಿವುಡ್​ ಚಿತ್ರರಂಗದ ನಿಖಿಲ್​ ಸಿದ್ದಾರ್ಥ್​ ನಟನೆಯ ಬಹುನಿರೀಕ್ಷಿತ ಸಿನಿಮಾ 'ಸ್ಪೈ' ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಸಿನಿಮಾವನ್ನು ನಿರ್ದೇಶಕ ಹಾಗೂ ಸಂಕಲನಕಾರ ಗ್ಯಾರಿ ಬಿ.ಹೆಚ್. ನಿರ್ದೇಶನ ಮಾಡಿದ್ದಾರೆ. ಹಲವು ಹಿಟ್ ಸಿನಿಮಾಗಳ ನಿರ್ಮಾಪಕ ಕೆ. ರಾಜಶೇಖರ್ ರೆಡ್ಡಿ ಅವರು ಇಡೀ ಎಂಟರ್‌ಟೈನ್‌ಮೆಂಟ್‌ನಡಿ ಚರಣ್ ರಾಜ್ ಉಪ್ಪಲಪತಿ ಜೊತೆಗೂಡಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

  • #SPY A Routine Spy Film that had a few good moments but the rest falters!

    Bose sequence in the 2nd half came out well along with a few other moments. However, nothing else really works. It runs on a flat pace and is routine to the core for the most part.

    Rating: 2.5/5 #SPYMovie

    — Venky Reviews (@venkyreviews) June 28, 2023 " class="align-text-top noRightClick twitterSection" data=" ">

ಭಾರತದ ಟಾಪ್ ಸೀಕ್ರೆಟ್, ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಸಾವನ್ನಪ್ಪಿದ್ದಾರೆ ಎನ್ನಲಾದ ವಿಚಾರಗಳನ್ನು ಬೆನ್ನತ್ತುವ ಗೂಢಾಚಾರಿ ಪಾತ್ರದಲ್ಲಿ ನಿಖಿಲ್ ಸಿದ್ದಾರ್ಥ್ ಅಭಿನಯಿಸಿದ್ದಾರೆ. ಐಶ್ವರ್ಯ ಮೆನನ್ ನಾಯಕಿಯಾಗಿ, ಸನ್ಯಾ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಹುಬಲಿ ಬಲ್ಲಾಳದೇವ ಪಾತ್ರಧಾರಿ ರಾಣಾ ದಗ್ಗುಬಾಟಿ ಕೂಡ ಕಾಣಿಸಿಕೊಂಡಿದ್ದಾರೆ.

ಪ್ರೇಕ್ಷಕರಿಂದ ಪಾಸಿಟಿವ್​ ಟಾಕ್​: ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾದ ಸ್ಪೈ ಚಿತ್ರ ಪ್ರಸ್ತುತ ಪಾಸಿಟಿವ್ ಟಾಕ್ ಪಡೆಯುತ್ತಿದೆ. ಅದರಲ್ಲೂ ಈ ಸಿನಿಮಾದ ಸ್ಟೋರಿ ಲೈನ್ ಚೆನ್ನಾಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಇಲ್ಲಿಯವರೆಗೆ ತೆರೆ ಕಾಣದ ವಿಭಿನ್ನ ವಿಷಯವನ್ನು ನಿರ್ದೇಶಕರು ಚಿತ್ರೀಕರಿಸಿರುವ ರೀತಿ ಚೆನ್ನಾಗಿದೆ ಎಂಬ ಪ್ರಶಂಸೆ ವ್ಯಕ್ತವಾಗುತ್ತಿದೆ.

ನೇತಾಜಿ ಅವರ ಸುತ್ತ ನಡೆಯುವ ಕಥೆ ಕುತೂಹಲಕರವಾಗಿದ್ದು, ಕಾಲಕಾಲಕ್ಕೆ ಪ್ರೇಕ್ಷಕರಲ್ಲಿ ಸಸ್ಪೆನ್ಸ್ ಹೆಚ್ಚಿಸುತ್ತಿದೆ. ಆದರೆ ಅವರಿಗೆ ತಕ್ಕಂತೆ ಸಾಹಸ ದೃಶ್ಯಗಳ ಗುಣಮಟ್ಟ ಹೆಚ್ಚಿಸಿದ್ದರೆ ಚೆನ್ನಾಗಿತ್ತು ಎಂಬುದು ಕೆಲವರ ಅಭಿಪ್ರಾಯ. ರಾ ಏಜೆಂಟ್ ಆಗಿ ನಿಖಿಲ್ ಅವರ ಆ್ಯಕ್ಷನ್ ಅದ್ಭುತವಾಗಿದೆ. ಜೊತೆಗೆ ಸಾಹಸ ದೃಶ್ಯಗಳೂ ಚೆನ್ನಾಗಿವೆ. ಸಿನಿಮಾಟೋಗ್ರಫಿ ಹಾಗೂ ನಿರ್ದೇಶನದ ಬಗ್ಗೆಯೂ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ.

  • Nikhil looks the part but his expressions are stunted. The rest of the cast is really overacting, from running to speaking. Sri Lanka fight and interval twist queue some interest but it really needs a big second half. #SPY #SpyMovie

    — Sai_Reviews (@saisaysmovies) June 28, 2023 " class="align-text-top noRightClick twitterSection" data=" ">

ಹಿನ್ನೆಲೆ ಸಂಗೀತ ಸಿನಿಮಾದ ಹೈಲೈಟ್: ಚಿತ್ರದಲ್ಲಿ ನಿಖಿಲ್ ಪಾತ್ರದ ಪ್ರಾಮುಖ್ಯತೆಯಿಂದಾಗಿ ಉಳಿದ ನಟರಿಗೆ ಹೆಚ್ಚಿನ ಸ್ಕೋಪ್ ಇಲ್ಲ ಎನ್ನಲಾಗಿದೆ. ನಿಖಿಲ್ ಮತ್ತು ಅವರ ಸಹನಟರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ನೀಡಿದ್ದರೆ ಉತ್ತಮವಾಗಿರುತ್ತಿತ್ತು ಎನ್ನುತ್ತಿದ್ದಾರೆ. ಇನ್ನೊಂದೆಡೆ ಸಂಗೀತವೂ ಈ ಸಿನಿಮಾಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಅದರಲ್ಲೂ ಹಿನ್ನೆಲೆ ಸಂಗೀತ ಸಿನಿಮಾದ ಹೈಲೈಟ್ ಅಂತಲೇ ಹೇಳಬಹುದು.

ಇದನ್ನೂ ಓದಿ: Oscar Members: ರಾಮ್ ಚರಣ್, ಜೂ. ಎನ್​ಟಿಆರ್​ ಸೇರಿ ಹಲವು ಭಾರತೀಯರಿಗೆ ಸಿಕ್ತು ಆಸ್ಕರ್​ ಸದಸ್ಯತ್ವ

ಸಿನಿಮಾಗೆ ರಾಜಶೇಖರ್ ರೆಡ್ಡಿ ಅವರೇ ಕಥೆ ಕೂಡ ಬರೆದಿದ್ದಾರೆ. ಬಿ. ಹೆಚ್. ನಿರ್ದೇಶನದ ಜೊತೆಗೆ ಸಂಕಲನದ ಹೊಣೆ ಹೊತ್ತಿದ್ದಾರೆ. ಆ್ಯಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ‌ ನಿಖಿಲ್‌ ಅಲ್ಲದೇ ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಸೇರಿದಂತೆ ಹಲವರಿದ್ದಾರೆ. ಜೂನಿಯನ್ ಅಮರು ಸೂರಿಸೆಟ್ಟಿ ಛಾಯಾಗ್ರಹಣ, ಶ್ರೀಚರಣ್ ಪಕಳ ಸಂಗೀತ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನವಿದೆ.

ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕನಾಗಿ ಗುರುತಿಸಿಕೊಂಡ ನೇತಾಜಿ ಸುಭಾಷ್‌ ಚಂದ್ರಬೋಸ್‌ 1945ರ ಆಗಸ್ಟ್‌ 18ರಂದು ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಜಪಾನ್‌ ಸರ್ಕಾರ ಬಿಡುಗಡೆ ಮಾಡಿರುವ ವರದಿ ತಿಳಿಸಿತ್ತು. ಆದರೆ, ಸಾವಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. 'ಸ್ಪೈ' ಸಿನಿಮಾ ಅವರ ನಿಧನದ ಕುರಿತ ಕಥೆಯಾಗಿದೆ.

ಇದನ್ನೂ ಓದಿ: Kaun Banega Crorepati: ಮತ್ತೆ ಬಂತು ಕೌನ್ ಬನೇಗಾ ಕರೋಡ್ಪತಿ! ಸೀಸನ್​ 15 ಶೀಘ್ರದಲ್ಲೇ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.