ETV Bharat / entertainment

ದಿ ಆರ್ಚೀಸ್​ ಪ್ರೀಮಿಯರ್​ ಶೋನಲ್ಲಿ ಅಮ್ಮನ ಗೌನ್​ ತೊಟ್ಟು ಗಮನ ಸೆಳೆದ ಖುಷಿ ಕಪೂರ್​​ - ಖುಷಿ ಕಪೂರ್​ ಅಭಿಯನದ ಮೊದಲ ಸಿನಿಮಾ

ಅಮ್ಮ ಶ್ರೀದೇವಿ ದಶಕದ ಹಿಂದೆ ತೊಟ್ಟ ಗೌನ್​ ಅನ್ನು ಇದೀಗ ಖುಷಿ ಕಪೂರ್​ ಧರಿಸಿ ಗಮನ ಸೆಳೆದಿದ್ದಾರೆ.

special-dress-from-moms-closet-khushi-kapoor-wears-sridevis-vinatge-gown-at-the-archies-premiere

author img

By ETV Bharat Karnataka Team

Published : Dec 6, 2023, 11:35 AM IST

ಹೈದರಾಬಾದ್​: ದಿವಂಗತ ನಟಿ ಶ್ರೀದೇವಿಯ ಎರಡನೇ ಮಗಳು ಕೂಡ ಇದೀಗ ಬಾಲಿವುಡ್​ ಪ್ರವೇಶಕ್ಕೆ ಸಜ್ಜಾಗಿದ್ದು, ಖುಷಿ ಕಪೂರ್​ ಅಭಿಯನದ ಮೊದಲ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ದಿ ಆರ್ಚೀಸ್​ನಲ್ಲಿ ಮೊದಲ ಬಾರಿಗೆ ನಟಿಸಿರುವ ನಟಿ ಖುಷಿ ಕಪೂರ್​, ಪ್ರಿಮೀಯರ್​ ಶೋಗೆ ಆಗಮಿಸಿದ್ದ ವೇಳೆ ತೊಟ್ಟ ದಿರಿಸು ಇದೀಗ ಎಲ್ಲರ ಗಮನ ಸೆಳೆದಿದೆ. ಕಾರಣ, ಆಕೆ ತೊಟ್ಟಿದ್ದು, ತನ್ನ ಅಮ್ಮ ಶ್ರೀದೇವಿಯ ಗೌನ್​. ಶ್ರೀ ದೇವಿ ಈ ಹಿಂದೆ ತೊಟ್ಟಿದ್ದ ಗೋಲ್ಡನ್​ ಗೌನ್​ ಅನ್ನೇ ಹಾಕಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದಾಳೆ ಖುಷಿ ಕಪೂರ್​. ಈ ಮೂಲಕ ಭಾವನಾತ್ಮಕವಾಗಿ ಅಮ್ಮನನ್ನು ತನ್ನ ಹೊಸ ಆರಂಭದಲ್ಲಿ ಸ್ಮರಿಸಿದ್ದಾಳೆ.

ಶ್ರೀದೇವಿ ದಶಕದ ಹಿಂದೆ ತೊಟ್ಟಿದ್ದ ಗೌನ್
ಶ್ರೀದೇವಿ ದಶಕದ ಹಿಂದೆ ತೊಟ್ಟಿದ್ದ ಗೌನ್

ಇದೇ ಡಿಸೆಂಬರ್​ 7ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗುತ್ತಿರುವ ವೆಬ್​ ಸೀರೀಸ್​ ಆರ್ಚೀಸ್​ನಲ್ಲಿ ಬಾಲಿವುಡ್​ ನಟ - ನಟಿಯರ ಮಕ್ಕಳು ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಚಿತ್ರದ ಪ್ರೀಮಿಯರ್​ ಶೋ ಮಂಗಳವಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಖುಷಿ ಕಪೂರ್​ ತನ್ನ ತಾಯಿ ಶ್ರೀದೇವಿಯ ಪ್ರಸಿದ್ಧ ಕೌಫ್ಮನ್ ಫ್ರಾಂಕೋ ಗೌನ್ ತೊಟ್ಟು ಎಲ್ಲರನ್ನು ಬೆರಗಾಗಿಸಿದರು. ಇದಕ್ಕೆ ಒಪ್ಪುವಂತೆ ಶ್ರೀದೇವಿಯ ಕಿವಿ ಓಲೆ ಮತ್ತು ನೆಕ್ಲೆಸ್​ ಅನ್ನು ತೊಟ್ಟು ಖುಷಿ ಕಪೂರ್​​ ಗಮನ ಸೆಳೆದಿದ್ದಾರೆ.

10 ವರ್ಷದ ಹಿಂದೆ ತೊಟ್ಟಿದ್ದ ಗೌನ್​: 2013ರಲ್ಲಿ ಶ್ರೀ ದೇವಿ ಐಐಎಫ್​ಎ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಧಿರಿಸನ್ನು ತೊಟ್ಟಿದ್ದರು. ಇನ್ನು ಖುಷಿ ತೊಟ್ಟ ಆಭರವಣ 2011ರ ಐಐಎಫ್​ಎ ಪ್ರಶಸ್ತಿಯಲ್ಲಿ ಶ್ರೀದೇವಿ ಹಾಕಿದ್ದರು. ಅಮ್ಮನ ಧಿರಿಸಿನಲ್ಲಿ ಮಗಳು ಮಿಂಚುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಒಂದೇ ಧಿರಿಸು ತೊಟ್ಟ ಫೋಟೋಗಳು ಹೋಲಿಕೆ ಮಾಡಿರುವ ಚಿತ್ರಗಳು ಹರಿದಾಡುತ್ತಿದೆ. ಅಷ್ಟೇ ಅಲ್ಲದೆ, ಖುಷಿಯ ಡ್ರೆಸ್​ ಡಿಸೈನರ್​​ ಪ್ರಿಯಾಂಕಾ ಕಪಾಡಿಯಾ ಕೂಡ ಈ ಚಿತ್ರವನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಇದಕ್ಕೆ ಅಡಿ ಬರಹ ಬರೆದಿರುವ ಪ್ರಿಯಾಂಕಾ, ವಿಶೇಷ ರಾತ್ರಿಯಲ್ಲಿ ಆಕೆಯ ತಾಯಿಯ ವಿಶೇಷ ಉಡುಪು ಎಂದು ತಿಳಿಸಿದ್ದಾರೆ.

ಈಗಾಗಲೇ ಬಾಲಿವುಡ್​ನಲ್ಲಿ ಸಿನಿಮಾದಲ್ಲಿ ಮಿಂಚುತ್ತಿರುವ ಖುಷಿ ಅಕ್ಕ ಜಾಹ್ನವಿ ಕಪೂರ್​ ಪ್ರೀಮಿಯರ್​ ಶೋಗೆ ತಂದೆ ಬೋನಿ ಕಪೂರ್​ ಜೊತೆಗೆ ಆಗಮಿಸಿದ್ದರು. ಪ್ರೀಮಿಯರ್​ ಶೋ ಸಂಪೂರ್ಣವಾಗಿ ಬಾಲಿವುಡ್​ ನಟ-ನಟಿಯರಿಂದ ತುಂಬಿ ಹೋಗಿತ್ತು. ಅಮಿತಾಬ್​ ಬಚ್ಚನ್ ​- ನಂದ ಕುಟುಂಬ ಮತ್ತು ಶಾರುಖ್​ ಖಾನ್​ ಕುಟುಂಬವೂ ಆಗಮಿಸಿತು. ಇದರ ಜೊತೆಗೆ ಕತ್ರಿನಾ ಕೈಫ್​​, ಜೂಹಿ ಚಾವ್ಲಾ, ಕರಣ್​ ಜೋಹರ್​ ಮತ್ತಿತ್ತರು ಆಗಮಿಸಿದ್ದರು.

ಜೋಯಾ ಅಖ್ತರ್​ ನಿರ್ದೇಶನದಲ್ಲಿ ದಿ ಆರ್ಚೀಸ್​ ಚಿತ್ರ ಮೂಡಿ ಬಂದಿದೆ. ಅಮೆರಿಕದ ಪ್ರಖ್ಯಾತ ಕಾಮಿಕ್​ ಬುಕ್​ ಆಧಾರಿತದ ಕಥೆಯ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ಬೆಟ್ಟಿ ಕೂಪರ್​​ ಪಾತ್ರದಲ್ಲಿ ಖುಷಿ ಕಪೂರ್​ ಕಾಣಿಸಿಕೊಂಡಿದ್ದರೆ, ಸುಹಾನಾ ಖಾನ್​ ವೆರೋನಿಕಾ ಪಾತ್ರದಲ್ಲಿ, ಆಗಸ್ತ್ಯ ನಂದ ಆರ್ಚೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಚಿತ್ರೀಕರಣ ಮುಕ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.