ETV Bharat / entertainment

ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಅಸ್ಥಿ ವಿಸರ್ಜನೆ - vijay raghavendra

Spandana death: ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಅಸ್ಥಿ ವಿಸರ್ಜನೆ ಕಾರ್ಯ ಇಂದು ಕಾವೇರಿ ನದಿಯಲ್ಲಿ ನೆರವೇರಿತು.

spandana death rituals took place in shrirangapattana
ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅಸ್ತಿ ವಿಸರ್ಜನೆ
author img

By

Published : Aug 11, 2023, 7:55 PM IST

ಸ್ಪಂದನಾ ಅಸ್ಥಿ ವಿಸರ್ಜನೆ

ಶ್ರೀರಂಗಪಟ್ಟಣ (ಮಂಡ್ಯ): ಚಲನಚಿತ್ರ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಸಂಸ್ಕಾರ ಆಗಸ್ಟ್ 9ರಂದು ಬೆಂಗಳೂರಿನಲ್ಲಿ ನಡೆದಿತ್ತು. ಇಂದು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗಿದೆ. ದೋಷ ನಿವಾರಣೆಗಾಗಿ ನಡೆದ ಹೋಮ-ಹವನ ವಿಧಿವಿಧಾನದಲ್ಲಿ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಸ್ಪಂದನಾ ವಿಜಯ್​ ರಾಘವೇಂದ್ರ ಅವರು ಇತ್ತೀಚೆಗೆ ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದರು. ಆ ಸಮಯದಲ್ಲಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಮೃತದೇಹವನ್ನು ಬೆಂಗಳೂರಿಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇಂದು ಅಸ್ಥಿಯನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಲು ವಿಜಯ್​ ರಾಘವೇಂದ್ರ ಅವರು ಕುಟುಂಬಸಮೇತರಾಗಿ ಆಗಮಿಸಿದ್ದರು.

ವಿಜಯ್​ ರಾಘವೇಂದ್ರ, ಪುತ್ರ ಶೌರ್ಯ, ಸಹೋದರ ಶ್ರೀಮುರುಳಿ, ಚಿನ್ನೇಗೌಡ, ಸ್ಪಂದನಾರ ತಂದೆ ಬಿ.ಕೆ.ಶಿವರಾಂ ಸೇರಿದಂತೆ ಕುಟುಂಬಸ್ಥರು ಇದ್ದರು. ಪುತ್ರ ಶೌರ್ಯ ಅವರಿಗೆ ಪೂಜೆಗೂ ಮುನ್ನ ಕೇಶ ಮುಂಡನ ಮಾಡಿಸಲಾಯಿತು. ವಿಜಯ್ ರಾಘವೇಂದ್ರ ಅವರು ಪಿಂಡ ಪ್ರದಾನ, ನಕ್ಷತ್ರ ಹೋಮ ಸೇರಿದಂತೆ ಶ್ರಾದ್ಧಾ ವಿಧಿ-ವಿಧಾನ ನೆರವೇರಿಸಿದ ಬಳಿಕ ಅಸ್ಥಿ ವಿಸರ್ಜಿಸಿದರು.

ಅರ್ಚಕ ರಮೇಶ್ ಶರ್ಮಾ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ದೋಷ ಪರಿಹಾರಕ್ಕಾಗಿ ಧನಿಷ್ಟ ಪಂಚಕ ನಕ್ಷತ್ರ ಹೋಮ, ಬೊಂಬೆಗೆ ಪ್ರೇತ ಆಹ್ವಾನ ಮಾಡಿಕೊಂಡು ಬಲಿ ಪ್ರದಾನ, ಅಸ್ಥಿಗೆ ಅಭಿಷೇಕ, ಷೋಡಶ ಪೂಜೆ ನಡೆಯಿತು. ಮನೆಯಿಂದ ಹೊರ ಸ್ಥಳದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ನಕ್ಷತ್ರ ಹೋಮ ಮಾಡಲಾಗಿದೆ. ಇಡೀ ಕುಟುಂಬ ದುಃಖದಲ್ಲಿ ಮುಳುಗಿದ್ದು, ನೆರೆದಿದ್ದವರ ಕಣ್ಣಂಚಿನಲ್ಲಿ ನೀರು ಜಿನುಗಿತ್ತು.

ಈ ಸುದ್ದಿಗಳನ್ನೂ ಓದಿ: Spandana funeral: ಪಂಚಭೂತಗಳಲ್ಲಿ ಸ್ಪಂದನಾ ಲೀನ; ಕಣ್ಣೀರಿನ ವಿದಾಯ ಹೇಳಿಕ ಪತಿ ವಿಜಯ್​ ರಾಘವೇಂದ್ರ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸೇರಿ ಗಣ್ಯರಿಂದ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.