ETV Bharat / entertainment

41ನೇ ವಸಂತಕ್ಕೆ ಕಾಲಿಟ್ಟ 'ಸ್ಟೈಲಿಶ್​ ಪುಷ್ಪರಾಜ್​'; ನಟ ಅಲ್ಲು ಅರ್ಜುನ್​ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ - ಪುಷ್ಪಾ

ಇಂದು ಟಾಲಿವುಡ್​ ನಟ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬವಾಗಿದ್ದು, ಅಭಿಮಾನಿಗಳು ತಮ್ಮ ಸೌತ್​ ಸ್ಟಾರ್​ಗೆ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ.

birthday
ನಟ ಅಲ್ಲು ಅರ್ಜುನ್​ ಹುಟ್ಟುಹಬ್ಬ
author img

By

Published : Apr 8, 2023, 3:18 PM IST

ಮುಂಬೈ: "ಪುಷ್ಪಾ, ಪುಷ್ಪಾ ರಾಜ್​ ಮೈನ್​ ಜುಕೇಗಾ ನಹಿ ಸಾಲಾ" ಎಂದೇ ಇಡೀ ಸೌತ್​ ಅಲ್ಲದೇ ಬಾಲಿವುಡ್​ ಸಿನಿಮಾ ರಂಗವನ್ನೇ ರೂಲ್​ ಮಾಡಿದ ಸೌತ್​ ಸ್ಟಾರ್ ಅಲ್ಲು ಅರ್ಜುನ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪುಷ್ಪಾ ಖ್ಯಾತಿಯ ಸೌತ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಅಭಿಮಾನಿಗಳ ಬಳಗ ಹೆಚ್ಚೇ ಇದೆ. ಇನ್ನು ಸ್ಟೈಲಿಶ್ ಸ್ಟಾರ್ ಬರ್ತ್​ಡೆಗೆ ನಿನ್ನೆ ರಾತ್ರಿಯಿಂದಲೇ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಕೌಂಟ್​ಡೌನ್​ ಶುರುಮಾಡಿದ್ದರು. ಮಧ್ಯರಾತ್ರಿಯಿಂದಲೇ ವಿಶ್​​ ಮಾಡಲು ಆರಂಭಿಸಿರುವ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಶುಭಾಶಯ ಕೋರುತ್ತಿದ್ದಾರೆ.

ಏಪ್ರಿಲ್ 8, 1982 ರಂದು ಚೆನ್ನೈನಲ್ಲಿ ಜನಿಸಿದ ಅಲ್ಲು ಅರ್ಜುನ್​ 2003 ರಲ್ಲಿ ತೆಲುಗಿನ ಗಂಗೋತ್ರಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ನಂತರ ಅಲ್ಲು ಹಿಂತಿರುಗಿ ನೋಡಿದ್ದೇ ಇಲ್ಲ. ಬ್ಯಾಕ್​ ಟು ಬ್ಯಾಕ್​ ಹಿಟ್​ ಮೂವಿಗಳನ್ನು ಕೊಡುತ್ತಲೇ ಬಂದರು. ತನ್ನ ಸ್ಟೈಲಿಶ್​ ಲುಕ್​ ಮತ್ತು ಅಭಿನಯದ ಮೂಲಕ ತನ್ನದೇ ವಿಶೇಷ ಅಭಿಮಾನಿಗಳ ಬಳಗವನ್ನು ಅಲ್ಲು ಅರ್ಜುನ್​ ಪಡೆದುಕೊಂಡರು.

ಇವರ ಅಭಿಮಾನಿಗಳು ಮತ್ತು ಇಡೀ ಚಿತ್ರರಂಗವೇ ಇವರನ್ನು ಅಲ್ಲು ಅರ್ಜುನ್, ಬನ್ನಿ, ಮಾಲು ಅರ್ಜುನ್, ಡ್ಯಾನ್ಸಿಂಗ್ ಡೈನಮೈಟ್, ಸ್ಟೈಲಿಶ್ ಸ್ಟಾರ್ ಸೇರಿದಂತೆ ಹಲವು ಪ್ರೀತಿಯ ಹೆಸರುಗಳಿಂದ ಕರೆಯುತ್ತಾರೆ. ಇನ್ನು, ಅಲ್ಲು ಅರ್ಜುನ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳಲ್ಲದೇ ಸಿನಿಮಾ ಕ್ಷೇತ್ರದ ನಟ-ನಟಿ ದಿಗ್ಗಜರ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಲ್ಲು ಅರ್ಜುನ್ ಅವರು 2011 ರಲ್ಲಿ ಸ್ನೇಹಾ ರೆಡ್ಡಿ ಅವರನ್ನು ವಿವಾಹವಾಗುವ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಚಿತ್ರರಂಗದಲ್ಲಿ 20 ವರ್ಷ ಪೂರೈಕೆ: 2003ರಲ್ಲಿ ತನ್ನ ಚೊಚ್ಚಲ ಸಿನಿಮಾದಿಂದ ಸಿನಿ ಪಯಣ ಆರಂಭಿಸಿದ ಅಲ್ಲು, ಈ ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿರಿಸಿ ಒಟ್ಟು 20 ವರ್ಷ ಪೂರೈಸಿದ್ದಾರೆ. ಇದನ್ನು ಸ್ವತಃ ಅಲ್ಲು ಅರ್ಜುನ್​ ಅವರೇ ಕಳೆದ ಒಂದು ವಾರದ ಹಿಂದೆ ತಮ್ಮ ಇನ್ಸ್ಟ್​ಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಧನ್ಯವಾದ ಸಂದೇಶದೊಂದಿಗೆ ಚಿತ್ರವನ್ನು ಪೋಸ್ಟ್ ಮಾಡುವಾಗ ಈ ಬಗ್ಗೆ ಬರೆದುಕೊಂಡ ಅಲ್ಲು, ' ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ್ದೇನೆ. ಉದ್ಯಮದ ಪ್ರೀತಿ ಮತ್ತು ಆಶೀರ್ವಾದಕ್ಕೆ ನಾನು ಕೃತಜ್ಞನಾಗಿದ್ದೇನೆ. ಇವತ್ತು ನಾನು ಏನಾಗಿದ್ದರೂ ಸಹ ನನ್ನ ಪ್ರೇಕ್ಷಕರು ಮತ್ತು ಅಭಿಮಾನಿಗಳ ಪ್ರೀತಿಯಿಂದ.. ಎಲ್ಲರಿಗೂ ನನ್ನ ಹೃದಯಾಳದಿಂದ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.

ಶೀಘ್ರದಲ್ಲೇ ಬರಲಿದೆ 'ಪುಷ್ಪ 2 ದಿ ರೂಲ್': ಪ್ಯಾನ್​ ಇಂಡಿಯಾ 'ಪುಷ್ಪ' 1 ಚಿತ್ರದ ಯಶಸ್ಸಿನ ನಂತರ, 'ಪುಷ್ಪ 2 ದಿ ರೂಲ್' ಚಿತ್ರೀಕರಣ ಕಂಪ್ಲೀಟ್​ ಆಗಿದ್ದು, ಹುಟ್ಟುಹಬ್ಬದ ಮುನ್ನಾ ದಿನವಾದ ಶುಕ್ರವಾರ ಅಲ್ಲು ಅರ್ಜುನ್ ಪುಷ್ಪಾ 2 ರ ಪೋಸ್ಟರ್ ಅನ್ನು ಹೊಸ ಲುಕ್‌ನಲ್ಲಿ ಬಿಡುಗಡೆ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ದಕ್ಷಿಣ ಭಾರತದ ಭಾಷೆಗಳಲ್ಲಿ ಹೆಚ್ಚಿನಿದಾಗಿ ನಟಿಸಿದ ಸ್ಟೈಲಿಶ್ ಸ್ಟಾರ್​ನ ಮುಂದಿನ ಪ್ರಾಜೆಕ್ಟ್​ಗಳು ಸಾಲಿನಲ್ಲಿವೆ. ಒಟ್ಟಾರೆ ಇವರ ಸಾಧನೆಗೆ 6 ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು 3 ನಂದಿ ಪ್ರಶಸ್ತಿಗಳು ಸೇರಿದಂತೆ ಇತರ ಅನೇಕ ಪ್ರಶಸ್ತಿಗಳನ್ನು ನೀಡಲಾಗಿದೆ.

ಶುಭಾಶಯ ಕೋರಿದ ಶ್ರೀವಲ್ಲಿ(ರಶ್ಮಿಕಾ ಮಂದಣ್ಣ): ಪುಷ್ಪಾ ಮೂವೀ ಮೂಲಕ ನಟ ಅಲ್ಲು ಅರ್ಜುನ್​ ಜೊತೆ ಸ್ಕ್ರೀನ್​ ಶೇರ್​ ಮಾಡಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ, ವಿಶೇಷವಾಗಿ ಅಲ್ಲು ಅರ್ಜುನ್​ ಅವರಿಗೆ ಶುಭಾಶಯ ಕೋರಿದ್ದಾರೆ. ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ' ನನ್ನ ಪುಷ್ಪರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಡೀ ಜಗತ್ತು ನಿಮ್ಮನ್ನು ಪುಷ್ಪಾ ಆಗಿ ಮತ್ತೆ ನೋಡಲು ಕಾಯುತ್ತಿದೆ. ಅಲ್ಲದೆ ಅವರು ನಿಮ್ಮನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. #ತಗ್ಗೆದೆಲೆ ಎಂದು ಬರೆದುಕೊಂಡಿದ್ದಾರೆ. ಪುಷ್ಪಾ ಚಿತ್ರ ಕೇವಲ ಅಲ್ಲು ಅರ್ಜುನ್​ಗೆ ಮಾತ್ರಅಲ್ಲದೇ ನಟಿ ರಶ್ಮಿಕಾ ಮಂದಣ್ಣ ಅವರಿಗೂ ದೊಡ್ಡ ಹಿಟ್​ ಕೊಟ್ಟಿದೆ. ದಿ ರೂಲ್​ ಅಲ್ಲಿಯೂ ನಟಿಯಾಗಿ ರಶ್ಮಿಕಾನೇ ಅಭಿನಯಿಸಿದ್ದು, ಈ ಮೂವಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: ಸ್ಟೈಲಿಶ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಟೀಸರ್​ ಜೊತೆ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​.. ಹೊಸ ಅವತಾರದಲ್ಲಿ ಅಲ್ಲು ಅರ್ಜುನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.