ETV Bharat / entertainment

ಸೌಂಡ್ಸ್ ಆಫ್ ಕಾಲಾಪತ್ಥರ್: ವಿಭಿನ್ನ ಪ್ರಯತ್ನಕ್ಕೆ 'ಕಾಲಾಪತ್ಥರ್' ಚಿತ್ರತಂಡ ಸಾಕ್ಷಿ.. 5 ಹಾಡುಗಳ ಮಿಶ್ರಣ ನೋಡಿ!

Sounds of Kaalapatthar: ಕಾಲಾಪತ್ಥರ್ ಚಿತ್ರತಂಡದಿಂದ, ಐದು ಹಾಡುಗಳನ್ನು ಸೇರಿಸಿ "ಸೌಂಡ್ಸ್ ಆಫ್ ಕಾಲಾಪತ್ಥರ್" ಎಂಬ ಹಾಡುಗಳ ಗುಚ್ಛವನ್ನು ಕೆಲವೇ ನಿಮಿಷಗಳಲ್ಲಿ ತೋರಿಸುವ ವಿಡಿಯೋ ಅನಾವರಣಗೊಂಡಿದೆ.

Kaalapatthar
ಕಾಲಾಪತ್ಥರ್
author img

By ETV Bharat Karnataka Team

Published : Sep 7, 2023, 6:24 PM IST

ಕೆಂಡಸಂಪಿಗೆ ಹಾಗೂ ಕಾಲೇಜ್​​ ಕುಮಾರ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವ ನಟ ವಿಕ್ಕಿ ವರಣ್. ಕಾಲೇಜ್ ಕುಮಾರ ಚಿತ್ರದ ಬಳಿಕ ವಿಕ್ಕಿ ವರಣ್ ಅವರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ 'ಕಾಲಾಪತ್ಥರ್'. ಹೌದು, ವಿಕ್ಕಿ ವರುಣ್ ನಿರ್ದೇಶನ ಮಾಡುವುದರ ಜೊತೆಗೆ ನಟಿಸಿರುವ ಮೊದಲ ಚಿತ್ರ ಕಾಲಾಪತ್ಥರ್. ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ.

  • " class="align-text-top noRightClick twitterSection" data="">

ಈ ಹಿನ್ನೆಲೆ, ಕಾಲಾಪತ್ಥರ್‌ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದ ಐದು ಹಾಡುಗಳನ್ನು ಸೇರಿಸಿ "ಸೌಂಡ್ಸ್ ಆಫ್ ಕಾಲಾಪತ್ಥರ್" ಎಂಬ ಹಾಡುಗಳ ಗುಚ್ಛವನ್ನು ಕೆಲವೇ ನಿಮಿಷಗಳಲ್ಲಿ ತೋರಿಸುವ ವಿಭಿನ್ನ ಪ್ರಯತ್ನಕ್ಕೆ ಕಾಲಾಪತ್ಥರ್ ಚಿತ್ರತಂಡ ಸಾಕ್ಷಿಯಾಯಿತು.

Kaalapatthar
ಕಾಲಾಪತ್ಥರ್ ಚಿತ್ರತಂಡ

ನಟ ಹಾಗೂ ನಿರ್ದೇಶಕ ವಿಕ್ಕಿ ವರಣ್ ಮಾತನಾಡಿ, ನಿರ್ದೇಶನ ನನ್ನ ಕನಸು. ಆ ಕನಸನ್ನು ನನಸು ಮಾಡಿದ ನಿರ್ಮಾಪಕರಿಗೆ ನಾನು ಆಭಾರಿ. ಸೂರಿ ಅವರ ಬಳಿ ಹತ್ತು ವರ್ಷ ಕೆಲಸ ಮಾಡಿರುವ ಅನುಭವವಿದ್ದ ಹಿನ್ನೆಲೆ ನಿರ್ದೇಶನ ನನಗೆ ಅಷ್ಟು ಕಷ್ಟವಾಗಲಿಲ್ಲ. ಆದ್ರೆ ನಿರ್ದೇಶನ ಹಾಗೂ ನಟನೆ ಎರಡೂ ಒಟ್ಟಿಗೆ ನಿಭಾಯಿಸುವುದು ಸ್ವಲ್ಪ ಕಷ್ಟವೇ. ಆದರೆ, ನಮ್ಮ ಚಿತ್ರತಂಡದ ಸಹಕಾರದಿಂದ "ಕಾಲಾಪತ್ಥರ್" ನಾವು ಅಂದುಕೊಂಡ ಹಾಗೆ ಅದ್ಭುತವಾಗಿ ಮೂಡಿಬಂದಿದೆ. ಏನಾದರೂ ಹೊಸತು ಮಾಡಬೇಕು ಎಂದೆನಿಸಿ "ಸೌಂಡ್ಸ್ ಆಫ್ ಕಾಲಾಪತ್ಥರ್" ವಿಡಿಯೋವನ್ನು ಇಂದು ಬಿಡುಗಡೆ ಮಾಡಿದ್ದೇವೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. "ಕಾಲಾಪತ್ಥರ್" ಶೀರ್ಷಿಕೆ ಬಗ್ಗೆ ಹೇಳಿದರೆ, ಕಥೆ ಹೇಳಿದಂತೆ. ಹಾಗಾಗಿ ಶೀರ್ಷಿಕೆ ಬಗ್ಗೆ ಸಿನಿಮಾ ನೋಡಿದ ಮೇಲೆ ನಿಮಗೆ ತಿಳಿಯುವುದು ಎಂದು ತಿಳಿಸಿದರು.

dhanya ramkumar
ಧನ್ಯಾ ರಾಮ್​ಕುಮಾರ್

ಇದನ್ನೂ ಓದಿ: 'ನಾನು ಈವರೆಗೂ ಕಾಣಿಸಿಕೊಂಡಿರದ ಪಾತ್ರವಿದು': ಗೋಲ್ಡನ್ ಸ್ಟಾರ್ ಗಣೇಶ್

ನಟಿ ಧನ್ಯಾ ರಾಮ್​ಕುಮಾರ್ ಮಾತನಾಡಿ ನಾನು ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಗಂಗಾ ಎಂಬ ಹೆಸರಿನ ಶಿಕ್ಷಕಿ ಪಾತ್ರ ನನ್ನದು ಎಂದು ಹೇಳಿದರು. ಇನ್ನೂ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮಾತನಾಡಿ, ಚಿತ್ರದಲ್ಲಿ ಐದು ಹಾಡುಗಳಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಹಾಗೂ ಪ್ರಮೋದ್ ಮರವಂತೆ ಗೀತರಚನೆ ಮಾಡಿದ್ದಾರೆ. ವಿಜಯ್ ಪ್ರಕಾಶ್, ಸಾಯಿ ವಿಘ್ನೇಶ್, ಅಭಿಷೇಕ್, ಐಶ್ವರ್ಯ ರಂಗರಾಜನ್, ಶಿವಾನಿ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಹಾಡುಗಳನ್ನು ಹಾಡಿದ್ದಾರೆ. ಇಂದು ಬಿಡುಗಡೆಯಾದ "ಸೌಂಡ್ಸ್ ಆಫ್ ಕಾಲಾಪತ್ಥರ್" ವಿಕ್ಕಿ ವರುಣ್ ಅವರ ಕಾನ್ಸೆಪ್ಟ್. ‌ಅದರಂತೆ ಹಾಡುಗಳು ಮೂಡಿ ಬಂದಿವೆ ಎಮದು ತಿಳಿಸಿದರು.

Kaalapatthar
ವಿಕ್ಕಿ ವರುಣ್ - ಧನ್ಯಾ ರಾಮ್​ಕುಮಾರ್

ಇದನ್ನೂ ಓದಿ: ದೇಶಾದ್ಯಂತ ಜವಾನ್​ ಸದ್ದು: ಚಿತ್ರಮಂದಿರಗಳತ್ತ ಪ್ರೇಕ್ಷಕರ ಸಂಭ್ರಮಾಚರಣೆ - ಹುಚ್ಚೆದ್ದು ಕುಣಿದ ಫ್ಯಾನ್ಸ್!

ಈ ಚಿತ್ರವನ್ನು ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಎಂಬ ನಿರ್ಮಾಪಕರು ನಿರ್ಮಾಣ ಮಾಡದ್ದಾರೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂಬುದು ನಿರ್ಮಾಪಕರು ಸೇರಿದಂತೆ ಚಿತ್ರತಂಡದ ವಿಶ್ವಾಸ. ಶೀಘ್ರದಲ್ಲೇ ಕಾಲಾಪತ್ಥರ್ ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.