ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟರಾದ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ನಟನೆಯ ರೊಮ್ಯಾಂಟಿಕ್ ಸಿನಿಮಾ 'ಸತ್ಯಪ್ರೇಮ್ ಕಿ ಕಥಾ' ಇಂದು ಅದ್ದೂರಿಯಾಗಿ ತೆರೆ ಕಂಡಿದೆ. ಈ ಸಿನಿಮಾ ಪ್ರದರ್ಶನ ಸಮಾರಂಭದಲ್ಲಿ ಕಿಯಾರಾ ಜೊತೆ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಆಗಮಿಸಿದ್ದರು. ಇದು ವಿಶೇಷವಾಗಿ ಗಮನ ಸೆಳೆದಿದೆ.
ಬಾಲಿವುಡ್ನ ಬ್ಯೂಟಿಫುಲ್ ದಂಪತಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ. ಇವರಿಬ್ಬರು ಪರಸ್ಪರ ಎಲ್ಲಾ ವಿಷಯದಲ್ಲೂ ಪ್ರೋತ್ಸಾಹ ನೀಡುತ್ತಾ ಪರ್ಫೆಕ್ಟ್ ಕಪಲ್ ಎನಿಸಿಕೊಂಡಿದ್ದಾರೆ. ಅದಕ್ಕೊಂದು ಉದಾಹರಣೆ ಎಂಬಂತೆ, ಮುಂಬೈನಲ್ಲಿ 'ಸತ್ಯಪ್ರೇಮ್ ಕಿ ಕಥಾ' ಪ್ರದರ್ಶನಕ್ಕೆ ಕಿಯಾರಾ ಅಡ್ವಾಣಿ ಜೊತೆಗೆ ಸಿದ್ದಾರ್ಥ್ ಮಲ್ಹೋತ್ರಾ ಕೂಡ ಆಗಮಿಸಿದ್ದರು. ಕಾರ್ತಿನ್ ಆರ್ಯನ್ ಸೇರಿದಂತೆ ಚಿತ್ರತಂಡವರು ಪ್ರದರ್ಶನದ ವೇಳೆ ಹಾಜರಿದ್ದರು. ಆದರೆ ನೆಟಿಜನ್ಗಳ ಗಮನ ಸೆಳೆದಿದ್ದು ಮಾತ್ರ, ಸಿದ್ದಾರ್ಥ್ ತಮ್ಮ ಪತ್ನಿ ಕಿಯಾರಾ ಅವರನ್ನು ಹುರಿದುಂಬಿಸಲು ಕಾರ್ಯಕ್ರಮಕ್ಕೆ ಬಂದಿದ್ದು.
ಕಾರ್ಯಕ್ರಮಕ್ಕೆ ಆಗಮಿಸಿದ ದಂಪತಿ ಕೈ ಕೈ ಹಿಡಿದುಕೊಂಡಿದ್ದು ಕಂಡುಬಂತು. ಇಬ್ಬರೂ ಕೂಡ ವೈಟ್ ಡ್ರೆಸ್ ಧರಿಸಿದ್ದರು. ಕಿಯಾರಾ ಸೆಲ್ವಾರ್ ಸೂಟ್ನೊಂದಿಗೆ ಮಿಂಚಿದರೆ, ಸಿದ್ದಾರ್ಥ್ ಬಿಳಿ ಟೀ ಶರ್ಟ್ಗೆ ಪಿಸ್ತಾ ಓವರ್ ಕೋಟ್ ಹಾಕಿ ಕಂಗೊಳಿಸಿದರು. ದಂಪತಿಯೊಂದಿಗೆ ಕಿಯಾರಾ ಪೋಷಕರು ಜೊತೆಗಿದ್ದರು.
ಇದನ್ನೂ ಓದಿ: ಜರಾ ಹಟ್ಕೆ ಜರಾ ಬಚ್ಕೆ: ತೆರೆ ಕಂಡು 28 ದಿನ; ಮುಂದುವರಿದ ಉತ್ತಮ ಪ್ರದರ್ಶನ
ಸತ್ಯಪ್ರೇಮ್ ಕಿ ಕಥಾ ಕುರಿತು ಹೇಳುವುದಾದರೆ, ಚಿತ್ರವು ಜೂನ್ 29 ರಂದು (ಇಂದು) ಬಿಡುಗಡೆಯಾಗಿದೆ. ಸಾಜಿದ್ ನಾಡಿಯಾಡ್‌ವಾಲಾ ನಿರ್ಮಿಸಿದ್ದಾರೆ ಮತ್ತು ಸಮೀರ್ ವಿದ್ವಾನ್ಸ್ ನಿರ್ದೇಶಿಸಿದ್ದಾರೆ. ಕಾರ್ತಿಕ್ ಕಿಯಾರಾ ಅವರ ಭೂಲ್ ಭುಲೈಯಾ 2 ನಂತರ, ಈ ಚಿತ್ರವೂ ಬ್ಲಾಕ್ಬಸ್ಟರ್ ಆಗಲಿದೆ. ಚಿತ್ರದಲ್ಲಿ ಕಾರ್ತಿಕ್, ಕಿಯಾರಾ ಅಲ್ಲದೇ ಸುಪ್ರಿಯಾ ಪಾಠಕ್ ಕಪೂರ್, ಗಜರಾಜ್ ರಾವ್, ಸಿದ್ಧಾರ್ಥ್ ರಂಧೇರಿಯಾ, ಅನೂರಾಧಾ ಪಟೇಲ್, ರಾಜ್ಪಾಲ್ ಯಾದವ್, ನಿರ್ಮಿತೆ ಸಾವಂತ್ ಮತ್ತು ಶಿಖಾ ತಲ್ಸಾನಿಯಾ ಸಹ ನಟಿಸಿದ್ದಾರೆ.
ಚಿತ್ರಕಥೆ ಏನು?: ಕಾರ್ತಿಕ್ ಕಿಯಾರಾಳನ್ನು ಮೆಚ್ಚಿಸಲು ಪ್ರಯತ್ನಿಸುವುದು, ಅವಳನ್ನು ಮದುವೆಗಾಗಿ ಒತ್ತಾಯಿಸುವುದು ಎಲ್ಲಾ ಕಂಡುಬರುತ್ತದೆ. ಕೊನೆಗೆ ಅವರಿಬ್ಬರು ಪ್ರೀತಿಸಿ ಮದುವೆಯಾಗುತ್ತಾರೆ. ಆ ನಂತರ ಅವರಿಬ್ಬರು ಜೊತೆಯಾಗಿ ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಮದುವೆಯ ನಂತರದ ಪ್ರೀತಿಯ ಕಲ್ಪನೆಯನ್ನು ಚಿತ್ರ ಬಿಂಬಿಸುತ್ತದೆ.
ಇಂದು ಚಿತ್ರ ನೋಡಿದ ನಂತರ ಪ್ರೇಕ್ಷಕರಿಂದ ಟ್ವಿಟರ್‌ನಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಗಮನಿಸಿದರೆ, ಚಿತ್ರವು ಮೊದಲ ದಿನವೇ 10 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಚಿತ್ರದ ಆರಂಭಿಕ ದಿನದ ಗಳಿಕೆ 7-8 ಕೋಟಿ ರೂ. ಆಗಲಿದೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ. ಭಾನುವಾರದ ವೇಳೆಗೆ ಚಿತ್ರ 40 ರಿಂದ 50 ಕೋಟಿ ರೂಪಾಯಿಗಳಿಗೂ ಹೆಚ್ಚು ವ್ಯವಹಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Kaun Banega Crorepati: ಮತ್ತೆ ಬಂತು ಕೌನ್ ಬನೇಗಾ ಕರೋಡ್ಪತಿ! ಸೀಸನ್ 15 ಶೀಘ್ರದಲ್ಲೇ ಆರಂಭ