ದೊಡ್ಮನೆ ಮಕ್ಕಳಾದ ಪುನೀತ್ ರಾಜ್ಕುಮಾರ್ ಮತ್ತು ಶಿವ ರಾಜ್ಕುಮಾರ್ ಒಂದು ಸುಂದರ ಕನಸು ಕಂಡಿದ್ದರು. ಅದ್ರೆ ಆ ಕನಸು ಕೊನೆಗೂ ನನಸಾಗಲಿಲ್ಲ. ವಿಧಿಯಾಟಕ್ಕೆ ಅಣ್ಣಾವ್ರ ಮಕ್ಕಳ ಕನಸು ಕಮರಿಹೋಗಿದೆ.
ಅಪ್ಪು ಅನ್ನೋ ಅರಸ ಇಂದು ನಮ್ಮೊಂದಿಗಿದ್ದಿದ್ದರೆ ಸಾಲು ಸಾಲು ಸಿನಿಮಾ ನಿರ್ಮಾಣವಾಗುತ್ತಿದ್ದವು. ಅದ್ರೆ ಅಪ್ಪು ಆಕಸ್ಮಿಕ ನಿಧನ ಅಣ್ಣಾವ್ರ ಮಕ್ಕಳ ಕನಸಿನ ಜೊತೆಗೆ ಅಭಿಮಾನಿ ದೇವರುಗಳ ಆಶಾಗೋಪುರವೇ ಕುಸಿದು ಬೀಳುವಂತೆ ಮಾಡಿದೆ. ಇದರ ನಡುವೆ ಅಪ್ಪು ಪರಿಸರ ಕಾಳಜಿಯಲ್ಲಿ ಮಾಡಿದ್ದ ಗಂಧದಗುಡಿ ಚಿತ್ರವನ್ನು ಅವರ ಮಡದಿ ಅಶ್ವಿನಿ ಅವರು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಮೂಲಕ ಪತಿ ಕನಸಿಗೆ ಜೀವ ತುಂಬಿದ್ರು.
ಪುನೀತ್ ರಾಜ್ಕುಮಾರ್ ಸಾಲು ಸಾಲು ಚಿತ್ರಗಳಿಗೆ ಸಹಿ ಮಾಡಿದ್ರು. ಹೊಂಬಾಳೆ ಫಿಲ್ಮ್ಸ್ನಲ್ಲಿ ದ್ವಿತ್ವ ಸಂತೋಷ್ ಆನಂದ್ ರಾಮ್ ನಿರ್ಮಾಣದ ಚಿತ್ರ ಹಾಗೂ ಜಯಣ್ಣ ಬ್ಯಾನರ್ನಡಿಯ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇವುಗಳ ಜೊತೆ ಹೆಬ್ಬುಲಿ ಕೃಷ್ಣ ನಿರ್ದೇಶನದ ಚಿತ್ರಕ್ಕೂ ಒಪ್ಪಿಗೆ ಸೂಚಿಸಿದ್ದರು. ಇನ್ನೇನು ಈ ಎಲ್ಲಾ ಚಿತ್ರಗಳ ಶೂಟಿಂಗ್ ಶುರುವಾಗಬೇಕು ಅನ್ನೋವಷ್ಟರಲ್ಲಿ ಅಪ್ಪು ತಮ್ಮ ಜೀವನ ಜರ್ನಿಯನ್ನೇ ಮುಗಿಸಿ ಬಾರದ ಲೋಕಕ್ಕೆ ಪಯಣಿಸಿದರು.
ಇನ್ನು, ಶಿವಣ್ಣ ಜೊತೆ ಒಂದು ಸಿನಿಮಾ ಮಾಡುವ ಪ್ಲಾನ್ ಹಾಕಿಕೊಂಡಿದ್ದ ಅಪ್ಪು, ಒಂದೆರಡು ಕಥೆಯನ್ನು ಕೇಳಿದ್ರಂತೆ. ಈ ವಿಚಾರವನ್ನು ಸ್ವತಃ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅವರೇ ರಿವೀಲ್ ಮಾಡಿದ್ದಾರೆ. ವೇದ ಚಿತ್ರ ರಿಲೀಸ್ ವೇಳೆ ಮಾತನಾಡಿರುವ ಶಿವಣ್ಣ, ವೇದ ಚಿತ್ರದ ಕಥೆ ಅಪ್ಪುಗೆ ಗೊತ್ತಿತ್ತು. ಅಪ್ಪುಗೆ ಚಿತ್ರದ ಕಥೆ ಮತ್ತು ಟೈಟಲ್ ಎರಡು ಇಷ್ಟ ಆಗಿತ್ತು. ಅಲ್ಲದೇ ಗೀತಾ ಪಿಕ್ಚರ್ಸ್ ಅನ್ನು ಅಪ್ಪು ಕೈಯಲ್ಲೇ ಲಾಂಚ್ ಮಾಡಿಸಲು ಎಲ್ಲಾ ತಯಾರಿ ಕೂಡ ಆಗಿತ್ತು. ಗೀತಾ ಪಿಕ್ಚರ್ಸ್ ಇಲ್ಲ ಪಿಆರ್ಕೆ ಪ್ರೊಡಕ್ಷನ್ನಲ್ಲಿ ಅಪ್ಪು ಮತ್ತು ನಾನು ಇಬ್ಬರೂ ಒಟ್ಟಿಗೆ ನಟಿಸಲು ನಿರ್ಧರಿಸಿ ಎರಡು ಕಥೆಯನ್ನು ಕೇಳಿದ್ದೆವು. ಆದ್ರೆ ಆ ಕಥೆ ಫೈನಲ್ ಆಗದ ಕಾರಣ ನಿರ್ದೇಶಕ ಹರ್ಷ ಅವರಿಗೆ ಬೇರೆ ಕಥೆ ಮಾಡಲು ಹೇಳಿದ್ದೆವು. ಅಷ್ಟರಲ್ಲಿ ಅಪ್ಪು ನಮ್ಮನ್ನು ಬಿಟ್ಟು ಹೋದ ಅಂತ ಶಿವಣ್ಣ ಭಾವುಕರಾದರು.
ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯ ಪಠ್ಯದಲ್ಲಿ ಪುನೀತ್ ರಾಜ್ಕುಮಾರ್ ವಿಷಯ