ಕನ್ನಡ ಚಿತ್ರರಂಗದಲ್ಲಿ ಸೀಕ್ವೆಲ್ ಸಿನಿಮಾಗಳ ಜಮಾನ ಜೋರಾಗಿದೆ. ನಟ ರಮೇಶ್ ಅರವಿಂದ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿವಾಜಿ ಸುರತ್ಕಲ್ ಚಿತ್ರ 2020ರಲ್ಲಿ ಬಿಡುಗಡೆಯಾಗಿ ಸಿನಿ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ 'ಶಿವಾಜಿ ಸುರತ್ಕಲ್ 2' ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಜ್ಜಾಗಿದೆ. ನಿನ್ನೆ ಚಿತ್ರದ ಟ್ವಿಂಕಲ್ ಟ್ವಿಂಕಲ್ ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಕಾಶ್ ಶ್ರೀವತ್ಸ ಬರೆದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇಶಾ ಸುಚಿ ಹಾಗೂ ಜೂಡಾ ಸ್ಯಾಂಡಿ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ.
ಸಿನಿಮಾ ಬಗ್ಗೆ ಮಾತನಾಡಿರುವ ನಟ ರಮೇಶ್ ಅರವಿಂದ್, "ಶಿವಾಜಿ ಸುರತ್ಕಲ್ 1 ಚಿತ್ರವನ್ನು ನಮ್ಮ ಹಾಗೂ ರಾಹುಲ್ ದ್ರಾವಿಡ್ ಕುಟುಂಬದವರು ಇದೇ ಜಾಗದಲ್ಲಿ ಒಟ್ಟಿಗೆ ಕುಳಿತು ನೋಡಿದ್ದೆವು. ಈಗ ಶಿವಾಜಿ ಸುರತ್ಕಲ್ 2 ತೆರೆಗೆ ಬರಲು ಸಿದ್ಧವಾಗಿದೆ. ಶಿವಾಜಿ ಯಾವುದಾದರೂ ಕೇಸ್ ತೆಗೆದುಕೊಂಡರೆ "ಒಂದಾ ಜೈಲಿಗೆ, ಇಲ್ಲವಾ ಸ್ಮಶಾನಕ್ಕೆ" ಎಂದು ಪ್ರಸಿದ್ಧಿ. ಈ ಸಿನಿಮಾದಲ್ಲಿ ಶಿವಾಜಿ ಯಾವ ಕೇಸ್ ತೆಗೆದುಕೊಳ್ಳುತ್ತಾನೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಬಹಳ ಉತ್ತಮವಾಗಿದೆ, ಚಿತ್ರ ಚೆನ್ನಾಗಿ ಮೂಡಿ ಬಂದಿದೆ" ಎಂದರು.
- " class="align-text-top noRightClick twitterSection" data="">
ಇದನ್ನೂ ಓದಿ : ಚಿತ್ರರಂಗದಲ್ಲಿ 30 ವರ್ಷದ ಸಾಧನೆ - ನಟ ರಮೇಶ್ ಅರವಿಂದ್ಗೆ ಗೌರವ ಡಾಕ್ಟರೇಟ್
ಇನ್ನು ಶಿವಾಜಿ ಸುರತ್ಕಲ್ 2 ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಹಾಡಿನಲ್ಲಿ ಕಾಣಿಸಿಕೊಂಡಿರುವ ಸಂಗೀತ ಶೃಂಗೇರಿ, ನಟರಾದ ರಘು ರಮಣಕೊಪ್ಪ, ವಿನಾಯಕ್ ಜೋಶಿ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರವನ್ನು ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ : ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿಗೆ ನಟ ರಮೇಶ್ ಅರವಿಂದ್ ಆಯ್ಕೆ
"ಈ ಚಿತ್ರದಲ್ಲಿ ರಮೇಶ್ ಅವರ ಪಾತ್ರ ನೋಡಿದ್ರೆ ನನಗೆ ಅಮೃತ ವರ್ಷಿಣಿ ಸಿನಿಮಾದ ಪಾತ್ರ ನೆನಪಾಗುತ್ತದೆ. ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ, ಜನ ಮೆಚ್ಚಿಕೊಳ್ಳುವ ಭರವಸೆಯಿದೆ" ಎನ್ನುತ್ತಾರೆ ನಿರ್ಮಾಪಕ ಅನೂಪ್ ಗೌಡ.
ಇದನ್ನೂ ಓದಿ : ಯಕ್ಷಗಾನ ವೇಷಭೂಷಣ ತೊಟ್ಟ ಎವರ್ಗ್ರೀನ್ ಹೀರೋ ರಮೇಶ್ ಅರವಿಂದ್
ಸದ್ಯ ಬಿಡುಗಡೆಯಾಗಿರುವ ಟ್ವಿಂಕಲ್ ಎಂಬ ಹಾಡಿನಲ್ಲಿ ನಟಿ ಸಂಗೀತ ಶೃಂಗೇರಿ ಹೆಜ್ಜೆ ಹಾಕಿದ್ದಾರೆ. ಇದರ ಜೊತೆಗೆ ಸಾಂಗ್ನಲ್ಲಿ ರಮೇಶ್ ಅರವಿಂದ್ ಕೂಡ ಕಾಣಿಸಿಕೊಂಡಿದ್ದಾರೆ. ಜೂಡಾ ಸ್ಯಾಂಡಿ ಸೊಗಸಾದ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಸದ್ಯಕ್ಕೆ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರುವ ಶಿವಾಜಿ ಸುರತ್ಕಲ್ ಸಿನಿಮಾ ಮುಂಬರುವ ಏಪ್ರಿಲ್ 14ರಂದು ತೆರೆಕಾಣಲಿದ್ದು, ಸಿನಿಮಾ ಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದೆ.
ಇದನ್ನೂ ಓದಿ: ಹೊಸ ಪ್ರತಿಭೆಗಳು ಹೊತ್ತು ತಂದ ಸಿರಿ ಲಂಬೋದರ ವಿವಾಹ ಟೀಸರ್ಗೆ ರಮೇಶ್ ಅರವಿಂದ್ ಫಿದಾ