ETV Bharat / entertainment

ಲೈಂಗಿಕ ದೌರ್ಜನ್ಯ ಆರೋಪ.. ಸಾಜಿದ್​ ಖಾನ್​ ವಿರುದ್ಧ ನಟಿ ಶೆರ್ಲಿನ್​ ಚೋಪ್ರಾ ದೂರು - ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ

ನಿರ್ದೇಶಕ, ಬಿಗ್​ಬಾಸ್​ಗೆ ಸ್ಪರ್ಧಿ ಸಾಜಿದ್ ಖಾನ್​ ವಿರುದ್ಧ ಬಾಲಿವುಡ್​ ನಟಿ ಶೆರ್ಲಿನ್​ ಚೋಪ್ರಾ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಮುಂಬೈನ ಜುಹು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

sherlyn-chopra-files-complaint-against-sajid-khan
ಸಾಜಿದ್​ ಖಾನ್​ ವಿರುದ್ಧ ನಟಿ ಶೆರ್ಲಿನ್​ ಚೋಪ್ರಾ ದೂರು
author img

By

Published : Oct 20, 2022, 10:59 AM IST

ಮುಂಬೈ: ನಿರ್ದೇಶಕ ಸಾಜಿದ್​ ಖಾನ್​ ವಿರುದ್ಧ ಮೀಟೂ ಆರೋಪ ಮಾಡಿದ್ದ ಬಾಲಿವುಡ್​ ನಟಿ ಶೆರ್ಲಿನ್​ ಚೋಪ್ರಾ ಅವರು ಇಂದು ಮುಂಬೈನ ಜುಹು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾಜಿದ್​ ಖಾನ್​ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿ ಕೇಸ್​ ದಾಖಲಿಸಿದ್ದಾರೆ.

ಹಿಂದಿ ಅವತರಣಿಗೆಯ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟಿರುವ ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್​ ಚೋಪ್ರಾ ಈಚೆಗಷ್ಟೇ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದರು. ಸಾಜಿದ್​ ಖಾನ್​ಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕಾಗಿ ನನಗೆ ಬಾಲಿವುಡ್​ ಸಿನಿಮಾ ಆಫರ್​ಗಳು ಸಿಗದಂತೆ ಮಾಡಿದರು.

ಚಿತ್ರರಂಗದಿಂದ ನನ್ನನ್ನು ದೂರವಿಟ್ಟರು. ವೆಬ್​ಸಿರೀಸ್​ ವೇಳೆ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದೆಲ್ಲಾ ನಟಿ ಶೆರ್ಲಿನ್​ ಚೋಪ್ರಾ ಆರೋಪ ಮಾಡಿದ್ದರು. ಇದೀಗ ಅಧಿಕೃತವಾಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಜಿದ್​ ಖಾನ್​ ಖ್ಯಾತ ನಿರ್ದೇಶಕಿ ಫರಾ ಖಾನ್​ ಅವರ ಸಹೋದರರಾಗಿದ್ದಾರೆ. ಇವರ ವಿರುದ್ಧ ಶೆರ್ಲಿನ್​ ಚೋಪ್ರಾ ಅಲ್ಲದೇ, 9 ಮಂದಿ ನಟಿಯರು ಮೀಟೂ ಆರೋಪ ಮಾಡಿದ್ದಾರೆ.

ಓದಿ: ಬಿಗ್ ​​ಬಾಸ್​ ಮನೆಯಿಂದ ಹೊರಹೋಗ್ತಾರಾ ಮೀಟೂ ಆರೋಪಿ ಸಾಜಿದ್​ ಖಾನ್?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.