ಬಾರ್ಸಿಲೋನಾ: ಹಾಲಿವುಡ್ ಪಾಪ್ ತಾರೆ ಶಕೀರಾ ಮತ್ತು ಸ್ಪೇನ್ನ ಫುಟ್ಬಾಲ್ ಆಟಗಾರ ಗೆರಾರ್ಡ್ ಪಿಕ್ ಬೇರೆಯಾಗಲು ನಿರ್ಧರಿಸಿದ್ದಾರೆ.
ಗೆರಾರ್ಡ್ ಪಿಕ್ ಜೊತೆಗಿನ 12 ವರ್ಷಗಳ ತಮ್ಮ ಸಂಬಂಧವನ್ನು ಮುರಿದುಕೊಳ್ಳಲು ಸ್ವತಃ ಶಕೀರಾ ಮುಂದಾಗಿದ್ಧಾರೆ. ಇದಕ್ಕೆ ಕಾರಣ ಗೆರಾರ್ಡ್ ಪೀಕ್ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನುವುದು. ಹಲವು ದಿನಳಿಂದಲೂ ಶಕೀರಾ ಮತ್ತು ಗೆರಾರ್ಡ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇತ್ತ, ಶಕೀರಾ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದನ್ನು ಗೆರಾರ್ಡ್ ನಿಲ್ಲಿಸಿದ್ದಾರೆ. 2010ರ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನಿಂದ ಶಕೀರಾ ಮತ್ತು ಪಿಕೆ ಬೆಸುಗೆ ಬೆಳೆದಿತ್ತು. ಇದಾದ ಬಳಿಕ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಸದ್ಯ ಗೆರಾರ್ಡ್ ಪಿಕ್ ತನ್ನ ಮತ್ತೊಬ್ಬ ಸ್ನೇಹಿತೆಯೊಂದಿಗೆ ಕಾಲ ಕಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.