ದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶನೆಲ್ ಇರಾನಿ ಮತ್ತು ಅರ್ಜುನ್ ಭಲ್ಲಾ ಅವರು ಕೆಲ ದಿನಗಳ ಹಿಂದೆ ಹಸೆಮಣೆ ಏರಿದ್ದಾರೆ. ಅದ್ಧೂರಿ ವಿವಾಹದ ನಂತರದ ಸಂಭ್ರಮಾಚರಣೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಇದೇ ಫೆಬ್ರವರಿ 9ರಂದು ಶನೆಲ್ ಇರಾನಿ ಮತ್ತು ಅರ್ಜುನ್ ಭಲ್ಲಾ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನ ಆರಂಭಿಸಿದ್ದಾರೆ. ರಾಜಸ್ಥಾನದ ಜೋಧ್‌ಪುರ ನಗರದ ಖಿನ್ವಸರ್‌ನಲ್ಲಿ ವಿವಾಹ ಸಮಾರಂಭ ನಡೆಯಿತು. ಮದುವೆಯಾದ ಕೆಲ ದಿನಗಳ ಬಳಿಕ ಆರತಕ್ಷತೆ ಸಮಾರಂಭ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಬಾಲಿವುಡ್ ಗಣ್ಯರು ಭಾಗಿ ಆಗಿದ್ದರು.
![Smriti Irani daughter Reception](https://etvbharatimages.akamaized.net/etvbharat/prod-images/17787235_thumbndsfre.jpg)
ಸೂಪರ್‌ಸ್ಟಾರ್ ಶಾರುಖ್ ಖಾನ್, ನಟಿ ಮೌನಿ ರಾಯ್ ಮತ್ತು ಪತಿ ಸೂರಜ್ ನಂಬಿಯಾರ್ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇವರಲ್ಲದೇ ಹಿಂದಿ ಚಿತ್ರರಂಗದ ಕೆಲ ತಾರೆಯರು ಕೂಡ ಉಪಸ್ಥಿತರಿದ್ದರು. ಈ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
- " class="align-text-top noRightClick twitterSection" data="
">
ಶನೆಲ್ ಇರಾನಿ ಮತ್ತು ಅರ್ಜುನ್ ಭಲ್ಲಾ ರಿಸೆಪ್ಷನ್ ಪಾರ್ಟಿ ಫೊಟೋವನ್ನು ನಟಿ ಮೌನಿ ರಾಯ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೌನಿ ರಾಯ್ ಜೊತೆಗೆ ಪತಿ ಸೂರಜ್ ನಂಬಿಯಾರ್, ನವದಂಪತಿಗಳಾದ ಶನೆಲ್ ಇರಾನಿ - ಅರ್ಜುನ್ ಭಲ್ಲಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಣಿಸಿಕೊಂಡಿದ್ದಾರೆ.
ಫೋಟೋದಲ್ಲಿ ಕಿಂಗ್ ಖಾನ್ ಶಾರುಖ್ ಕಪ್ಪು ಸೂಟ್ ಧರಿಸಿ ಸಖತ್ ಹ್ಯಾಂಡ್ಸಂ ಆಗಿ ಕಾಣಿಸಿಕೊಂಡಿದ್ದಾರೆ. ಸ್ಮೃತಿ ಇರಾನಿ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಬಾಲಿವುಡ್ ಬ್ಯೂಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಕೂಡ ಸಖತ್ ಸ್ಟೈಲಿಶ್ ಲುಕ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಈ ಫೋಟೋಗಳಿಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
![Smriti Irani daughter Reception](https://etvbharatimages.akamaized.net/etvbharat/prod-images/17787235_thumbn.jpg)
ಪಠಾಣ್ ಕಲೆಕ್ಷನ್: ಇನ್ನೂ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಕ್ರೇಜ್ ಕಡಿಮೆ ಆಗಿಲ್ಲ. ಕಲೆಕ್ಷನ್ ವಿಚಾರದಲ್ಲಿ ದಾಖಲೆ ಮುಂದುವರಿಸುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಜೊತೆ ಶಾರುಖ್ ನಟಿಸಿರುವ ಪಠಾಣ್ ಸಿನಿಮಾ ಜನವರಿ 25ರಂದು ತೆರೆಕಂಡು, ಈವರೆಗೆ ವಿಶ್ವದಾದ್ಯಂತ 976 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಆದಿಯೋಗಿ ಪ್ರತಿಮೆಯ ದರ್ಶನ ಪಡೆದ ಸೂಪರ್ ಸ್ಟಾರ್ ರಜನಿಕಾಂತ್
ನಿನ್ನೆವರೆಗಿನ (ಫೆಬ್ರವರಿ 17) ಯಶ್ ರಾಜ್ ಫಿಲ್ಮ್ಸ್ ಮಾಹಿತಿ ಪ್ರಕಾರ, ದೇಶದಲ್ಲಿ ಪಠಾಣ್ ಚಿತ್ರ 505.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಆದರೆ ದೇಶೀಯ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 609 ಕೋಟಿ ರೂಪಾಯಿ ಆಗಿದ್ದರೆ ಹೊರದೇಶಗಳಲ್ಲಿ ಒಟ್ಟು 23 ದಿನಗಳಲ್ಲಿ 367 ಕೋಟಿ ರೂ. ಸಂಗ್ರಹ ಮಾಡಿದೆ ಎಂಬ ಮಾಹಿತಿ ನೀಡಿತ್ತು.
ಇದನ್ನೂ ಓದಿ: 'ನಮಾಮಿ ನಮಾಮಿ'...ನಟರಾಜನಿಗೆ ಭಕ್ತಿ ಅರ್ಪಿಸಿದ ಶ್ರೀಯಾ ಶರಣ್