ETV Bharat / entertainment

Jawan Grand Event: ತಮಿಳು ನೆಲದಲ್ಲಿ ಕಿಂಗ್​ ಖಾನ್​ ಶಾರುಖ್​ ಹವಾ -​ ವಿಡಿಯೋ ನೋಡಿದ್ರಾ?

author img

By ETV Bharat Karnataka Team

Published : Aug 30, 2023, 4:17 PM IST

Updated : Aug 30, 2023, 4:46 PM IST

Jawan Pre Release event: ಚೆನ್ನೈನ ಶ್ರೀ ಸಾಯಿರಾಮ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಜವಾನ್​ ಪ್ರೀ ರಿಲೀಸ್​ ಈವೆಂಟ್​ ನಡೆಯಲಿದ್ದು, ಶಾರುಖ್​ ಖಾನ್​ ಆಗಮಿಸಿದ್ದಾರೆ.

Jawan Pre Release event
ಜವಾನ್​ ಪ್ರೀ ರಿಲೀಸ್​ ಈವೆಂಟ್

ಬಾಲಿವುಡ್​ ಕಿಂಗ್​ ಖಾನ್​​ ಶಾರುಖ್​​ ಮತ್ತೊಮ್ಮೆ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯಲು ಸಜ್ಜಾಗಿದ್ದಾರೆ. ಪಠಾಣ್​ ಬಳಿಕ ಮತ್ತೊಂದು ಆ್ಯಕ್ಷನ್​ ಪ್ಯಾಕ್ಡ್​ ಸಿನಿಮಾದೊಂದಿಗೆ ಗಲ್ಲಾಪೆಟ್ಟಿಗೆ ದಾಖಲೆಗಳನ್ನು ಮುರಿಯಲು ಬರುತ್ತಿದ್ದಾರೆ. ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಜವಾನ್'​. ಸೆಪ್ಟೆಂಬರ್​ 7 ರಂದು ವಿಶ್ವಾದ್ಯಂತ ಚಿತ್ರಮಂದಿಗಳಲ್ಲಿ ಜವಾನ್​ ಬಿಡುಗಡೆ ಆಗಲಿದ್ದು, ಪ್ರಮೋಶನ್​​ ವರ್ಕ್ ಜೋರಾಗೇ ನಡೆಯುತ್ತಿದೆ.

ಚೆನ್ನೈ ತಲುಪಿದ ಎಸ್​ಆರ್​ಕೆ: ಇಂದು ತಮಿಳುನಾಡು ರಾಜಧಾನಿ ಚೆನ್ನೈನ ಶ್ರೀಸಾಯಿರಾಮ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಜವಾನ್​ ಪ್ರೀ ರಿಲೀಸ್​ ಈವೆಂಟ್​ ನಡೆಯಲಿದೆ. ಚಿತ್ರಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಇಂದು ಚಿತ್ರತಂಡ ಹಂಚಿಕೊಳ್ಳಲಿದೆ. ಈ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಲು ಕಿಂಗ್​ ಖಾನ್​ ಶಾರುಖ್​ ಚೆನ್ನೈಗೆ ತಲುಪಿದ್ದಾರೆ. ತಮಿಳುನಾಡು ಜನತೆ ನಟನನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ನಟನ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈವೆಂಟ್ ಫೋಟೋಗಳು ವೈರಲ್​: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ಕಂಡ ಅಭಿಮಾನಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಶಾರುಖ್​ ಅವರ ಮ್ಯಾನೇಜರ್​ ಪೂಜಾ ದದ್ಲಾನಿ ಕೂಡ ಜವಾನ್​ ಪ್ರೀ ರಿಲೀಸ್​ ಈವೆಂಟ್ ನಡೆಯುವ ವೇದಿಕೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಜವಾನ್​ ಟ್ರೆಂಡಿಂಗ್​ನಲ್ಲಿದೆ. ಶಾರುಖ್​ ಖಾನ್​ ಸಿನಿಮಾ ಎಂದ ಮೇಲೆ ಕ್ರೇಜ್​ ಕೊಂಚ ಹೆಚ್ಚೇ ಅಲ್ವೇ?. ಮತ್ತೊಂದೆಡೆ ನಿರ್ದೇಶಕ ಅಟ್ಲೀ ಈವೆಂಟ್​ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ಜವಾನ್​ ಪ್ರೀ ರಿಲೀಸ್​ ಈವೆಂಟ್ 3 ಗಂಟೆಯಿಂದ 7 ಗಂಟೆವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸೂಪರ್​ ಸ್ಟಾರ್ ಶಾರುಖ್​ ಖಾನ್​​ ಚೆನ್ನೈ ತಲುಪಿದ್ದು, ಕಾರ್ಯಕ್ರಮ ಆರಂಭಗೊಂಡಿದೆ. ಈವೆಂಟ್​ನ ವೇದಿಕೆ ಅದ್ಧೂರಿಯಾಗಿ ರೆಡಿಯಾಗಿದ್ದು, ಅದರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಇದನ್ನೂ ಓದಿ: ಜವಾನ್​ ಬಿಡುಗಡೆಗೆ ದಿನಗಣನೆ: ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಭೇಟಿ!

ಶಾರುಖ್​ ಖಾನ್​ ಕೂಡ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ X (ಹಿಂದಿನ ಟ್ವಿಟರ್​) ನಲ್ಲಿ ಸಿನಿಮಾ ಪೋಸ್ಟರ್ ಶೇರ್ ಮಾಡಿದ್ದಾರೆ. ''ವಣಕ್ಕಂ ಚೆನ್ನೈ, ನಾನು ಬರುತ್ತಿದ್ದೇನೆ. ಯುವಕರೇ, ಯುವತಿಯರೇ, ಸಾಯಿ ರಾಮ್​ ಇಂಜಿನಿಯರಿಂಗ್​ ಕಾಲೇಜ್​​ ರೆಡಿಯಾಗಿರಿ. ನಿಮ್ಮನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ'' ಎಂದು ತಿಳಿಸಿದ್ದರು. ಅಂತಿಮವಾಗಿ ನಟ ಚೆನ್ನೈಗೆ ತಲುಪಿದ್ದಾರೆ. ತಮಿಳು ನೆಲದಲ್ಲಿ ಕಿಂಗ್​ ಖಾನ್​ ಶಾರುಖ್​ ಹವಾ ಜೋರಾಗಿದ್ದು, ಸೋಷಿಯಲ್​​ ಮೀಡಿಯಾದಲ್ಲಿ ವಿಡಿಯೋಗಳು ಸಖತ್​ ಸದ್ದು ಮಾಡುತ್ತಿವೆ.

ಇದನ್ನೂ ಓದಿ: Raksha Bandhan: ಮನಮೋಹಕವಾಗಿ ರೆಡಿಯಾಗಬೇಕೆ? ಈ ನಟಿಮಣಿಯರ ಸ್ಟೈಲ್ ಟ್ರೈ ಮಾಡಿ ನೋಡಿ

Last Updated : Aug 30, 2023, 4:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.