ವಿಶ್ವಾದ್ಯಂತ ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ನಿರೀಕ್ಷೆಗೂ ಮೀರಿ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ಅಬ್ಬರದ ಓಟ ಮುಂದುವರೆಸಿದೆ. ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಮನ್ನುಗ್ಗುತ್ತಿದೆ. ಮೊದಲ ದಿನದ ಹಿಟ್ ಟಾಕ್ನಿಂದಾಗಿ ಪ್ರೇಕ್ಷಕರು ಥಿಯೇಟರ್‌ಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಅಟ್ಲೀ ನಿರ್ದೇಶನಕ್ಕೆ ಚಪ್ಪಾಳೆ, ಶಿಳ್ಳೆ ಜೋರಾಗಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 500 ಕೋಟಿ ರೂಪಾಯಿ ಗಡಿ ದಾಟುವ ಮೂಲಕ ಜವಾನ್ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಜವಾನ್ ನಾಲ್ಕನೇ ದಿನದ ಕಲೆಕ್ಷನ್: 'ಜವಾನ್' ಸಿನಿಮಾ ಸೆಪ್ಟೆಂಬರ್ 7ರಂದು ತೆರೆ ಕಂಡಿತ್ತು. ಮೊದಲ ದಿನ ದೇಶದಲ್ಲಿ 75 ಕೋಟಿ ರೂಪಾಯಿ ಕಲೆಕ್ಷನ್ನೊಂದಿಗೆ ಭರ್ಜರಿ ಓಪನಿಂಗ್ ಪಡೆಯಿತು. ಎರಡನೇ ದಿನ ಕೊಂಚ ಕಡಿಮೆ ಎನಿಸಿದರೂ 53 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನ 74 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತು. ಇದೀಗ ನಾಲ್ಕನೇ ದಿನ 81 ಕೋಟಿ ರೂಪಾಯಿ ಗಳಿಸಿದೆ. ಈವರೆಗಿನ ಅತ್ಯಧಿಕ ಕಲೆಕ್ಷನ್ ಇದಾಗಿದೆ. 4ನೇ ದಿನ ಸುಮಾರು 28.75 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ ಎಂದು ಸಿನಿಮಾ ಪಂಡಿತರು ಹೇಳುತ್ತಿದ್ದಾರೆ.
-
BREAKING:
— Manobala Vijayabalan (@ManobalaV) September 10, 2023 " class="align-text-top noRightClick twitterSection" data="
💯
💯
💯
💯
💯#Jawan ZOOMS Past ₹500 cr gross mark at the worldwide Box Office in just 4 days.
Fastest Bollywood film in the history to achieve this gigantic feat.
The star power of #ShahRukhKhan is doing wonders at the box office.
Also, Shah Rukh Khan becomes… pic.twitter.com/11hZhUgXzP
">BREAKING:
— Manobala Vijayabalan (@ManobalaV) September 10, 2023

Also, Shah Rukh Khan becomes… pic.twitter.com/11hZhUgXzPBREAKING:
— Manobala Vijayabalan (@ManobalaV) September 10, 2023
💯
💯
💯
💯
💯#Jawan ZOOMS Past ₹500 cr gross mark at the worldwide Box Office in just 4 days.
Fastest Bollywood film in the history to achieve this gigantic feat.
The star power of #ShahRukhKhan is doing wonders at the box office.
Also, Shah Rukh Khan becomes… pic.twitter.com/11hZhUgXzP
ಈ ಮೂಲಕ ಭಾರತದಲ್ಲಿ 'ಜವಾನ್' ಒಟ್ಟು 287 ಕೋಟಿ ರೂ. ಸಂಗ್ರಹಿಸಿದೆ. ವಿಶ್ವಾದ್ಯಂತ ಚಿತ್ರದ ಕಲೆಕ್ಷನ್ ನೋಡುವುದಾದರೆ, ಬಿಡುಗಡೆಯಾದ ಮೊದಲ ದಿನ 129.6 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಎರಡನೇ ದಿನ 200 ಕೋಟಿ ರೂ. ದಾಟಿದರೆ, ಮೂರನೇ ದಿನ 300 ಕೋಟಿ ರೂ. ದಾಟಿತ್ತು. ಇದೀಗ ನಾಲ್ಕನೇ ದಿನದ ಕಲೆಕ್ಷನ್ನೊಂದಿಗೆ ಚಿತ್ರವು ಒಟ್ಟು 500 ಕೋಟಿ ರೂಪಾಯಿ ಗಳಿಸಿದೆ. ಸುಮಾರು 524 ರಿಂದ 529 ಕೋಟಿ ರೂಪಾಯಿ ವಿಶ್ವದಾದ್ಯಂತ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Jawan: ಬಾಕ್ಸ್ ಆಫೀಸ್ನಲ್ಲಿ 'ಜವಾನ್' ಅಬ್ಬರ: ಅಬ್ಬಬ್ಬಾ.. ಎರಡು ದಿನದಲ್ಲಿ ಇಷ್ಟೊಂದು ಕಲೆಕ್ಷನ್
ಐದನೇ ದಿನದ ಕಲೆಕ್ಷನ್ ಲೆಕ್ಕಾಚಾರ: ನಾಲ್ಕನೇ ದಿನ ವಾರಾಂತ್ಯವಾದ್ದರಿಂದ 81 ಕೋಟಿ ರೂಪಾಯಿ ಗಳಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ. ಆದರೆ ಇಂದು ವಾರದ ಮೊದಲ ದಿನ. ಹೀಗಾಗಿ ಚಿತ್ರದ ಕಲೆಕ್ಷನ್ನಲ್ಲಿ ಕುಸಿತ ಕಾಣುವ ಸಾಧ್ಯತೆಯಿದೆ. ಜವಾನ್ 5ನೇ ದಿನದಂದು ಕೇವಲ 30 ಕೋಟಿ ರೂಪಾಯಿಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಆ ಮೂಲಕ ಭಾರತದಲ್ಲಿ ಜವಾನ್ 316.56 ಕೋಟಿ ಗಳಿಸುವ ನಿರೀಕ್ಷೆಯಿದೆ. ಇದರೊಂದಿಗೆ ಪಠಾಣ್ ಮತ್ತು ಗದರ್ 2 ನಂತರ 2023ರಲ್ಲಿ 300 ಕೋಟಿ ರೂಪಾಯಿ ದಾಟಿದ 3ನೇ ಹಿಂದಿ ಚಿತ್ರ 'ಜವಾನ್' ಆಗಲಿದೆ.
ಚಿತ್ರತಂಡ: ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಿಸಿದ 'ಜವಾನ್' ಸಿನಿಮಾಗೆ ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳಿದ್ದಾರೆ. ನಟ ಮತ್ತು ನಿರ್ದೇಶಕನ ಕಾಂಬೋ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ವಿಜಯ್ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲದೇ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿದ್ದಿ ಡೊಗ್ರಾ, ದೀಪಿಕಾ ಪಡುಕೋಣೆ, ಸಂಜಯ್ ದತ್, ಯೋಗಿ ಬಾಬು ಇದ್ದಾರೆ.
ಇದನ್ನೂ ಓದಿ: 3 ದಿನದಲ್ಲಿ ₹300 ಕೋಟಿ! 'ಜವಾನ್' ಜಬರ್ದಸ್ತ್ ಕಲೆಕ್ಷನ್